Advertisement

ವಾಣಿ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗಕ್ಕೆ ಮತ್ತೊಂದು ರಾಜ್ಯ ಮಟ್ಟದ Rank ಗೌರವ

[ad_1]

ಬೆಳ್ತಂಗಡಿ: ವಾಣಿ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗಕ್ಕೆ ಮತ್ತೊಂದು ಮಹತ್ವದ ಸಾಧನೆ ಲಭಿಸಿದೆ.
ಪದವಿಪೂರ್ವ ಶಿಕ್ಷಣ ಇಲಾಖೆ ನಡೆಸಿದ ದ್ವಿತೀಯ ಪಿಯುಸಿ ಪರೀಕ್ಷೆಯ ಮರುಮೌಲ್ಯಮಾಪನ ಫಲಿತಾಂಶದಲ್ಲಿ ಕಾಲೇಜಿನ ವಿದ್ಯಾರ್ಥಿನಿ ವೀಕ್ಷಾ ಜೆ. ಪಿ ರಾಜ್ಯ ಮಟ್ಟದಲ್ಲಿ 8ನೇ Rank ಗಳಿಸಿದ್ದಾರೆ. ಅವರು ಒಟ್ಟು 593 ಅಂಕಗಳನ್ನು ಪಡೆದು ಈ ಸಾಧನೆ ಮಾಡಿದ್ದಾರೆ.

ವೀಕ್ಷಾ ಜೆ. ಪಿ ಅವರಿಗೆ ಮೊದಲು ನಡೆದ ಮೌಲ್ಯಮಾಪನದಲ್ಲಿ ಬಿಸಿನೆಸ್ ಸ್ಟಡೀಸ್ ವಿಷಯದಲ್ಲಿ 91 ಅಂಕಗಳು ಲಭಿಸಿದ್ದವು. ನಂತರ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ ಬಳಿಕ 9 ಅಂಕಗಳ ಹೆಚ್ಚಳವಾಗಿದ್ದು, ಆ ವಿಷಯದಲ್ಲಿ 100 ಅಂಕಗಳನ್ನು ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ.

ಈ ಸಾಧನೆಯ ಮೂಲಕ ವಾಣಿ ಪದವಿ ಪೂರ್ವ ಕಾಲೇಜು ಮತ್ತೊಮ್ಮೆ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನ ಮೆರುಗು ತೋರಿಸಿದ್ದು, ವಿದ್ಯಾರ್ಥಿನಿಯ ಪರಿಶ್ರಮ ಮತ್ತು ಶಿಕ್ಷಕರ ಮಾರ್ಗದರ್ಶನದ ಫಲವಾಗಿ ಈ ಯಶಸ್ಸು ಸಾಧ್ಯವಾಗಿದೆ ಎಂದು ಕಾಲೇಜಿನ ಆಡಳಿತ ಮಂಡಳಿ ಸಂತೋಷ ವ್ಯಕ್ತಪಡಿಸಿದೆ.



[ad_2]

Source link

Leave a Reply

Your email address will not be published. Required fields are marked *