[ad_1]
1
ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯ ಸರ್ಕಾರವು ಇದೀಗ ಬೆಳ್ಳಂಬೆಳಗ್ಗೆಯೇ ಮದ್ಯಪ್ರಿಯರಿಗೆ ದೊಡ್ಡ ಶಾಕ್ ನೀಡಿದ್ದು, ಸಾಮಾನ್ಯ ವರ್ಗದ ಜನರು ಹೆಚ್ಚಾಗಿ ಸೇವಿಸುವ ಮದ್ಯದ ದರವನ್ನು (Liquor Price Hike) ಹೆಚ್ಚಿಸಲು ಮುಂದಾಗಿದೆ. ಹೀಗಾಗಿ 1 ರಿಂದ ಜಾರಿಗೆ ಬರುವಂತೆ ಕರ್ನಾಟಕ ಸರ್ಕಾರವು ಅಬಕಾರಿ ಸುಂಕದ ವ್ಯವಸ್ಥೆಯನ್ನು ಪುನರ್ರಚಿಸುತ್ತಿದ್ದು, ಇದರ ನೇರ ಪರಿಣಾಮವಾಗಿ ಮದ್ಯದ ಬೆಲೆಗಳಲ್ಲಿ ಗಣನೀಯ ಏರಿಕೆಯಾಗಲಿದೆ ಎನ್ನಲಾಗುತ್ತಿದೆ.


ಈವರೆಗೆ ಮದ್ಯದ ಉತ್ಪಾದನಾ ವೆಚ್ಚದ (Ex-factory price) ಆಧಾರದ ಮೇಲೆ ತೆರಿಗೆ ವಿಧಿಸಲಾಗುತ್ತಿತ್ತು. ಆದರೆ ಇನ್ನು ಮುಂದೆ ಆಲ್ಕೋಹಾಲ್ ಬೈ ವಾಲ್ಯೂಮ್ (ABV) ಅಂದರೆ, ಪಾನೀಯದಲ್ಲಿರುವ ಆಲ್ಕೋಹಾಲ್ ಪ್ರಮಾಣದ ಆಧಾರದ ಮೇಲೆ ತೆರಿಗೆ ಲೆಕ್ಕ ಹಾಕಲಾಗುತ್ತದೆ.
ಎಷ್ಟು ಏರಿಕೆಯಾಗಬಹುದು? (ಅಂದಾಜು ಬೆಲೆ ಪಟ್ಟಿ)
ಹೊಸ ನೀತಿಯಿಂದಾಗಿ ಐಎಂಟಿಎಲ್ (IMFL) ಮದ್ಯದ ಬೆಲೆಗಳು ಸುಮಾರು ಶೇ. 20 ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಸ್ಲ್ಯಾಬ್ ವಾರು ಪರಿಷ್ಕರಣೆ:
1ನೇ ಸ್ಲ್ಯಾಬ್: 80 ರಿಂದ 95 ರೂ ಏರಿಕೆ.
2ನೇ ಸ್ಲ್ಯಾಬ್: 95 ರಿಂದ 110 ರೂ ಏರಿಕೆ.
3ನೇ ಸ್ಲ್ಯಾಬ್: 120 ರಿಂದ 135 ರೂ ಏರಿಕೆ.
4ನೇ ಸ್ಲ್ಯಾಬ್: 150 ರಿಂದ 170 ರೂ ಏರಿಕೆ.
(ಗಮನಿಸಿ: ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಸೇವಾ ಶುಲ್ಕ ಅನ್ವಯವಾಗುವುದರಿಂದ ಬೆಲೆ ಇನ್ನೂ ಹೆಚ್ಚಿರಲಿದೆ.)
ಬಿಯರ್ ದರ ಏರಿಕೆ?
ಹೊಸ ನೀತಿಯು ಬಿಯರ್ ಮೇಲೆಯೂ ಪರಿಣಾಮ ಬೀರಲಿದೆ. ಆಲ್ಕೋಹಾಲ್ ಅಂಶ ಹೆಚ್ಚಿರುವ ‘ಸ್ಟ್ರಾಂಗ್ ಬಿಯರ್’ ಬೆಲೆಗಳು ಏರಿಕೆಯಾಗುವುದು ಖಚಿತ ಎನ್ನಲಾಗುತ್ತಿದೆ.
[ad_2]
Source link


















Leave a Reply