Advertisement

ರಾತ್ರಿ ಬಿರಿಯಾನಿ ಬಳಿಕ ಕಲ್ಲಂಗಡಿ ತಿಂದು ಮಲಗಿದ ಕುಟುಂಬದ ನಾಲ್ವರು ಬೆಳಗ್ಗೆ ಸಾವು!!

[ad_1]

ರಾತ್ರಿ ವೇಳೆ ಬಿರಿಯಾನಿ ತಿಂದ ಬಳಿಕ ಕಲ್ಲಂಗಡಿ ಹಣ್ಣನ್ನು ತಿಂದು ಮಲಗಿದ ಕುಟುಂಬದ ನಾಲ್ವರು ಸದಸ್ಯರು ಬೆಳಿಗ್ಗೆ ಹೊತ್ತಿಗೆ ಸಾವನ್ನಪ್ಪಿರುವ ಘಟನೆ ಮುಂಬೈನ ಬಾಂದ್ರಾದಲ್ಲಿ ನಡೆದಿದೆ.

ಮುಂಬೈನಲ್ಲಿ, ಒಂದು ಕುಟುಂಬ ರಾತ್ರಿ ಬಿರಿಯಾನಿ ಪಾರ್ಟಿ ಮಾಡಿ, ನಂತರ ಕಲ್ಲಂಗಡಿ ತಿಂದಿತು. ಆದರೆ ಬೆಳಿಗ್ಗೆ, ಎಲ್ಲರೂ ಇದ್ದಕ್ಕಿದ್ದಂತೆ ಅಸ್ವಸ್ಥರಾಗಿ ಸಾವನ್ನಪ್ಪಿದರು. ಪೈಧುನಿಯ ನಿವಾಸಿಗಳಾದ ಅಬ್ದುಲ್ ಮತ್ತು ನಸ್ರೀನ್ ದೋಕಾಡಿಯಾ ಶನಿವಾರ ರಾತ್ರಿ ಪಾರ್ಟಿ ಮಾಡಿದ್ದರು. ಹಾಗಾಗಿ, ಮನೆಯಲ್ಲಿ ಬಿರಿಯಾನಿಯನ್ನು ವಿಶೇಷವಾಗಿ ತಯಾರಿಸಲಾಗಿತ್ತು. ಅದರಂತೆ, ರಾತ್ರಿ 10 ಗಂಟೆಯ ಸುಮಾರಿಗೆ ಒಂಬತ್ತು ಜನರು ಒಟ್ಟಿಗೆ ಊಟ ಮಾಡಿದರು. ಆದರೆ, ಇದಾದ ಕೆಲವೇ ಗಂಟೆಗಳಲ್ಲಿ ಎಲ್ಲರಿಗೂ ತೀವ್ರವಾಗಿ ವಾಂತಿ ಮತ್ತು ಹೊಟ್ಟೆನೋವು ಕಾಣಿಸಿಕೊಂಡಿದೆ. ನಂತರ, ಗಂಡ, ಹೆಂಡತಿ ಮತ್ತು ಇಬ್ಬರು ಮಕ್ಕಳು ಸಾವನ್ನಪ್ಪಿದರು. ಈ ಘಟನೆಯು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಹಾಗಾದ್ರೆ, ಈ ನಾಲ್ವರ ಸಾವಿಗೆ ಕಾರಣವೇನು? ಎಂಬುದು ಯಕ್ಷ ಪ್ರಶ್ನೆಯಾಗಿದೆ.

ಈ ಘಟನೆಗೆ ಕಾರಣ ಅಸ್ಪಷ್ಟವಾಗಿದ್ದು ಪ್ರಾಥಮಿಕ ವರದಿಗಳ ಪ್ರಕಾರ, ಇದು ಆಹಾರ ವಿಷಾಹಾರವಾಗಿ ಸಂಭವಿಸಿದ ಸಾವು ಎಂದು ಶಂಕಿಸಲಾಗಿದೆ.ಈ ಸಾವಿಗೆ ಕಲ್ಲಂಗಡಿ ಹಣ್ಣು ಸೇವನೆಯೇ ನೇರ ಕಾರಣವೇ ಅಥವಾ ಹಣ್ಣಿನ ಮೇಲೆ ಸಿಂಪಡಿಸಲಾದ ರಾಸಾಯನಿಕಗಳ ಪ್ರಭಾವವೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿಯ ನಂತರವಷ್ಟೇ ಸಾವಿನ ನಿಖರ ಕಾರಣ ತಿಳಿಯಲಿದೆ.



[ad_2]

Source link

Leave a Reply

Your email address will not be published. Required fields are marked *