Advertisement

ಉಡುಪಿ| ರಸ್ತೆ ಬದಿ ನಿಂತಿದ್ದ ಟ್ಯಾಂಕರ್‌ಗೆ ಬಸ್ ಡಿಕ್ಕಿ – ಮೂರು ಮಂದಿ ದುರ್ಮರಣ

[ad_1]

udupi accident

ಉಡುಪಿ: ರಸ್ತೆ ಬದಿ ನಿಂತಿದ್ದ ಟ್ಯಾಂಕರ್‌ಗೆ ಪ್ರವಾಸಿಗರಿದ್ದ ಬಸ್ ಡಿಕ್ಕಿಯಾಗಿ ಮೂವರು ದಾರುಣ ಸಾವನ್ನಪ್ಪಿರುವ ಘಟನೆ ಬೈಂದೂರು ತಾಲೂಕಿನ ತ್ರಾಸಿಯಲ್ಲಿ ನಡೆದಿದೆ.

ರಂಗನಾಥ್ (21) ಚಿಕ್ಕಮಗಳೂರು, ಮನೋಜ್ (25), ಉಮೇಶ್ ಯಾನ್ ರಘು ಮೃತ ದುರ್ದೈವಿಗಳು. ಅತಿ ವೇಗದಿಂದ ಬಂದ ಮಿನಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಹಲವರಿಗೆ ಗಾಯಗಳಾಗಿವೆ. ಗಂಭೀರ ಸ್ಥಿತಿಯಲ್ಲಿದ್ದ ಹಲವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಮಿನಿ ಬಸ್‌ನಲ್ಲಿ ಇದ್ದವರು ಪ್ರವಾಸಿಗರು. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದವರು ಎಂಬ ಮಾಹಿತಿ ಸಿಕ್ಕಿದೆ.

ಮುರುಡೇಶ್ವರದಿಂದ ಉಡುಪಿಯತ್ತ ಬಸ್ ಬರುತ್ತಿತ್ತು. ಶಿವಮೊಗ್ಗದ ಶಂಕರಘಟ್ಟ ರಂಭಾಪುರಿ ಕಾಲೇಜಿನ ಬಿಕಾಂ ವಿದ್ಯಾರ್ಥಿಗಳು ಕರಾವಳಿ ಭಾಗಕ್ಕೆ ಪ್ರವಾಸ ಬಂದಿದ್ದರು. ಬಸ್‌ನಲ್ಲಿದ್ದ 47 ವಿದ್ಯಾರ್ಥಿಗಳು ಪಾರಾಗಿದ್ದಾರೆ.

ಬಸ್‌ನಲ್ಲಿದ್ದ ಅಡುಗೆ ಸಹಾಯಕ, ಚಾಲಕ, ಕ್ಲೀನರ್ ಮೃತಪಟ್ಟಿದ್ದಾರೆ. ಸಣ್ಣಪುಟ್ಟ ಗಾಯಗೊಂಡವರಿಗೆ ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

[ad_2]

Source link publictv.in

Leave a Reply

Your email address will not be published. Required fields are marked *