Advertisement

ವಾಂಖೆಡೆಯಲ್ಲಿ ಮುಂಬೈ ಹುರಿದು ಮುಕ್ಕಿದ ಸನ್‌ ರೈಸರ್ಸ್‌ – ಹೈದ್ರಾಬಾದ್‌ಗೆ 6 ವಿಕೆಟ್‌ಗಳ ಭರ್ಜರಿ ಜಯ

[ad_1]

Sunrisers Hyderabad 2

ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿಂದು ನಡೆದ ಪಂದ್ಯ ಅಭಿಮಾನಿಗಳ ಕಣ್ಣಿಗೆ ಹಬ್ಬವಾಗಿತ್ತು. ಸಿಕ್ಸರ್‌, ಬೌಂಡರಿಗಳ ಆರ್ಭಟದಿಂದ ಉಭಯ ತಂಡಗಳು ರನ್‌ ಹೊಳೆಯನ್ನೇ ಹರಿಸಿದವು. ಈ ರಣರೋಚಕ ಕದನದಲ್ಲಿ ಸನ್‌ ರೈಸರ್ಸ್‌ ಹೈದರಾಬಾದ್‌ ತಂಡ ಮುಂಬೈ ಇಂಡಿಯನ್ಸ್‌ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು.

ಗೆಲುವಿಗೆ 244 ರನ್‌ಗಳ ಗುರಿ ಪಡೆದಿದ್ದ ಎಸ್‌ಆರ್‌ಹೆಚ್‌ 18.4 ಓವರ್‌ಗಳಲ್ಲೇ 249 ರನ್‌ ಬಾರಿಸಿ ಗೆದ್ದು ಬೀಗಿತು. ಈ ಗೆಲುವಿನೊಂದಿಗೆ 12 ಅಂಕ ಪಡೆದು ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿತು.

Travis Head and Abhishek Sharma

ಚೇಸಿಂಗ್‌ ಆರಂಭಿಸಿದ ಹೈದರಾಬಾದ್‌ ಪರ ಅಭಿಷೇಕ್‌ ಶರ್ಮಾ ಹಾಗೂ ಟ್ರಾವಿಸ್‌ ಹೆಡ್‌ ಜೋಡಿ ಆರಂಭದಿಂದಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿದರು. ಪವರ್‌ ಪ್ಲೇ ಮುಗಿಯುವ ಹೊತ್ತಿಗೆ ಈ ಜೋಡಿ ಬರೋಬ್ಬರಿ 92 ರನ್‌ ಬಾರಿಸಿತ್ತು. ಆ ನಂತರವೂ ಮುಂಬೈ ಬೌಲರ್‌ಗಳನ್ನ ಹಿಗ್ಗಾಮುಗ್ಗಾ ಚೆಂಡಾಡಿದ ಈ ಜೋಡಿ ಮೊದಲ ವಿಕೆಟ್‌ಗೆ 8.4 ಓವರ್‌ಗಳಲ್ಲಿ 129 ರನ್‌ಗಳ ಜೊತೆಯಾಟ ನೀಡಿತ್ತು. ಇದು ಮುಂಬೈ ವಿರುದ್ಧ ಹಿಡಿತ ಸಾಧಿಸಲು ನೆರವಾಯಿತು.

