Advertisement

ನಾಳೆ ನಗರ ನಿವಾಸಿಗಳ ಮೊಬೈಲ್‌ಗೆ ಎಮರ್ಜೆನ್ಸಿ ಅಲರ್ಟ್‌ ಸಂದೇಶ, ಕಾರಣವೇನು?

[ad_1]

ಬೆಂಗಳೂರು ಮೇ,2: ನಾಳೆ ನಗರದಲ್ಲಿ ಪ್ರತಿಯೊಬ್ಬರಿಗೆ ಅವರವರ ಮೊಬೈಲ್‌ ಫೋನ್‌ಗಳಿಗೆ ಒಮ್ಮೆಲೆ ಅಲರ್ಟ್‌ ರಿಂಗ್‌ಟೋನ್‌ ಬರಲು ಶುರುವಾಗುತ್ತದೆ. ಇದು ನಿಮಗಷ್ಟೇ ಅಲ್ಲ. ಲಕ್ಷಾಂತರ ಜನರ ಫೋನ್‌ಗಳಲ್ಲಿ ಏಕಕಾಲಕ್ಕೆ ಕರ್ಕಶವಾದ ಅಲರ್ಟ್‌ ಶಬ್ದ ಮೊಳಗುತ್ತದೆ. ಇದಕ್ಕೆ ಜನರು ಗಾಬರಿಯಾಗಬೇಕಿಲ್ಲ. ಇದೇನಿದು ಎನ್ನುವ ಆತಂಕ ತಕ್ಷಣಕ್ಕೆ ಕಾಡಿದರೂ ಕಾಡಬಹುದು.

ಮೊಬೈಲ್‌ ಸ್ಕ್ರೀನ್‌ ಮೇಲೆ ಕೇವಲ TEST ಎನ್ನುವ ಅಕ್ಷರಗಳು ರಾರಾಜಿಸುತ್ತದೆ. ಈ ನಿಗೂಢ ಸಂದೇಶದ ಹಿಂದಿನ ಮರ್ಮವೇನು ಎನ್ನುವ ಕುತೂಹಲ ಎಲ್ಲರಲ್ಲೂ ಕಾಡಬಹುದು. ಆದರೆ ಈ ಅಲರ್ಟ್‌ನಿಂದ ನೀವು ಗಾಬರಿಪಡುವ ಅಗತ್ಯವಿಲ್ಲ. ಇದು ಯಾವುದೇ ಸೈಬರ್‌ ದಾಳಿಯಲ್ಲ ಅಥವಾ ಅನಾಹುತದ ಮುನ್ಸೂಚನೆಯೂ ಅಲ್ಲ. ಇದು ಭಾರತದ ದೂರಸಂಪರ್ಕ ಇಲಾಖೆಯ ಒಂದು ಮಾಸ್ಟರ್‌ ಪ್ಲಾನ್.‌

ಭವಿಷ್ಯದಲ್ಲಿ ಸಂಭವಿಸಬಹುದಾದ ಪ್ರಕೃತಿ ವಿಕೋಪ ಅಥವಾ ತುರ್ತು ಸಂದರ್ಭಗಳಲ್ಲಿ ನಾಗರಿಕರನ್ನು ಎಚ್ಚರಿಸಲು ರೂಪಿಸಲಾದ ಹೈಟೆಕ್ ವ್ಯವಸ್ಥೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ‘ಸಿ-ಡಾಟ್’ ಸಹಯೋಗದೊಂದಿಗೆ ಈ ‘ಪರೀಕ್ಷಾರ್ಥ ಅಲರ್ಟ್ ಸಂದೇಶ ವನ್ನು ಕಳುಹಿಸಲಾಗುತ್ತಿದೆ. ಸುರಕ್ಷಿತ ಸ್ಥಳ ತಲುಪಲು ಜನರಿಗೆ ಮುನ್ಸೂಚನೆ ನೀಡುವ ತಂತ್ರಜ್ಞಾನ ಸರಿಯಾಗಿ ಕೆಲಸ ಮಾಡುತ್ತಿದೆಯೇ ಎಂದು ಪರೀಕ್ಷಿಸುವುದೇ ಇದರ ಉದ್ದೇಶ.

banner

ಹಾಗಾಗಿ ನಾಳೆ ನಿಮ್ಮ ನಿಮ್ಮ ಫೋನ್‌ ಹಠಾತ್ತಾಗಿ ಸೌಂಡ್‌ ಮಾಡಿದರೆ ಬೆಚ್ಚಿಬೀಳುವ ಅಗತ್ಯವಿಲ್ಲ. ಇದು ನಿಮ್ಮ ಸುರಕ್ಷತೆಗೆಂದು ಸರಕಾರ ನಡೆಸುತ್ತಿರುವ ಒಂದು ಸಣ್ಣ ಪರೀಕ್ಷೆ.



[ad_2]

Source link

Leave a Reply

Your email address will not be published. Required fields are marked *