Advertisement

ಟೈಯರ್ ಪಂಚರ್ ಆದ್ರೆ ಇದೊಂದು ಟ್ರಿಕ್ಸ್ ಯೂಸ್ ಮಾಡಿ

[ad_1]

ವಾಹನಗಳಲ್ಲಿ ಪ್ರಯಾಣ ಮಾಡುವ ಸಂದರ್ಭದಲ್ಲಿ ಕೆಲವೊಮ್ಮೆ ನಮ್ಮ ನಸೀಬುಕೆಟ್ಟು ಟೈಯರ್ ಪಂಚರ್ ಆಗುವ ಸಂಭವಗಳು ಉಂಟು. ಅದರಲ್ಲಿಯೂ ಕೂಡ ನಿರ್ಜನ ಪ್ರದೇಶದಲ್ಲಿ ಇದ್ದ ಸಂದರ್ಭ ಈ ರೀತಿ ಪಂಚರ್ ಆದರೆ ಎಂಥವರಿಗೂ ಏನು ಮಾಡಬೇಕೆಂಬುದು ತೋಚುವುದಿಲ್ಲ. ಕಾರಲ್ಲಿ ಬೇರೆ ಸ್ಟೆಪ್ನಿ ಇದ್ದರೆ ಓಕೆ. ಆದರೆ ಏನು ಇಲ್ಲದಿದ್ದರೆ ಏನು ಮಾಡಬೇಕು ಗೊತ್ತಾ? ಈ ಸಿಂಪಲ್ ಟ್ರಿಕ್ಸ್ ಯೂಸ್ ಮಾಡಿದರೆ ನಿಮ್ಮ ಟಯರ್ 90 ಕಿಲೋಮೀಟರ್ ಆರಾಮಾಗಿ ಓಡುತ್ತೆ.

ಟ್ಯೂಬ್‌ಲೆಸ್ ಟೈರ್‌ಗಳಂತಹ (Tubeless Tyre) ಹೊಸ ತಂತ್ರಜ್ಞಾನವು ವಾಹನ ಚಾಲಕರಿಗೆ ಪಂಚರ್ ಸಮಸ್ಯೆಯಿಂದ ಬಿಗ್ ರಿಲೀಫ್ ನೀಡಿದೆ. ಪಂಕ್ಚರ್ ಆದ ಸಂದರ್ಭದಲ್ಲಿಯೂ ಗಾಳಿಯನ್ನು ತಕ್ಷಣವೇ ಕಳೆದುಕೊಳ್ಳದೇ ಸುರಕ್ಷಿತ ಸ್ಥಳವನ್ನು ತಲುಪಲು ಈ ಟೈರ್‌ಗಳು ಸಹಾಯ ಮಾಡುತ್ತವೆಯಂತೆ. 

ತಜ್ಞರ ಪ್ರಕಾರ, ಒಂದು ಸಣ್ಣ ಮೊಳೆ ಅಥವಾ ಯಾವುದಾದರೂ ತೆಳುವಾದ ವಸ್ತು ಟೈರ್​ಗೆ ಚುಚ್ಚಿ, ಅದು ಟೈರ್‌ನಲ್ಲಿಯೇ ಉಳಿದರೂ, ನೀವು ಸುಮಾರು 50 ರಿಂದ 100 ಕಿಲೋಮೀಟರ್‌ಗಳವರೆಗೆ ಕಡಿಮೆ ವೇಗದಲ್ಲಿ ಪ್ರಯಾಣಿಸಬಹುದು. ಇದರಿಂದ ನೀವು ಹತ್ತಿರದಲ್ಲಿರುವ ಮೆಕ್ಯಾನಿಕ್ ಅಂಗಡಿಗೆ ಹೋಗಲು ತುಂಬಾ ಸಹಾಯಕವಾಗಿದೆ. ಅಲ್ಲದೆ ಒಮ್ಮೊಮ್ಮೆ 90 ಕಿ ಮೀ ವರೆಗೂ ಓಡಿಸಬಹುದು. 

ಆದರೆ, ಟೈರ್‌ಗೆ ಏನಾದರೂ ದೊಡ್ಡ ವಸ್ತು ಚುಚ್ಚಿಕೊಂಡರೆ, ಗಾಳಿ ವೇಗವಾಗಿ ಹೊರಹೋಗುತ್ತದೆ. ಇಂತಹ ಸಂದರ್ಭದಲ್ಲಿ ವಾಹನವನ್ನು ಓಡಿಸುವುದು ಅಪಾಯಕಾರಿ. ಅಲ್ಲದೇ, ಗಾಳಿಯ ಒತ್ತಡ (PSI) ತುಂಬಾ ಕಡಿಮೆಯಿದ್ದಾಗ ಪ್ರಯಾಣಿಸಬೇಡಿ. ಏಕೆಂದರೆ ಇದು ಟೈರ್‌ನ ಪಕ್ಕದ ಗೋಡೆಗಳು ಮತ್ತು ರಿಮ್‌ಗೆ ಹಾನಿಯುಂಟು ಮಾಡುತ್ತದೆ.

banner



[ad_2]

Source link

Leave a Reply

Your email address will not be published. Required fields are marked *