Advertisement

ಮೇನಲ್ಲಿ ಮತ್ತಷ್ಟು ಕೆಂಡವಾಗಲಿದೆ ಕರುನಾಡು; 3-4 ಡಿಗ್ರಿ ಸೆಲ್ಸಿಯಸ್ ಹೆಚ್ಚಳ ಸಾಧ್ಯತೆ

[ad_1]

Weather

– ಹವಾಮಾನ ಇಲಾಖೆಯಿಂದ ಬಿರು ಬಿಸಿಲ ವಾರ್ನಿಂಗ್

ಬೆಂಗಳೂರು: ಏಪ್ರಿಲ್‌ನ ಬಿಸಿಲಿಗೆ ಕರುನಾಡು ಕಾದ ಕಾವಲಿಯಂತಾಗಿದೆ. ಆದರೆ ಬಿಸಿಲಿನ ಪ್ರತಾಪ ಇನ್ನೂ ಶುರುವಾಗಿಲ್ಲ. ಅಸಲಿ ಪಿಕ್ಚರ್ ಮೇ ತಿಂಗಳಲ್ಲಿ ಶುರುವಾಗಲಿದೆ ಎಂದು ಎಚ್ಚರಿಕೆ ನೀಡಿದೆ.

ಏಪ್ರಿಲ್ ತಿಂಗಳಲ್ಲೇ ನೆತ್ತಿ ಸುಡುವ ಸೂರ್ಯನ ಪ್ರತಾಪಕ್ಕೆ ಕರುನಾಡು (Karnataka) ಹೈರಾಣಾಗಿದೆ. ಇದರ ಮಧ್ಯೆ ಮೇನಲ್ಲಿ ಸೂರ್ಯ ಇನ್ನೂ ಉಗ್ರ ಪ್ರತಾಪಿಯಾಗಲಿದ್ದಾನೆ. ಮೇನಲ್ಲಿ ಅಸಲಿ ಬಿಸಿಲಾಘಾತ (Heat Stroke) ಶುರುವಾಗುತ್ತದೆ ಎಂದು ಹವಾಮಾನ ಇಲಾಖೆ (IMD) ವಾರ್ನಿಂಗ್ ನೀಡಿದೆ. ಇದನ್ನೂ ಓದಿ: ಮಲೆನಾಡಲ್ಲಿ ಕೆರೆಬೇಟೆ ಸೀಜನ್‌ – ಈ ಜನಪದ ಸಂಭ್ರಮ ಹೇಗಿರುತ್ತೆ ಗೊತ್ತಾ?

ಮೇ ತಿಂಗಳಲ್ಲಿ 3-4 ಡಿಗ್ರಿ ಸೆಲ್ಸಿಯಸ್ ಬಿಸಿಲು ಹೆಚ್ಚಳವಾಗುತ್ತೆ ಎಂದು ಹವಮಾನ ಇಲಾಖೆ ಹೇಳಿದ್ದು, ಮೇ ಮೊದಲ ವಾರದಲ್ಲಿಯೇ ಬೆಂಗಳೂರು ಸೇರಿದಂತೆ ಕರ್ನಾಟಕ ಇನ್ನೂ ಸುಡಲಿದೆ ಎಂದು ಹೇಳಿದ್ದಾರೆ. ಬೇಸಿಗೆಯಲ್ಲಿ ಆಗೊಮ್ಮೆ- ಈಗೊಮ್ಮೆ ಬರುತ್ತಿದ್ದ ಮಳೆ ಈ ವರ್ಷ ಕಾಣೆಯಾಗಿದ್ದು, ಬಿಸಿಲ ಧಗೆ ಹೆಚ್ಚಾಗಿದೆ. ಇದನ್ನೂ ಓದಿ: ಭಾರತಕ್ಕೆ ಬರಲಿದೆ ರಷ್ಯಾ ನೌಕಾಪಡೆ – ಏನಿದು ರಿಲೋಸ್‌ ಒಪ್ಪಂದ? ಭಾರತಕ್ಕೆ ಏನು ಲಾಭ?

uq contact el nino summer weather headline 2560x1440 1

ಇನ್ನು ದೇಶದಲ್ಲಿ ಹಿಂದೆಂದಿಗಿಂತಲೂ ಬಿಸಿಲ ತಾಪಮಾನ ಜಾಸ್ತಿ ಇದ್ದು, ಮೇ ಅಂತ್ಯದವರೆಗೂ ಮುಂದುವರೆಯೋ ಸಾಧ್ಯತೆ ಇದೆ. ಮುಂದಿನ ತಿಂಗಳು ಸ್ವಲ್ಪ ಮಳೆಯಾದರೆ, ತಾಪಮಾನ ಕಡಿಮೆ ಆಗಬಹುದು. ಇಲ್ಲದಿದ್ದರೆ ಇದೇ ಪರಿಸ್ಥಿತಿ ಮುಂದುವರೆಯಲಿದೆ ಅಂತ ಹವಾಮಾನ ಇಲಾಖೆ ಎಚ್ಚರಿಕೆ ಕೊಟ್ಟಿದೆ. ಇದನ್ನೂ ಓದಿ: ಶಿವಮೊಗ್ಗದ ಸೊರಬದಲ್ಲಿ ಬಿಜೆಪಿ ಮುಖಂಡನ ಪತ್ನಿ ನೇಣಿಗೆ ಶರಣು – ಪತಿ ಬಂಧನ

