Advertisement

ಪಶ್ಚಿಮ ಬಂಗಾಳದಲ್ಲಿ BJP ಗೆ ವೋಟ್ ಬೀಳದಂತೆ ಕಮಲ ಚಿನ್ಹೆ ಮೇಲೆ ಟೇಪ್

[ad_1]

ಪಶ್ಚಿಮ ಬಂಗಾಳದಲ್ಲಿ ಎರಡನೇ ಹಂತದ ಮತದಾನ ನಡೆಯುವ ವೇಳೆ ಮತಗಟ್ಟೆ ಒಂದರಲ್ಲಿ ಬಿಜೆಪಿಗೆ ಮತ ಬೀಳದಂತೆ ನೋಡಿಕೊಳ್ಳಲು ಎಲೆಕ್ಟ್ರಾನಿಕ್ ಮತ ಯಂತ್ರದ (ಇವಿಎಂ) ದಲ್ಲಿ ಬಿಜೆಪಿ ಚಿಹ್ನೆ ಇದ್ದ ಬಟನ್ ನ್ನು ಟೇಪ್ ಮಾಡಲಾಗಿದೆ ಎಂದು ಬಿಜೆಪಿ ಆರೋಪಿಸಿದೆ.

ಹೌದು, ಪಶ್ಚಿಮ ಬಂಗಾಳದ (West Bengal) ಡೈಮಂಡ್ ಹಾರ್ಬರ್‌ನ ಫಾಲ್ಟಾದಲ್ಲಿ 2ನೇ ಹಂತದ ಚುನಾವಣೆ ವೇಳೆ ತೃಣಮೂಲ ಕಾಂಗ್ರೆಸ್ ಪಕ್ಷವು ಮತ ​​ಯಂತ್ರಗಳಲ್ಲಿನ ಕಮಲದ ಗುರುತಿನ ಬಟನ್‌ಗೆ ಟೇಪ್‌ ಅಂಟಿಸಿದೆ ಬಿಜೆಪಿ ಆರೋಪಿಸಿದೆ. ಈ ಆರೋಪ ಕೇಳಿಬಂದ ಬೆನ್ನಲ್ಲೇ ಡೈಮಂಡ್ ಹಾರ್ಬರ್‌ನ ಫಾಲ್ಟಾದ ಬೂತ್‌ಗಳಲ್ಲಿ ಮತದಾನವನ್ನು ಸ್ಥಗಿತಗೊಳಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಟಿಎಂಸಿ ವಿರುದ್ಧ ನೇರ ವಾಗ್ದಾಳಿ ನಡೆಸಿರುವ ಬಿಜೆಪಿ ಅಭ್ಯರ್ಥಿ ದೇಬಾಂಗ್ಶು ಪಾಂಡಾ, ಬಿಜೆಪಿಗೆ ಮತದಾನ ಮಾಡುವುದನ್ನು ಉದ್ದೇಶಪೂರ್ವಕವಾಗಿ ನಿಷ್ಕ್ರಿಯಗೊಳಿಸಲಾಗಿದೆ, ಹಲವಾರು ಮತಗಟ್ಟೆಗಳಲ್ಲಿ ಬಿಜೆಪಿ ಅಭ್ಯರ್ಥಿಯ ಹೆಸರು ಮತ್ತು ಪಕ್ಷದ ಚಿಹ್ನೆಗೆ ಅನುಗುಣವಾದ ಇವಿಎಂ ಬಟನ್ ಜಾಮ್ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

BJP ಆರೋಪವನ್ನು ನಿರಾಕರಿಸಿದ ತೃಣಮೂಲ ಪಕ್ಷ ಬಂಗಾಳದಲ್ಲಿ ಸೋತ ನಂತರ ಬಿಜೆಪಿ ಸುಳ್ಳು ಆರೋಪ ಮಾಡುತ್ತಿದೆ ಎಂದು ಹೇಳಿಕೊಂಡಿದೆ. ಚುನಾವಣಾ ಆಯೋಗ ಮತ್ತು ಪೊಲೀಸ್ ವೀಕ್ಷಕ ಅಜಯ್ ಪಾಲ್ ಶರ್ಮಾ, “ಸಿಂಘಮ್” ಎಂದು ಕರೆಯಲ್ಪಡುವ ಐಪಿಎಸ್ ಅಧಿಕಾರಿಯನ್ನು ಸಹ ಪಕ್ಷ ಟೀಕಿಸಿದೆ

banner



[ad_2]

Source link

Leave a Reply

Your email address will not be published. Required fields are marked *