Advertisement

ದೆಹಲಿ ಹೈ ಕೋರ್ಟ್ – ಆನ್ಲೈನ್ ವಿಚಾರಣೆ ವೇಳೆ 3 ಬಾರಿ ಅಶ್ಲೀಲ ವಿಡಿಯೋ ಪ್ರಸಾರ!!

[ad_1]

ದೆಹಲಿ ಹೈಕೋರ್ಟ್ ನಲ್ಲಿ ಪ್ರಕರಣ ಒಂದರ ಆನ್ಲೈನ್ ವಿಚಾರಣೆ ವೇಳೆ ಸಿಜೆ (CJ) ಪೀಠದ ವಿಡಿಯೋ ಕಾನ್ಫರೆನ್ಸಿಂಗ್ ನಲ್ಲಿ ಮೂರು ಬಾರಿ ಅಶ್ಲೀಲ ವೀಡಿಯೋ ಕಾಣಿಸಿದ್ದು, ಜಡ್ಜ್ ಶಾಕ್ ಆಗಿದ್ದಾರೆ. ಸದ್ಯ ಈ ಬಗ್ಗೆ ದೂರು ದಾಖಲಾಗಿದೆ.

ಹೌದು, ದೆಹಲಿ ಹೈಕೋರ್ಟ್‌ನ ವರ್ಚುವಲ್ ವಿಚಾರಣೆಯ ಸಮಯದಲ್ಲಿ ಪದೇ ಪದೇ ಅಶ್ಲೀಲ ವಿಡಿಯೋಗಳನ್ನು ಪ್ರಸಾರ ಮಾಡಲಾಗಿದೆ. ಇದರಿಂದಾಗಿ ಮುಖ್ಯ ನ್ಯಾಯಮೂರ್ತಿಗಳ ವೀಡಿಯೊ ಕಾನ್ಫರೆನ್ಸಿಂಗ್ (VC) ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿದ್ದು, ಸೈಬರ್ ಭದ್ರತೆಯ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕಿದೆ.

ಬುಧವಾರ (ಏ.29) ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತೇಜಸ್ ಕರಿಯಾ ಅವರ ವಿಭಾಗೀಯ ಪೀಠವು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ವರ್ಚುವಲ್ ಆಗಿ ವಿಚಾರಣೆ ನಡೆಸುತ್ತಿದ್ದರು. ಮಧ್ಯಾಹ್ನ 12:56ರ ಸುಮಾರಿಗೆ ಅಪರಿಚಿತ ವ್ಯಕ್ತಿಯೋರ್ವ ವಿಡಿಯೋ ಕಾನ್ಫರೆನ್ಸಿಂಗ್ ಸೇರಿ ಅಶ್ಲೀಲ ವಿಡಿಯೋ ಪ್ಲೇ ಮಾಡಿದ್ದಾರೆ. 

ಎರಡು ಬಾರಿ ಅಶ್ಲೀಲ ವಿಡಿಯೋ ಪ್ಲೇ ಮಾಡಿದ್ದು, ಮೂರನೇ ಬಾರಿ ಹಾಡನ್ನು ಪ್ರಸಾರ ಮಾಡಿದ್ದಾರೆ. ಒಟ್ಟು ಮೂರು ಬಾರಿ ಸಮಸ್ಯೆಯುಂಟು ಮಾಡಿದ್ದು, ಕೂಡಲೇ ವರ್ಚುವಲ್ ಕಲಾಪವನ್ನು ಸ್ಥಗಿತಗೊಳಿಸಿದ್ದಾರೆ. ವಿಡಿಯೋ ಪ್ಲೇ ಆಗುತ್ತಿದ್ದ ಅಕೌಂಟ್‌ನಲ್ಲಿ “You’ve been hacked” (ನಿಮ್ಮನ್ನು ಹ್ಯಾಕ್ ಮಾಡಲಾಗಿದೆ) ಎಂಬ ಸಂದೇಶ ಕಾಣಿಸಿಕೊಂಡಿತ್ತು. ಅಲ್ಲದೆ, ವಿಚಾರಣೆಯ ವೇಳೆ ಸ್ವಯಂಚಾಲಿತ ಧ್ವನಿಯೊಂದು (Automated voice) ಕೂಡ ಇದೇ ರೀತಿಯ ಘೋಷಣೆಯನ್ನು ಮಾಡುತ್ತಿತ್ತು ಎನ್ನಲಾಗಿದೆ.

banner

ಸದ್ಯ ವಿಡಿಯೋ ಕಾನ್ಫರೆನ್ಸಿಂಗ್ ಸಮಯದಲ್ಲಿ ಅಶ್ಲೀಲ ವಿಡಿಯೋವನ್ನು ಪ್ಲೇ ಮಾಡಿದ ಸಂಬಂಧ ಕ್ರಮ ಕೈಗೊಳ್ಳಲು ರಿಜಿಸ್ಟ್ರಾರ್ ಜನರಲ್‌ಗೆ ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಅವರು ಸೂಚನೆ ನೀಡಿದ್ದಾರೆ.



[ad_2]

Source link

Leave a Reply

Your email address will not be published. Required fields are marked *