Advertisement

ಕನ್ನಡಿಗ ರಾಹುಲ್‌, ನಿಸ್ಸಂಕಾ ಬ್ಯಾಟಿಂಗ್‌ ಅಬ್ಬರಕ್ಕೆ ರಾಜಸ್ಥಾನ್‌ ತತ್ತರ – ಡೆಲ್ಲಿಗೆ 7 ವಿಕೆಟ್‌ಗಳ ಭರ್ಜರಿ ಜಯ

[ad_1]

Delhi Capitals 2

– ಕ್ಯಾಪ್ಟನ್‌ ರಿಯಾನ್‌ ಸ್ಫೋಟಕ ಬ್ಯಾಟಿಂಗ್‌ ಆಟ ವ್ಯರ್ಥ

ಜೈಪುರ: ಕನ್ನಡಿಗ ಕೆ.ಎಲ್‌.ರಾಹುಲ್‌, ಪಾತುಮ್‌ ನಿಸ್ಸಾಂಕಾ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ ರಾಜಸ್ಥಾನ್‌ ರಾಯಲ್ಸ್‌ (Rajasthan Royals) ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ರಾಜಸ್ಥಾನ್ ರಾಯಲ್ಸ್ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 225 ರನ್ ಗಳಿಸಿತು. ಗೆಲುವಿನ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ 5 ಎಸೆತಗಳಿರುವಾಗಲೇ 3 ವಿಕೆಟ್‌ ನಷ್ಟಕ್ಕೆ 226 ರನ್‌ ಗಳಿಸಿ ಭರ್ಜರಿ ಜಯ ಗಳಿಸಿದೆ.

ಚೇಸಿಂಗ್ ಶುರು ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಉತ್ತಮ ಆರಂಭವನ್ನೇ ನೀಡಿತು. ನಿಸ್ಸಾಂಕಾ, ರಾಹುಲ್ ಸೇರಿಕೊಂಡು ಭರ್ಜರಿ ಸಿಕ್ಸ್, ಬೌಂಡರಿಗಳ ಸುರಿಮಳೆ ಸುರಿಸಿದರು. 57 ಎಸೆತಕ್ಕೆ ಬರೋಬ್ಬರಿ 110 ರನ್‌ಗಳ ಜೊತೆಯಾಟವಾಡಿ ತಂಡವನ್ನು ಮುನ್ನಡೆಸಿದರು. 9.3 ಓವರ್‌ನಲ್ಲಿ ಶತಕದ ಗಡಿದಾಟಿದ್ದ ಡೆಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ಬಳಿಕ ನಿತೀಶ್ ರಾಣಾ, ಆಶುತೋಶ್ ವಿಕ್ಟರಿಗೆ ಸಾಥ್ ನೀಡಿದರು.

Delhi Capitals

ಪಾತುಮ್ ನಿಸ್ಸಾಂಕಾ 33 ಎಸೆತಗಳಲ್ಲಿ 62 ರನ್, ಕೆಎಲ್ ರಾಹುಲ್ 40 ಎಸೆತಗಳಲ್ಲಿ 5 ಸಿಕ್ಸ್, 6 ಬೌಂಡರಿ ಬಾರಿಸಿ 75 ರನ್ ಗಳಿಸಿದರು. ನಿತೀಶ್ ರಾಣಾ 17 ಎಸೆತಗಳಲ್ಲಿ 33 ರನ್, ಸ್ಟಬ್ಸ್ 11 ಎಸೆತಗಳಲ್ಲಿ 18 ರನ್, ಆಶುತೋಶ್ 15 ಎಸೆತಗಳಲ್ಲಿ 25 ರನ್ ಗಳಿಸಿದರು.

ರಾಜಸ್ಥಾನ್ ಪರ ಬೌಲಿಂಗ್ ಮಾಡಿದ ರವೀಂದ್ರ ಜಡೇಜಾ, ಆರ್ಚರ್, ತುಷಾರ್ ದೇಶಪಾಂಡೆ ತಲಾ ಒಂದೊಂದು ವಿಕೆಟ್ ಪಡೆದರು.

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ಆರಂಭದಲ್ಲೇ ಉತ್ತಮ ಬ್ಯಾಟಿಂಗ್ ಮಾಡುವಲ್ಲಿ ವಿಫಲವಾಯಿತು. 6 ರನ್ ಇರುವಾಗಲೇ ಮೊದಲ ವಿಕೆಟ್ ಕಳೆದುಕೊಂಡ ರಾಜಸ್ಥಾನ್ 12 ರನ್ ಇರುವಾಗ ಎರಡನೇ ವಿಕೆಟ್ ಕಳೆದುಕೊಂಡಿತು. ಬಳಿಕ ಕ್ರೀಸ್‌ಗೆ ಬಂದ ಜುರೆಲ್ ಹಾಗೂ ರಿಯಾನ್ ಪರಾಗ್ ಬೌಲರ್‌ಗಳನ್ನು ದಂಡಿಸಿ, ಹಿಡಿತ ಸಾಧಿಸಿದರು. ಶತಕದ ಗಡಿಯಲ್ಲಿದ್ದ ರಿಯಾನ್ ಪರಾಗ್ ಸ್ಟಾರ್ಕ್ ಬೌಲಿಂಗ್‌ಗೆ ಬ್ಯಾಟ್ ಬೀಸಿ ಅಕ್ಷರ್ ಪಟೇಲ್‌ಗೆ ಕ್ಯಾಚ್ ನೀಡಿದರು. ಬಳಿಕ ಫೆರೀರಾ ದ್ವಿಶತಕದ ಗುರಿ ನೀಡಲು ನೆರವಾದರು.

ಧ್ರುವ್ ಜುರೆಲ್ 30 ಎಸೆತಗಳಲ್ಲಿ 42 ರನ್, ರಿಯಾನ್ ಪರಾಗ್ 50 ಎಸೆತಗಳಲ್ಲಿ 90 ರನ್, ಫೆರೀರಾ 14 ಎಸೆತಗಳಲ್ಲಿ 47 ರನ್, ರವೀಂದ್ರ ಜಡೇಜಾ 14 ಎಸೆತಗಳಲ್ಲಿ 20 ರನ್ ಗಳಿಸಿದರು. ಡೆಲ್ಲಿ ಪರ ಬೌಲಿಂಗ್ ಮಾಡಿದ ಮಿಚೆಲ್ ಸ್ಟಾರ್ಕ್ 3 ವಿಕೆಟ್ ಕಿತ್ತರು. ಜೇಮಿಸನ್, ಅಕ್ಷರ್ ಪಟೇಲ್, ನಟರಾಜನ್ ತಲಾ 1 ವಿಕೆಟ್ ಪಡೆದುಕೊಂಡರು.

[ad_2]

Source link publictv.in

Leave a Reply

Your email address will not be published. Required fields are marked *