Advertisement

ನನ್ನ ಜೊತೆ ಸೆಲ್ಫಿ ಬೇಕಾ? ಹಾಗಾದ್ರೆ 100 ರೂಪಾಯಿ ಕೊಡಿ – ಪುಟಾಣಿಗಳ ಜೊತೆ ವೈಭವ್ ಸೂರ್ಯವಂಶಿ ತುಂಟಾಟ!

[ad_1]

Vaibhav Sooryavanshi 4

ಬಾರಿಯ ಐಪಿಎಲ್‌ನಲ್ಲಿ (IPL) ಆಕ್ರಮಣಕಾರಿ ಬ್ಯಾಟಿಂಗ್‌ ಮೂಲಕ ಸದ್ದು ಮಾಡುತ್ತಿರುವ ರಾಜಸ್ಥಾನ್‌ ರಾಯಲ್ಸ್‌ (Rajasthan Royals) ತಂಡದ ವೈಭವ್ ಸೂರ್ಯವಂಶಿ (Vaibhav Sooryavanshi), ಸೆಲ್ಫಿ ತೆಗೆದುಕೊಳ್ಳಲು ಬಂದ ಮಕ್ಕಳ ಬಳಿ 100 ರೂ. ಕೇಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ.

ವೈಭವ್ ಅವರ ಜನಪ್ರಿಯತೆ ಹೆಚ್ಚಾದಂತೆ ಅಭಿಮಾನಿಗಳು ಅವರ ಜೊತೆ ಸೆಲ್ಫಿಗಾಗಿ ಮುಗಿಬೀಳುತ್ತಿದ್ದಾರೆ. ವೈಭವ್ ಅವರ ಒಂದು ತಮಾಷೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ವಿಡಿಯೋದಲ್ಲಿ ಕೆಲವು ಮಕ್ಕಳು ವೈಭವ್ ಅವರ ಬಳಿ ಬಂದು ಸೆಲ್ಫಿ ಕೇಳಿದ್ದಾರೆ. ಈ ವೇಳೆ ಒಂದು ಸೆಲ್ಫಿಗೆ 100 ರೂ. ಕೊಡಿ ಎಂದು ಕೇಳಿದ್ದಾರೆ. ಈ ವೇಳೆ ಬಾಲಕ 200 ರೂಪಾಯಿ ಕೊಡಲು ಮುಂದಾಗಿದ್ದಾನೆ. ಬಳಿಕ ತಮಾಷೆ ಮಾಡಿಕೊಂಡು ನಗುತ್ತಾ ಮಕ್ಕಳ ಜೊತೆ ವೈಭವ್ ಫೋಟೋಗೆ ಪೋಸ್‌ ಕೊಟ್ಟದ್ದಾರೆ.‌ ಇದನ್ನೂ ಓದಿ: ಬೆಂಗಳೂರು ಹೊಡೆತಕ್ಕೆ ಮಕಾಡೆ ಮಲಗಿದ ಡೆಲ್ಲಿ – ಆರ್‌ಸಿಬಿಗೆ 9 ವಿಕೆಟ್‌ಗಳ ಭರ್ಜರಿ ಜಯ 

SRH ವಿರುದ್ಧ ಶತಕ ಸಿಡಿಸಿದ್ದ ವೈಭವ್
ಈ ಬಾರಿಯ ಐಪಿಎಲ್‌ ಸೀಸನ್‌ಲ್ಲಿ ವೈಭವ್ ಸೂರ್ಯವಂಶಿ ಅವರ ಬ್ಯಾಟಿಂಗ್ ಅಬ್ಬರ ಮುಂದುವರಿದಿದೆ. ಜೈಪುರದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 36 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ಐಪಿಎಲ್ ಇತಿಹಾಸದ 3ನೇ ಅತಿ ವೇಗದ ಶತಕದ ದಾಖಲೆಯನ್ನು ತಮ್ಮ ಹೆಸರಿನಲ್ಲಿ ಬರೆದುಕೊಂಡಿದ್ದಾರೆ.

ಈ ಸ್ಫೋಟಕ ಇನಿಂಗ್ಸ್‌ನೊಂದಿಗೆ ಸೂರ್ಯವಂಶಿ ಅವರು ಟಿ20 ಕ್ರಿಕೆಟ್‌ನಲ್ಲಿ ಮತ್ತೊಂದು ಮೈಲಿಗಲ್ಲನ್ನು ಸ್ಥಾಪಿಸಿದ್ದಾರೆ. ಟ್ವೆಂಟಿ-20 ಕ್ರಿಕೆಟ್‌ನಲ್ಲಿ 1,000 ರನ್ ಪೂರೈಸಿದ ವಿಶ್ವದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದನ್ನೂ ಓದಿ: ವೈಭವ್ ಸೂರ್ಯವಂಶಿ ಬ್ಯಾಟ್‌ನಲ್ಲಿ AI ಚಿಪ್ ಇರಬಹುದು, ಲ್ಯಾಬ್ ಟೆಸ್ಟ್‌ಗೆ ಕಳಿಸಿ: ಪಾಕ್ ಕ್ರಿಕೆಟ್ ತಜ್ಞ



[ad_2]

Source link publictv.in

Leave a Reply

Your email address will not be published. Required fields are marked *