Advertisement

ವಿಧಾನಸಭೆಗೆ ಕುಡಿದು ಬಂದಿದ್ರಾ ಪಂಜಾಬ್‌ ಸಿಎಂ?- ಆಲ್ಕೋಹಾಲ್‌ ಟೆಸ್ಟ್‌ಗೆ ವಿಪಕ್ಷಗಳ ಒತ್ತಾಯ

[ad_1]

bhagwant maan

ಚಂಡೀಗಢ: ಪಂಜಾಬ್ ವಿಧಾನಸಭೆಯಲ್ಲಿ ಕಾರ್ಮಿಕ ದಿನಾಚರಣೆಯ ವಿಶೇಷ ಅಧಿವೇಶನದ ವೇಳೆ ಮುಖ್ಯಮಂತ್ರಿ ಭಗವಂತ್ ಮಾನ್ (Bhagwant Mann) ಕುಡಿದ ಮತ್ತಿನಲ್ಲಿ ಸದನಕ್ಕೆ ಹಾಜರಾಗಿದ್ದಾರೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.

ಮುಖ್ಯಮಂತ್ರಿ ಮದ್ಯದ ಅಮಲಿನಲ್ಲಿ ವಿಧಾನಸಭೆಗೆ ಬಂದಿದ್ದಾರೆ ಎಂದು ಕಾಂಗ್ರೆಸ್ ಶಾಸಕರೊಬ್ಬರು ಹೇಳಿಕೊಂಡ ನಂತರ ವಿವಾದ ಭುಗಿಲೆದ್ದಿತು. ವಿರೋಧ ಪಕ್ಷದ ನಾಯಕ ಪ್ರತಾಪ್ ಸಿಂಗ್ ಬಜ್ವಾ ಅವರು ಎಲ್ಲಾ ಶಾಸಕರು ಆಲ್ಕೋಹಾಲ್ ಮೀಟರ್ ಪರೀಕ್ಷೆಗೆ ಒಳಗಾಗಬೇಕೆಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ಇಬ್ಬರ ಜಗಳ ಮೂರನೇಯವನಿಗೆ ಲಾಭದಂತಾಗಿದೆ, ಸಿಎಂ ಆಗಲು ಮಲ್ಲಿಕಾರ್ಜುನ ಖರ್ಗೆಯೂ ಪ್ರಯತ್ನಿಸ್ತಿದ್ದಾರೆ: ಆರ್‌.ಅಶೋಕ್‌

ಶಿರೋಮಣಿ ಅಕಾಲಿ ದಳ ಕೂಡ ಮುಖ್ಯಮಂತ್ರಿಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ವಿಧಾನಸಭೆಯಿಂದ ವೀಡಿಯೊಗಳನ್ನು ಬಿಡುಗಡೆ ಮಾಡಿ ಗಂಭೀರ ಆರೋಪಗಳನ್ನು ಮಾಡಿದೆ. ಕಾರ್ಮಿಕ ದಿನದಂದು ಮದ್ಯ ಸೇವಿಸಿದ ನಂತರ ಭಗವಂತ್ ಮಾನ್ ವಿಧಾನಸಭೆಗೆ ಬಂದಿದ್ದಾರೆ ಎಂಬುದು ತುಂಬಾ ನಾಚಿಕೆಗೇಡಿನ ಸಂಗತಿ ಎಂದು ಪಕ್ಷ ಟೀಕಿಸಿದೆ.

ಸತ್ಯವನ್ನು ತಿಳಿಯಲು ಭಗವಂತ್ ಮಾನ್ ಅವರನ್ನು ಪಂಜಾಬ್ ಜನರ ಸಮ್ಮುಖದಲ್ಲಿ ಡೋಪ್ ಪರೀಕ್ಷೆಗೆ ಒಳಪಡಿಸಬೇಕೆಂದು ಅಕಾಲಿ ದಳ ಒತ್ತಾಯಿಸಿದೆ. ರಾಜ್ಯದ ಕಾರ್ಮಿಕ ವರ್ಗಕ್ಕೆ ಗೌರವ ಸಲ್ಲಿಸಲು ಮೇ 1 ರಂದು ಕಾರ್ಮಿಕ ದಿನದಂದು ಎಎಪಿ ಸರ್ಕಾರ ವಿಧಾನಸಭೆಯ ವಿಶೇಷ ಅಧಿವೇಶನವನ್ನು ಕರೆದಿತ್ತು.

[ad_2]

Source link publictv.in

Leave a Reply

Your email address will not be published. Required fields are marked *