Advertisement

ಇಂಡೋನೇಷ್ಯಾದಲ್ಲಿ ಎರಡು ರೈಲುಗಳ ನಡುವೆ ಭೀಕರ ಅಪಘಾತ – 7 ಪ್ರಯಾಣಿಕರು ಸಾವು, 81 ಮಂದಿಗೆ ಗಾಯ

[ad_1]

Indonesia Train Accident

ಜಕಾರ್ತಾ: ಇಂಡೋನೇಷ್ಯಾದ (Indonesia) ಜಕಾರ್ತಾ (Jakarta) ಹೊರವಲಯದಲ್ಲಿ ಎರಡು ರೈಲುಗಳ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ 7 ಮಂದಿ ಸಾವನ್ನಪ್ಪಿದ್ದು, 81 ಮಂದಿ ಗಾಯಗೊಂಡಿದ್ದಾರೆ.

ಜಕಾರ್ತಾ ಹೊರವಲಯದ ಬೆಕಾಸಿಯಲ್ಲಿ (Bekasi) ಸೋಮವಾರ ತಡರಾತ್ರಿ ಪ್ರಯಾಣಿಕ ರೈಲು ಹಾಗೂ ಮತ್ತೊಂದು ರೈಲಿನ ನಡುವೆ ಡಿಕ್ಕಿ ಸಂಭವಿಸಿದೆ. ಅಪಘಾತದಲ್ಲಿ ಇನ್ನೂ ಹಲವು ಪ್ರಯಾಣಿಕರು ರೈಲಿನೊಳಗೆ ಸಿಲುಕಿಕೊಂಡಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಇದನ್ನೂ ಓದಿ: ಅಬ್ಬಬ್ಬಾ.. ಬೆಂಗಳೂರಿನಲ್ಲಿ ಒಂದು ಗುಂಡಿ ಮುಚ್ಚಲು 1 ಲಕ್ಷ!- ಬಯಲಾಯ್ತು ಜಿಬಿಎ ‘ದುಬಾರಿ’ ಗುಂಡಿ ಬಿಸಿನೆಸ್!

Indonesia Train Accident 1

ಲೆವೆಲ್ ಕ್ರಾಸಿಂಗ್‌ನಲ್ಲಿ ಟ್ಯಾಕ್ಸಿಯೊಂದು ಪ್ರಯಾಣಿಕರ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ ರೈಲು ಹಳಿಯಲ್ಲಿ ನಿಂತಿತ್ತು. ಇದೇ ವೇಳೆಗೆ ಮತ್ತೊಂದು ರೈಲು ಬಂದು ಪ್ರಯಾಣಿಕರ ರೈಲಿನ ಮಹಿಳೆಯರ ಬೋಗಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ಪರಿಣಾಮ ರೈಲಿನ ಬೋಗಿಗಳು ಜಖಂಗೊಂಡು 7 ಮಂದಿ ಮೃತಪಟ್ಟಿದ್ದಾರೆ. ಇನ್ನೂ ಹಲವರು ಬೋಗಿಯಲ್ಲೇ ಸಿಲುಕಿದ್ದಾರೆ. ಇಂಡೋನೇಷ್ಯಾದ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಸಮಿತಿ (ಕೆಎನ್‌ಕೆಟಿ) ಅಪಘಾತದ ತನಿಖೆ ನಡೆಸುತ್ತಿದೆ. ಇದನ್ನೂ ಓದಿ: ವಿದ್ಯುತ್ ಗ್ರಾಹಕರಿಗೆ ಗುಡ್‌ನ್ಯೂಸ್ – ಮನೆಯಿಂದಲೇ ಕರೆಂಟ್ ಬಿಲ್‌ನಲ್ಲಿ ಹೆಸರು ಬದಲಾವಣೆಗೆ ಹೊಸ ಲಿಂಕ್ ಬಿಡುಗಡೆ


[ad_2]

Source link publictv.in

Leave a Reply

Your email address will not be published. Required fields are marked *