Advertisement

ಸಚಿವ ಡಿ.ಸುಧಾಕರ್ ಆರೋಗ್ಯದ ಬಗ್ಗೆ ಜೆಡಿಎಸ್ ಅನುಮಾನ – ದಯವಿಟ್ಟು ಸತ್ಯ ಹೇಳಿ ಅಂತ ಅಗ್ರಹ

[ad_1]

jds flag

ಬೆಂಗಳೂರು: ಸಚಿವ ಡಿ.ಸುಧಾಕರ್ ಆರೋಗ್ಯದ ವಿಚಾರ ದಿನದಿಂದ ದಿನಕ್ಕೆ ವಿವಾದ ಆಗುತ್ತಲೇ ಇದೆ. ಸುಧಾಕರ್ ಆರೋಗ್ಯದ ಬಗ್ಗೆ ಕೇಂದ್ರ ಸಚಿವ ಕುಮಾರಸ್ವಾಮಿ ವಿವಾದಿತ ಮಾತು ಆಡಿದ ಬೆನ್ನಲ್ಲೆ ಈಗ ಜೆಡಿಎಸ್ ಕೂಡಾ ಸುಧಾಕರ್ ಅವರ ಆರೋಗ್ಯದ ಬಗ್ಗೆ ಅನುಮಾನ ವ್ಯಕ್ತಪಡಿಸಿದೆ.

ಸಚಿವ ಸುಧಾಕರ್ ಆರೋಗ್ಯದ ಬಗ್ಗೆ ಸತ್ಯ ಹೇಳಿ ಅಂತ ಜೆಡಿಎಸ್ ಆಗ್ರಹಿಸಿದೆ. X ನಲ್ಲಿ ಪ್ರತಿಕ್ರಿಯೆ ನೀಡಿರೋ ಜೆಡಿಎಸ್ ಡಿ.ಕೆ ಶಿವಕುಮಾರ್ ಆಸ್ಪತ್ರೆಗೆ ಭೇಟಿ ನೀಡಿದ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದೆ. ಇದನ್ನೂ ಓದಿ: ಡಿ.ಸುಧಾಕರ್‌ ಸ್ಥಿತಿ ಗಂಭೀರ – ಕೆಲ‌ವರು ಇಂತಹ ಸಂದರ್ಭ ದುರ್ಬಳಕೆ ಮಾಡಿಕೊಳ್ಳುವುದರಲ್ಲಿ ಎಕ್ಸ್‌ಪರ್ಟ್‌ ಎಂದ ಹೆಚ್‌ಡಿಕೆ

Minister D. Sudhakars health condition is critical 2

ಜೆಡಿಎಸ್ X ನಲ್ಲಿ ಏನಿದೆ?
ಸಚಿವರಾದ ಡಿ.ಸುಧಾಕರ್‌ ಅವರ ಪುತ್ರರು ತಮ್ಮ ತಂದೆಯ ಆರೋಗ್ಯದ ಬಗ್ಗೆ ರಾಜ್ಯದ ಜನರ ಎದುರು ಹೇಳಲು ಯಾರೋ ಬರೆದುಕೊಟ್ಟ ಸ್ಕ್ರೀಪ್ಟ್‌ ಓದುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗುತ್ತಿದೆ. 10ಕ್ಕೂ ಹೆಚ್ಚು ಬಾರಿ ಎಡಿಟ್‌ ಮಾಡಿರುವ ಆ ವಿಡಿಯೋ ನೋಡಿದರೆ, ಯಾರದೋ ಒತ್ತಡಕ್ಕೆ ಮಣಿದು ರಾಜಕೀಯವಾಗಿ ಈ ರೀತಿ ಬಲವಂತದ ಹೇಳಿಕೆ ಕೊಡಿಸಲಾಗಿದೆ. ಇದರ ಹಿಂದಿರುವ ಆ ಮಹಾನಾಯಕ ಯಾರು? ಇದನ್ನೂ ಓದಿ: ಹೆಚ್‌ಡಿಕೆ ʻಹೆಬ್ಬೆಟ್ಟು’ ಹೇಳಿಕೆಯಿಂದ ನೋವಾಗಿದೆ – ಬೇಸರ ಹೊರಹಾಕಿದ ಡಿ.ಸುಧಾಕರ್ ಪುತ್ರ

