Advertisement

ಮಧ್ಯಪ್ರಾಚ್ಯ ಯುದ್ಧದಿಂದಾಗಿ ದೇಶದ ಜಿಡಿಪಿ ಬೆಳವಣಿಗೆ ಅಪಾಯದಲ್ಲಿದೆ – ಕೇಂದ್ರ ಕಳವಳ

[ad_1]

India GDP

ನವದೆಹಲಿ: ಮಧ್ಯಪ್ರಾಚ್ಯ ಯುದ್ಧ (Middle East War) ಸಂಘರ್ಷದಿಂದಾಗಿ ದೇಶದ ಜಿಡಿಪಿ (GDP) ಬೆಳವಣಿಗೆ ಅಪಾಯದಲ್ಲಿದೆ ಎಂದು ಕೇಂದ್ರ ಹಣಕಾಸು ಇಲಾಖೆ (Finance Dept) ಕಳವಳಪಟ್ಟಿದೆ.

2026-27ನೇ ಹಣಕಾಸು ವರ್ಷದಲ್ಲಿ ಭಾರತದ (India) ಜಿಡಿಪಿ ಬೆಳವಣಿಗೆ ಮುನ್ಸೂಚನೆ ಶೇ.7-7.4ರಷ್ಟಿದ್ದು ಇದು ಅನಿಶ್ಚಿತತೆ ಎದುರಿಸುತ್ತಿದೆ ಎಂದು ತಿಳಿಸಿದೆ. 2025-26ರ ಹಣಕಾಸು ವರ್ಷದಲ್ಲಿ ಆರ್ಥಿಕತೆಯು ಶೇಕಡಾ 7.6ರಷ್ಟು ಬೆಳೆದಿದೆ. ಇದು ಇತ್ತೀಚಿನ ವರ್ಷಗಳಲ್ಲಿ ಬಲಿಷ್ಠ ಆರ್ಥಿಕ ಅಭಿವೃದ್ಧಿಯಾಗಿತ್ತು. ಮುಂಬರುವ ಹಣಕಾಸು ವರ್ಷಕ್ಕೆ ಇದು ಇಳಿಮುಖವಾಗುವ ಸಾಧ್ಯತೆಯನ್ನು ಸಚಿವಾಲಯ ಮುಂದಿಟ್ಟಿದೆ. ಇದನ್ನೂ ಓದಿ: ಜಮ್ಮು-ಕಾಶ್ಮೀರ, ಲಡಾಖ್‌ ಪಾಕ್‌ನ ಭಾಗ ಅಂತ ತೋರಿಸಿ ಯಡವಟ್ಟು – ನೇಪಾಳದ ಏರ್‌ಲೈನ್ಸ್‌ ಕ್ಷಮೆಯಾಚನೆ

ಇರಾನ್-ಅಮೆರಿಕ ನಡುವಿನ ಯುದ್ಧದಿಂದ ಹೆಚ್ಚುತ್ತಿರುವ ಇಂಧನ ದರವನ್ನು ಜನರ ಮೇಲೆಯೇ ಹಾಕುವುದು ಅನಿವಾರ್ಯ ಕೇಂದ್ರ ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ. ಪೆಟ್ರೋಲ್, ಡೀಸೆಲ್ ಪೂರೈಕೆ ವ್ಯತ್ಯಯದ ಸಂದರ್ಭಗಳಲ್ಲಿ ಬೇಡಿಕೆ ನಿಯಂತ್ರಣ ಅಗತ್ಯವಾಗಿದೆ. ಇಲ್ಲದಿದ್ದರೆ ಇಂಧನಕ್ಕಾಗಿ ಇನ್ನಷ್ಟು ಹೆಚ್ಚಿನ ಬೆಲೆ ತೆರಬೇಕಾಗುತ್ತದೆ.

ಉತ್ಪಾದನೆ ಮತ್ತು ಸಾಗಣೆ ಪುನಾರಂಭಿಸಲು ಬೇಕಾಗುವ ಸಮಯವನ್ನು ಸಂಸ್ಥೆಗಳು ಪರಿಗಣಿಸುತ್ತಿಲ್ಲ ಎನ್ನಲಾಗುತ್ತಿದ್ದು, ಇಂಧನದ ಬೆಲೆಗಳು ಇಳಿಕೆಯಾಗುವ ಸಾಧ್ಯತೆಗಳೂ ಕಡಿಮೆ ಎಂದು ಅಂದಾಜಿಸಲಾಗ್ತಿದೆ. ಐಸಿಆರ್‌ಎ ವರದಿ ಪ್ರಕಾರ ಪೆಟ್ರೋಲ್ ಮೇಲೆ ಲೀಟರ್‌ಗೆ 14 ರೂ. ಡೀಸೆಲ್ ಮೇಲೆ ಲೀಟರ್‌ಗೆ 18 ರೂಪಾಯಿ ನಷ್ಟ ಎದುರಾಗುತ್ತಿದೆ. ಹೀಗಾಗಿ ಈ ಹೊಣೆಯನ್ನು ಗ್ರಾಹಕರೇ ಹೊರಬೇಕು ಅನ್ನೋ ಸುಳಿವು ನೀಡಿದೆ.ಇದನ್ನೂ ಓದಿ: Catch Controversy | ಜೇಸನ್‌ ಹೋಲ್ಡರ್‌ ಕ್ಯಾಚ್‌ ವಿವಾದ – ಅಂಪೈರ್‌ ತೀರ್ಪಿನ ವಿರುದ್ಧ ಆಕ್ರೋಶ

[ad_2]

Source link publictv.in

Leave a Reply

Your email address will not be published. Required fields are marked *