Advertisement

ಮನೆಯಲ್ಲೇ ಕರೆಂಟ್ ಬಿಲ್‌ನಲ್ಲಿ ಹೆಸರು ಬದಲಾವಣೆಗೆ ಹೊಸ ಲಿಂಕ್ ಬಿಡುಗಡೆ!

[ad_1]

ವಿದ್ಯುತ್ ಬಿಲ್‌ನಲ್ಲಿನ (Electricity Bill) ಹೆಸರು ಬದಲಾವಣೆಯನ್ನು ಇಂಧನ ಇಲಾಖೆಯು ಈಗ ಮತ್ತಷ್ಟು ಸುಲಭ ಮಾಡಿದೆ. ಹೀಗಾಗಿ ಮನೆಯಲ್ಲೇ ಕುಳಿತುಕೊಂಡು ವಿದ್ಯುತ್ ಬಿಲ್‌ನಲ್ಲಿ ಹೆಸರು ಬದಲಾವಣೆ ಮಾಡಿಕೊಳ್ಳಲು ಹೊಸ ಲಿಂಕ್ ಬಿಡುಗಡೆ ಮಾಡಿದೆ 

ಇದುವರೆಗೂ ಬೇರೆ ಹೆಸರಿನಲ್ಲಿ ಇರುವ ಬಿಲ್ಡಿಂಗ್ ಖರೀದಿ ಮಾಡಿ ವಿದ್ಯುತ್ ಹೆಸರು ಬದಲಾವಣೆಗೆ ಬೆಸ್ಕಾಂ ಕಚೇರಿಗೆ ಅಲೆಯಬೇಕಿತ್ತು. ಆದರೆ ಈಗ ಇಲಾಖೆ ಬಿಡುಗಡೆ ಮಾಡಿದ ಹೊಸ ಆನ್‌ಲೈನ್ ಲಿಂಕ್ ಮೂಲಕ ಗ್ರಾಹಕರು ಮನೆಯಲ್ಲೇ ಕೂತು ಹೆಸರು ಬದಲಾವಣೆ ಮಾಡಿಕೊಳ್ಳಬಹುದು. ಈಗಾಗಲೇ ಐದು ಸಾವಿರ ಗ್ರಾಹಕರು ಈ ಸೌಲಭ್ಯ ಪಡೆದುಕೊಂಡಿದ್ದಾರೆ. ಇದನ್ನು ಬಳಸುವುದು ಹೇಗೆ?

ಹೆಸರು ಬದಲಾವಣೆ ಹೇಗೆ?

* ಬೆಸ್ಕಾಂ.ಕೋ.ಇನ್ ವೆಬ್‌ಸೈಟ್‌ಗೆ ಲಾಗಿನ್ ಆಗಿ ಅಪ್ಲೈ ಮಾಡಬಹುದು.

banner

*ಜನಸ್ನೇಹಿ ವಿದ್ಯುತ್ ಸೇವೆಗಳು ವಿಭಾಗದ ಅಡಿಯಲ್ಲಿ ಓನರ್‌ಶಿಪ್ ನೇಮ್ ಚೆಂಜ್‌ಗೆ ಲಾಗಿನ್ ಆಗಬೇಕು.

* *ಅಗತ್ಯ ವಿವರಗಳನ್ನ ಭರ್ತಿ ಮಾಡಿ ದಾಖಲೆಗಳನ್ನ ಅಪ್ಲೋಡ್ ಮಾಡಬೇಕು.

ಯಾವೆಲ್ಲ ದಾಖಲಾತಿಗಳು ಬೇಕು?

*ಆಧಾರ್ ಕಾರ್ಡ್

* ಮಾರಾಟ ಪತ್ರ

*  ತೆರಿಗೆ ಪಾವತಿ ಪತ್ರ

*  ಹಿಂದಿನ ಮಾಲೀಕರಿಂದ ಎನ್‌ಒಸಿ

*  ಇತ್ತೀಚಿನ ಕರೆಂಟ್ ಬಿಲ್

*  ವಿದ್ಯುತ್ ಪೂರೈಕೆ ಒಪ್ಪಂದ

*  ನಷ್ಟ ಪರಿಹಾರ ಬಾಂಡ್.

*  ಅಪ್ಲಿಕೇಶನ್

*  ಫೋಟೋ



[ad_2]

Source link

Leave a Reply

Your email address will not be published. Required fields are marked *