Advertisement

Today’s Chanakya Exit Polls | ಅಸ್ಸಾಂನಲ್ಲಿ ಬಿಜೆಪಿಗೆ ಹ್ಯಾಟ್ರಿಕ್‌ ಗೆಲುವು

[ad_1]

Assam CM Himanta Biswa Sarma

ದಿಸ್ಪುರ್: ಅಸ್ಸಾಂನದಲ್ಲಿ ಆಡಳಿತಾರೂಢ ಎನ್‌ಡಿಎ (NDA) ನೇತೃತ್ವದ ಮೈತ್ರಿಕೂಟ ಅಭೂತಪೂರ್ವ ಗೆಲುವು ಸಾಧಿಸಿಲಿದ್ದು, 102±9 ಸ್ಥಾನಗಳೊಂದಿಗೆ ಗದ್ದುಗೆ ಏರಲಿದೆ ಎಂದು ಟುಡೇಸ್‌ ಚಾಣಕ್ಯ (Today’s Chanakya) ಚುನಾವಣೋತ್ತರ ಸಮೀಕ್ಷೆ ತಿಳಿಸಿದೆ.

ಕಳೆದೆರಡು ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಬಿಜೆಪಿ ಈ ಬಾರಿಯು ಗೆದ್ದು ಬೀಗಲಿದೆ. ಇದನ್ನೂ ಓದಿ:Exit Polls – ಅಸ್ಸಾಂನಲ್ಲಿ ಬಿಜೆಪಿ ಹ್ಯಾಟ್ರಿಕ್‌ ಸಾಧನೆ

ಏಪ್ರಿಲ್ 9ರಂದು ನಡೆದಿದ್ದ ಅಸ್ಸಾಂ ವಿಧಾನಸಭಾ ಚುನಾವಣೆಗೆ ಟುಡೇಸ್ ಚಾಣಕ್ಯ ಇಂದು ಚುನಾವಣೋತ್ತರ ಸಮೀಕ್ಷೆ ಬಿಡುಗಡೆಗೊಳಿಸಿದೆ. 126 ವಿಧಾನಸಭಾ ಸ್ಥಾನಗಳನ್ನು ಹೊಂದಿರುವ ಅಸ್ಸಾಂನಲ್ಲಿ ಸರ್ಕಾರ ರಚಿಸಲು 64 ಸ್ಥಾನಗಳ ಬಹುಮತದ ಅವಶ್ಯಕತೆಯಿದೆ. ಸಮೀಕ್ಷೆ ಪ್ರಕಾರ ಬಿಜೆಪಿ 50% ± 3% ವೋಟ್‌ ಪಡೆದು 102 ± 9 ಸ್ಥಾನಗಳಲ್ಲಿ ಗೆಲ್ಲುನ ನಿರೀಕ್ಷೆಯಿದೆ.

ಇನ್ನೂ ಕಾಂಗ್ರೆಸ್ (Congress) ಮೈತ್ರಿಯು 38% ± 3% ವೋಟ್‌ ಪಡೆದು 23 ± 9 ಸ್ಥಾನಗಳಲ್ಲಿ ಗೆಲುವು ಸಾಧಿಸುವುದಾಗಿ ಅಂದಾಜಿಸಲಾಗಿದೆ. ಇತರರು 12% ± 1% ಮತಗಳನ್ನು ಪಡೆದು 1 ± 1 ಸ್ಥಾನಗಳಲ್ಲಿ ಗೆಲುವು ಸಾಧಿಸುವ ನಿರೀಕ್ಷೆಯಿದೆ.

ಟುಡೇಸ್‌ ಚಾಣಕ್ಯ ಸಮೀಕ್ಷೆ ಹೊರತುಪಡಿಸಿ ಸಿಎನ್‌ಎನ್-ನ್ಯೂಸ್ 18, ಜೆವಿಸಿ ಮತ್ತು ಚಾಣಕ್ಯ ಸ್ಟ್ರಾಟಜೀಸ್‌ಗಾಗಿ ವೋಟ್‌ವೈಬ್ ಎಂಬ ಮೂರು ಪ್ರಮುಖ ಸಮೀಕ್ಷೆಗಳು 126 ಸದಸ್ಯರ ವಿಧಾನಸಭೆಯಲ್ಲಿ ಎನ್‌ಡಿಎಗ ಗೆಲುವು ಸಾಧಿಸಲಿದೆ.ಇದನ್ನೂ ಓದಿ: Exit Poll Results 2026 | ತಮಿಳುನಾಡಿನಲ್ಲಿ ಮತ್ತೆ ಡಿಎಂಕೆಗೆ ಪಟ್ಟಾಭಿಷೇಕ – ದಳಪತಿಯ ಟಿವಿಕೆಗೆ ಹೀನಾಯ ಸೋಲು


[ad_2]

Source link publictv.in

Leave a Reply

Your email address will not be published. Required fields are marked *