ಸಿಎಂ ಸಿದ್ದರಾಮಯ್ಯ ಭೇಟಿಗೂ ಮುನ್ನ ಸಚಿವರು ವೆಂಟಿಲೇಟರ್‌ನಿಂದ ಉಸಿರಾಟ ಮಾಡ್ತಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ಹೆಲ್ತ್‌ ಬುಲೆಟಿನ್‌ ಬಿಡುಗಡೆ ಮಾಡಿದ್ದರು. ಸಚಿವರಾದ ಡಿ.ಸುಧಾಕರ್‌ ಅವರ ಆರೋಗ್ಯ ವಿಚಾರಿಸಲು ದಿನಾಂಕ : 25/04/2026ರಂದು ಆಸ್ಪತ್ರೆಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಸಚಿವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ, ಅವರಿಗೆ ಪ್ರಜ್ಞೆ ಬಂದಿಲ್ಲ ಎಂದು ಹೇಳಿಕೆ ಕೊಟ್ಟಿದ್ದರು.

Suhas Sudhakar H.D Kumaraswamy

ಸಿಎಂ ಭೇಟಿ ಬಳಿಕ ಅಂದರೆ ಮಾರನೆಯ ದಿನ ದಿನಾಂಕ 26/04/2026 ರಂದು ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ತೆಗೆದಿರುವ ಚಿತ್ರದಲ್ಲಿ ಯಾವುದೇ ವೆಂಟಿಲೇಟರ್‌ ಕಾಣಿಸುತ್ತಿಲ್ಲ. ಹಾಗಾದರೆ, ಒಂದೇ ದಿನದಲ್ಲಿ ವೆಂಟಿಲೇಟರ್‌ ಕಣ್ಮರೆಯಾಯಿತೆ? ಸಚಿವರು ಲೈಫ್ ಸಪೋರ್ಟ್ ಇಲ್ಲದೆ ಉಸಿರಾಟ ಮಾಡುತ್ತಿದ್ದಾರೆಯೇ, ಅವರ ಆರೋಗ್ಯದ ಸಮಸ್ಯೆಗಳು ನಿವಾರಣೆ ಆಯಿತೇ? ಸಚಿವರ ಆರೋಗ್ಯದ ವಿಷಯದಲ್ಲಿ ಕಾಂಗ್ರೆಸ್ ಸರ್ಕಾರ ಯಾಕಿಷ್ಟು ರಹಸ್ಯ ಮಾಡುತ್ತಿದೆ? ಅವರ ಆರೋಗ್ಯದ ಚೇತರಿಕೆ ಬಗ್ಗೆ ಆಸ್ಪತ್ರೆಯವರೂ ಯಾಕೆ ಹೆಲ್ತ್ ಬುಲೆಟಿನ್ ಹೊರಡಿಸುತ್ತಿಲ್ಲ? ಇದು ರಾಜ್ಯದ ಜನರನ್ನು ಕಾಡುತ್ತಿರುವ ಆತಂಕದ ಪ್ರಶ್ನೆ. ಇದನ್ನಷ್ಟೇ ಕೇಂದ್ರ ಸಚಿವ ಕುಮಾರಸ್ವಾಮಿಯವರು ಪ್ರಶ್ನಿಸಿರುವುದು. ದಯವಿಟ್ಟು ಸತ್ಯ ಹೇಳಿ ಎಂದು ಆಗ್ರಹ ಮಾಡಿದೆ.

[ad_2]

Source link publictv.in

Leave a Reply

Your email address will not be published. Required fields are marked *