ಜಗತ್ತಿನ ಅತ್ಯಂತ ಹೆಚ್ಚಿನ ತಾಪಮಾನವಿರುವ 100 ನಗರಗಳಲ್ಲಿ ದೇಶದ 95 ನಗರಗಳಿವೆ ಅಂತ ರಾಷ್ಟ್ರೀಯ ಹವಾಮಾನ ಮುನ್ಸೂಚನಾ ಕೇಂದ್ರ ಮಾಹಿತಿ ನೀಡಿದೆ. ದೇಶದ ಬಹುಭಾಗದಲ್ಲಿನ ತಾಪಮಾನ ಸಾಮಾನ್ಯಕ್ಕಿಂತ 5 ಡಿಗ್ರಿ ಹೆಚ್ಚು ಹಾಗೂ ಅದಕ್ಕಿಂತ ಜಾಸ್ತಿ ಇದೆ ಅಂತ ಹವಾಮಾನ ಇಲಾಖೆ ಹೇಳಿದೆ. ಇದನ್ನೂ ಓದಿ: ಪಂಜಾಬ್‌ ಗೆಲುವಿನ ಓಟಕ್ಕೆ ಬ್ರೇಕ್‌ – ರಾಜಸ್ಥಾನ್‌ಗೆ 6 ವಿಕೆಟ್‌ಗಳ ಜಯ

ಸರ್ವಋತುಗಳಲ್ಲೂ ಜನರ ಅಚ್ಚುಮೆಚ್ಚಿನ ತಾಣವಾಗಿರುವ ಉದ್ಯಾನನಗರಿ ಬೆಂಗಳೂರು ಈ ಬಾರಿ ಅಕ್ಷರಶಃ ಬೆಂದಕಾಳೂರೇ ಆಗಿದೆ. ಬೆಂಗಳೂರು ಅಂತಾರಾಷ್ಟ್ರೀಯ ಏರ್‌ಪೋರ್ಟ್‌ನಲ್ಲಿ 38.2 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಇದು ಏಪ್ರಿಲ್‌ನಲ್ಲಿ ಮೂರನೇ ಬಾರಿಗೆ ದಾಖಲೆಯಾಗಿರುವ ಬಿಸಿಲಾಗಿದೆ. 2014ರಲ್ಲಿ 38.3 ಡಿಗ್ರಿ ಸೆಲ್ಸಿಯಸ್ ಹಾಗೂ 2024ರಲ್ಲಿ 38.4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು. ಇನ್ನು, ಉತ್ತರ ಕರ್ನಾಟಕದಲ್ಲಿ ಸೂರ್ಯಶಿಕಾರಿ ಹೇಳತೀರದಾಗಿದೆ. ಇದನ್ನೂ ಓದಿ: 100% ಮುಸ್ಲಿಂ ಮತದಾರರ ವಾರ್ಡ್‌ನಲ್ಲಿ ಸ್ವತಂತ್ರ ಹಿಂದೂ ಅಭ್ಯರ್ಥಿಗೆ ಗೆಲುವು

DELHI WEATHER

ದೇಶದಲ್ಲಿ ಗರಿಷ್ಠ ತಾಪಮಾನ:
ಬಂಡಾ, ಉತ್ತರ ಪ್ರದೇಶ – 47.4 ಡಿಗ್ರಿ
ವಿದರ್ಭ, ಮಹಾರಾಷ್ಟ್ರ- 46.9 ಡಿಗ್ರಿ
ಪ್ರಯಾಗ್‌ರಾಜ್, ಉತ್ತರ ಪ್ರದೇಶ – 45.5 ಡಿಗ್ರಿ
ಫರೀದಾಕೋಟ್, ಪಂಜಾಬ್ – 45.2 ಡಿಗ್ರಿ
ವಾರಾಣಸಿ, ಉತ್ತರ ಪ್ರದೇಶ – 45 ಡಿಗ್ರಿ
ರೋಹ್ಟಕ್, ಹರಿಯಾಣ – 44.6 ಡಿಗ್ರಿ
ದೆಹಲಿ – 42.8 ಡಿಗ್ರಿ
ತೆಲಂಗಾಣ, ಆಂಧ್ರ – 42 ಡಿಗ್ರಿ
ಕೇರಳ – 40 ಡಿಗ್ರಿ

summmer weather

ಕರ್ನಾಟಕದಲ್ಲಿ ತಾಪಮಾನ:
ಕಲಬುರಗಿ – 45 ಡಿಗ್ರಿ
ಬೀದರ್ – 40 ಡಿಗ್ರಿ
ವಿಜಯಪುರ – 39 ಡಿಗ್ರಿ
ರಾಯಚೂರು – 38 ಡಿಗ್ರಿ
ಕೊಪ್ಪಳ – 38 ಡಿಗ್ರಿ
ಬೆಂಗಳೂರು – 38.2 ಡಿಗ್ರಿ
ಕೊಡಗು – 24 ಡಿಗ್ರಿ

ಇನ್ನು ಈ ಬಿಸಿಲ ದಗೆಯ ಮಧ್ಯೆ ಇಂದು ನಾಳೆ ಮಳೆಯ ಮುನ್ಸೂಚನೆ ನೀಡಿದೆ. ಆದರೆ ಮೇನಲ್ಲಿ ಮಾತ್ರ ಭರ್ಜರಿ ಬಿಸಿಲ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಇದನ್ನೂ ಓದಿ: ಧಾರವಾಡ | ಮರ್ಯಾದೆಗೆ ಅಂಜಿ ವಿದ್ಯಾರ್ಥಿ ನೇಣಿಗೆ ಶರಣು


[ad_2]

Source link publictv.in

Leave a Reply

Your email address will not be published. Required fields are marked *