Advertisement

ಜಮ್ಮು-ಕಾಶ್ಮೀರ, ಲಡಾಖ್‌ ಪಾಕ್‌ನ ಭಾಗ ಅಂತ ತೋರಿಸಿ ಯಡವಟ್ಟು – ನೇಪಾಳದ ಏರ್‌ಲೈನ್ಸ್‌ ಕ್ಷಮೆಯಾಚನೆ

[ad_1]

Nepal Airlines

ಕಠ್ಮಂಡು: ಭಾರತದ ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು-ಕಾಶ್ಮೀರ ಮತ್ತು ಲಡಾಖ್‌ ಅನ್ನು ಪಾಕಿಸ್ತಾನದ ಭಾಗ ಎಂದು ತೋರಿಸಿ ಯಡವಟ್ಟು ಮಾಡಿದ್ದ ನೇಪಾಳದ ಸರ್ಕಾರಿ ಒಡೆತನದ ವಿಮಾನ ಯಾನ ಸಂಸ್ಥೆ ಕ್ಷಮೆಯಾಚಿಸಿದೆ.

ನಿನ್ನೆ (ಏ.29) ಈ ಕುರಿತು ವೈಮಾನಿಕ ಜಾಲದ ನಕ್ಷೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿತ್ತು. ಈ ಮಾರ್ಗ ನಕ್ಷೆಯ ಪೋಸ್ಟ್ ಎಕ್ಸ್ ಖಾತೆ ಹಾಗೂ ಫೇಸ್‌ಬುಕ್‌ನಲ್ಲಿ ವೈರಲ್ ಆಗಿತ್ತು. ಆಕ್ರೋಶ ತೀವ್ರಗೊಳ್ಳುತ್ತಿದ್ದಂತೆಯೇ ಈ ಪೋಸ್ಟ್ ಅನ್ನು ಅಳಿಸಿ ಹಾಕಿರುವ ನೇಪಾಳ ವಿಮಾನಯಾನ ಸಂಸ್ಥೆ, ಇದು ನೇಪಾಳದ ಅಥವಾ ನೇಪಾಳ ವಿಮಾನಯಾನ ಸಂಸ್ಥೆಯ ಅಧಿಕೃತ ನಿಲುವಲ್ಲ. ನಾವು ವೈಮಾನಿಕ ಜಾಲದ ನಕ್ಷೆಯಲ್ಲಿನ ತಪ್ಪಿಗೆ ಪ್ರಾಮಾಣಿಕವಾಗಿ ಕ್ಷಮೆ ಕೋರುತ್ತೇವೆ. ಈ ನಕ್ಷೆಯಲ್ಲಿ ಅಂತಾರಾಷ್ಟ್ರೀಯ ಗಡಿಗಳಿಗೆ ಸಂಬಂಧಿಸಿದಂತೆ ನಕ್ಷೆಯ ಲೋಪ ಕಂಡು ಬಂದಿದೆ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ. ಇದನ್ನೂ ಓದಿ: Catch Controversy | ಜೇಸನ್‌ ಹೋಲ್ಡರ್‌ ಕ್ಯಾಚ್‌ ವಿವಾದ – ಅಂಪೈರ್‌ ತೀರ್ಪಿನ ವಿರುದ್ಧ ಆಕ್ರೋಶ

ಈ ಕುರಿತು ಭಾರತೀಯ ಬಳಕೆದಾರರು ವಿಮಾನಯಾನ ಸಂಸ್ಥೆಯನ್ನು ತರಾಟೆಗೆ ತೆಗೆದುಕೊಂಡಿದ್ದರು. ತಕ್ಷಣವೇ ಬೈಕಾಟ್ ನೇಪಾಳ ಏರ್‌ಲೈನ್ಸ್ ಎಂಬ ಹ್ಯಾಶ್ ಟ್ಯಾಗ್ ಕೂಡ ಶುರುವಾಗಿತ್ತು. ಈ ಲೋಪದ ವಿರುದ್ಧ ನೇಪಾಳದೊಂದಿಗೆ ರಾಜತಾಂತ್ರಿಕ ಪ್ರತಿಭಟನೆಯನ್ನು ದಾಖಲಿಸಬೇಕು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹಾಗೂ ವಿಮಾನಯಾನ ಸಚಿವಾಲಯಗಳಿಗೆ ಸಾಮಾಜಿಕ ಮಾಧ್ಯಮ ಬಳಕೆದಾರರು ಆಗ್ರಹಿಸಿದ್ದರು.

ಭಾರತವು ನೇಪಾಳದ ಲಕ್ಷಾಂತರ ಮಂದಿಗೆ ಉದ್ಯೋಗ, ಇಂಧನ ನೀಡಿದೆ. ವ್ಯಾಪಾರಕ್ಕೆ ಅವಕಾಶ ಮಾಡಿಕೊಟ್ಟಿದೆ. ವಿಪತ್ತು ಪರಿಹಾರವನ್ನು ಒದಗಿಸುವ ಮೂಲಕ ನೆರವು ನೀಡಿದೆ ಎಂದು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಗಮನ ಸೆಳೆದಿದ್ದರು. ಇದನ್ನೂ ಓದಿ:226 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಖಚಿತ – ಟುಡೇಸ್‌ ಚಾಣಕ್ಯ ಸಮೀಕ್ಷೆ ತಳ್ಳಿಹಾಕಿದ ದೀದಿ


[ad_2]

Source link publictv.in

Leave a Reply

Your email address will not be published. Required fields are marked *