Ryan Rickelton

4 ರನ್‌ ಅಂತರದಲ್ಲಿ ದೈತ್ಯ 3 ವಿಕೆಟ್‌ ಉಡೀಸ್‌
ಅಭಿ-ಟ್ರಾವಿಸ್‌ ಆರ್ಭಟಕ್ಕೆ ಹೈರಾಣಾಗಿದ್ದ ಮುಂಬೈಗೆ ಮತ್ತೆ ಪುಟಿದೇಳಲು ಅವಕಾಶವೊಂದು ಸಿಕ್ಕಿತ್ತು. 9 ಮತ್ತು 10ನೇ ಓವರ್‌ನಲ್ಲಿ 4 ರನ್‌ಗಳ ಅಂತರದಲ್ಲೇ ಹೈದರಾಬಾದ್‌ ತಂಡ ಪ್ರಮುಖ 3 ವಿಕೆಟ್‌ಗಳನ್ನ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. 9ನೇ ಓವರ್‌ನಲ್ಲಿ ಸ್ಪಿನ್‌ ಮ್ಯಾಜಿಕ್‌ ನಡೆಸಿದ ಎ.ಎಂ. ಗಜನ್‌ಫರ್ 4ನೇ ಎಸೆತದಲ್ಲಿ ಅಭಿಷೇಕ್‌ ಶರ್ಮಾ, 5ನೇ ಎಸೆತದಲ್ಲೇ ಇಶಾನ್‌ ಕಿಶನ್‌ ವಿಕೆಟ್‌ ಕಿತ್ತು ಟರ್ನಿಂಗ್ ತಂದುಕೊಟ್ಟರು. ಇದರೊಂದಿಗೆ ನಾಯಕ ಹಾರ್ದಿಕ್‌ ಪಾಂಡ್ಯ 10ನೇ ಓವರ್‌ನ 4ನೇ ಎಸೆತದಲ್ಲಿ ಟ್ರಾವಿಸ್‌ ಹೆಡ್‌ ವಿಕೆಟ್‌ ಕಿತ್ತು ಲಯಕ್ಕೆ ತಂದಿದ್ದರು. ನಂತರದಲ್ಲಿ ಬಂದ ಕ್ಲಾಸೆನ್‌ ಕೂಡ ಅಬ್ಬರಿಸಿ ಬೊಬ್ಬಿರಿದರು. ಹೀಗಾಗಿ ಮುಂಬೈ ಬೃಹತ್‌ ಮೊತ್ತ ದಾಖಲಿಸಿದ್ರೂ, ಹೈದರಾಬಾದ್‌ಗೆ ಸುಲಭ ತುತ್ತಾಯಿತು.

Sunrisers Hyderabad

ಇನ್ನುಳಿದಂತೆ ಹೈದರಾಬಾದ್‌ ಪರ ಟ್ರಾವಿಸ್‌ ಹೆಡ್‌ 30 ಎಸೆತಗಳಲ್ಲಿ ಸ್ಫೋಟಕ 76 ರನ್‌ (8 ಸಿಕ್ಸರ್‌, 4 ಬೌಂಡರಿ) ಚಚ್ಚಿದ್ರೆ, ಹೆನ್ರಿಕ್‌ ಕ್ಲಾಸೆನ್‌ 30 ಎಸೆತಗಳಲ್ಲಿ 65 ರನ್‌ (4 ಸಿಕ್ಸರ್‌, 7 ಬೌಂಡರಿ), ಸಲೀಲ್‌ ಅರೋರಾ 10 ಎಸೆತಗಳಲ್ಲಿ 30 ರನ್‌, ನಿತೀಶ್‌ ರೆಡ್ಡಿ 17 ಎಸೆತಗಳಲ್ಲಿ 21 ರನ್‌ಗಳ ಕೊಡುಗೆ ನೀಡಿದ್ರು.

Mumbai

ರಿಕಲ್ಟನ್‌ ಶತಕದ ಅಬ್ಬರ
ಇದಕ್ಕೂ ಮುನ್ನ ಬ್ಯಾಟ್‌ ಬೀಸಿದ ಮುಂಬೈ ಪರ ಕೂಡ ರನ್‌ ಹೊಳೆ ಹರಿಯಿತು. ವಿಲ್‌ ಜ್ಯಾಕ್ಸ್‌, ರಾಯಲ್‌ ರಿಕಲ್ಟನ್‌ ಜೋಡಿ ಕೂಡ ಆಕ್ರಮಣಕಾರಿ ಆಟ ಪ್ರದರ್ಶಿಸಿತು. ಕೊನೇ ವರೆಗೂ ಅಜೇಯ ಆಟ ಪ್ರದರ್ಶಿಸಿದ ರಿಕಲ್ಟನ್‌ 55 ಎಸೆತಗಳಲ್ಲಿ 123 ರನ್‌ (8 ಸಿಕ್ಸರ್‌, 10 ಬೌಂಡರಿ) ಚಚ್ಚಿದ್ರೆ, ವಿಲ್‌ ಜ್ಯಾಕ್ಸ್‌ 22 ಎಸೆತಗಳಲ್ಲಿ 46 ರನ್‌, ಪಾಂಡ್ಯ 15 ಎಸೆತಗಳಲ್ಲಿ 31 ರನ್‌, ನಮನ್‌ ಧೀರ್‌ 22 ರನ್‌, ತಿಲಕ್‌ 7 ರನ್‌, ಸೂರ್ಯಕುಮಾರ್‌ 5 ರನ್‌ ರಾಬಿನ್‌ ಮಿಂಜ್‌ 1 ರನ್‌ ಕೊಡುಗೆ ನೀಡಿದ್ರು.

[ad_2]

Source link publictv.in

Leave a Reply

Your email address will not be published. Required fields are marked *