Advertisement

ವಿಧಾನಸಭೆಗೆ ಎಣ್ಣೆ ಹೊಡೆದು ಬಂದ್ರಾ ಪಂಜಾಬ್ ಸಿಎಂ? ಆಲ್ಕೋಹಾಲ್ ಟೆಸ್ಟ್ ಗೆ ವಿಪಕ್ಷಗಳ ಒತ್ತಾಯ

[ad_1]

ಪಂಜಾಬ್ ವಿಧಾನಸಭೆಯಲ್ಲಿ ವಿಶೇಷ ಅಧಿವೇಶನ ನಡೆದಿದ್ದು, ಈ ವೇಳೆ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಎಣ್ಣೆ ಹೊಡೆದು ಸದನಕ್ಕೆ ಎಂಟ್ರಿ ಕೊಟ್ಟಿದ್ದಾರೆ ಎಂದು ವಿಪಕ್ಷಗಳು ಆರೋಪಿಸಿದ್ದಾರೆ. ಅಲ್ಲದೆ ಮುಖ್ಯಮಂತ್ರಿಗಳಿಗೆ ಆಲ್ಕೋಹಾಲ್ ಟೆಸ್ಟ್ ಮಾಡಬೇಕೆಂದು ಆಗ್ರಹಿಸಿದ್ದಾರೆ.

ಯಸ್, ಪಂಜಾಬ್ ವಿಧಾನಸಭೆಯಲ್ಲಿ ಕಾರ್ಮಿಕ ದಿನಾಚರಣೆಯ ವಿಶೇಷ ಅಧಿವೇಶನದ ವೇಳೆ ಮುಖ್ಯಮಂತ್ರಿ ಭಗವಂತ್ ಮಾನ್ (Bhagwant Mann) ಕುಡಿದ ಮತ್ತಿನಲ್ಲಿ ಸದನಕ್ಕೆ ಹಾಜರಾಗಿದ್ದಾರೆ  ಎಂದು ಕಾಂಗ್ರೆಸ್ ಶಾಸಕರೊಬ್ಬರು ಹೇಳಿದ್ದಾರೆ. ನಂತರ ವಿವಾದ ಭುಗಿಲೆದ್ದಿತು. ಬಳಿಕ ವಿರೋಧ ಪಕ್ಷದ ನಾಯಕ ಪ್ರತಾಪ್ ಸಿಂಗ್ ಬಜ್ವಾ ಅವರು ಎಲ್ಲಾ ಶಾಸಕರು ಆಲ್ಕೋಹಾಲ್ ಮೀಟರ್ ಪರೀಕ್ಷೆಗೆ ಒಳಗಾಗಬೇಕೆಂದು ಒತ್ತಾಯಿಸಿದ್ದಾರೆ. 

ಮುಖ್ಯಮಂತ್ರಿಗಳ ವರ್ತನೆಯನ್ನು ಗಮನಿಸಿದ ವಿರೋಧ ಪಕ್ಷದ ನಾಯಕ ಪ್ರತಾಪ್ ಸಿಂಗ್ ಬಾಜ್ವಾ, ‘ಸದನದ ಎಲ್ಲಾ ಶಾಸಕರಿಗೂ ತಕ್ಷಣವೇ ಮದ್ಯಪಾನ ಪರೀಕ್ಷೆ ನಡೆಸಬೇಕು’ ಎಂದು ಆಗ್ರಹಿಸಿದರು. ಈ ವೇಳೆ ಆಡಳಿತ ಮತ್ತು ವಿರೋಧ ಪಕ್ಷದ ನಡುವೆ ಮಾತಿನ ಚಕಮಕಿ ಉಂಟಾಯಿತು. ಈ ಸಂಬಂಧ ಕಾಂಗ್ರೆಸ್ ಶಾಸಕರು ಸದನದಿಂದ ಹೊರನಡೆದರು

ಶಿರೋಮಣಿ ಅಕಾಲಿ ದಳ ಕೂಡ ಮುಖ್ಯಮಂತ್ರಿಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ವಿಧಾನಸಭೆಯಿಂದ ವೀಡಿಯೊಗಳನ್ನು ಬಿಡುಗಡೆ ಮಾಡಿ ಗಂಭೀರ ಆರೋಪಗಳನ್ನು ಮಾಡಿದೆ. ಕಾರ್ಮಿಕ ದಿನದಂದು ಮದ್ಯ ಸೇವಿಸಿದ ನಂತರ ಭಗವಂತ್ ಮಾನ್ ವಿಧಾನಸಭೆಗೆ ಬಂದಿದ್ದಾರೆ ಎಂಬುದು ತುಂಬಾ ನಾಚಿಕೆಗೇಡಿನ ಸಂಗತಿ ಎಂದು ಪಕ್ಷ ಟೀಕಿಸಿದೆ.

banner



[ad_2]

Source link

Leave a Reply

Your email address will not be published. Required fields are marked *