Advertisement

ಪಶ್ಚಿಮ ಬಂಗಾಳದ 15 ಮತಗಟ್ಟೆಗಳಲ್ಲಿ ಮರು ಮತದಾನ ಆರಂಭ

[ad_1]

ಕೋಲ್ಕತ್ತಾ: ಪಶ್ಚಿಮ ಬಂಗಾಳದ (West Bengal) ಚುನಾವಣೆಯಲ್ಲಿ (Election) ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದ 15 ಮತಗಟ್ಟೆಗಳಲ್ಲಿ ಮರು ಮತದಾನ (Repolling) ಆರಂಭವಾಗಿದೆ. ಮಗರ್ಹತ್ ಪಶ್ಚಿಮ ವಿಧಾನಸಭಾ ಕ್ಷೇತ್ರದ 11 ಮತಗಟ್ಟೆಗಳು ಮತ್ತು ಡೈಮಂಡ್ ಹಾರ್ಬರ್‌ನ ನಾಲ್ಕು ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದೆ. ಬೆಳಿಗ್ಗೆ 7 ಗಂಟೆಗೆ ಮತದಾನ ಪ್ರಾರಂಭವಾಗಿದ್ದು, ಸಂಜೆ 6 ಗಂಟೆಯವರೆಗೆ ಮತದಾನ ಮುಂದುವರೆಯಲಿದೆ.

ಈ ಕ್ಷೇತ್ರಗಳಲ್ಲಿ ಏ.29 ರಂದು ಎರಡನೇ ಹಂತದ ಮತದಾನ ನಡೆದಿತ್ತು. ಮತದಾನದ ಬಳಿಕ ಚುನಾವಣಾ ಆಯೋಗಕ್ಕೆ (EC) ಈ ಮತಗಟ್ಟೆಗಳಲ್ಲಿ ಅಕ್ರಮ ನಡೆದಿದೆ ಎಂಬ ದೂರುಗಳು ಬಂದಿದ್ದವು. ಅಕ್ರಮ ಆರೋಪದ ದೂರುಗಳಿಗೆ ಸ್ಪಂದಿಸಿದ ಚುನಾವಣಾ ಆಯೋಗ ದಕ್ಷಿಣ 24 ಪರಗಣ ಜಿಲ್ಲೆಯ 15 ಮತಗಟ್ಟೆಗಳಲ್ಲಿ ಮರು ಮತದಾನ ನಡೆಸುತ್ತಿದೆ. ಇದನ್ನೂ ಓದಿ:

ಈ ಕ್ಷೇತ್ರಗಳಿಂದ ಎಲೆಕ್ಟ್ರಾನಿಕ್ ಮತ ಯಂತ್ರ (ಇವಿಎಂ) ಅಸಮರ್ಪಕ ಕಾರ್ಯ, ಮತಗಟ್ಟೆ ವಶಪಡಿಸಿಕೊಳ್ಳುವಿಕೆ, ಬೆದರಿಕೆ ಹಾಗೂ ಮತದಾನದ ಗೌಪ್ಯತೆಯ ಉಲ್ಲಂಘನೆಯಂತಹ ಅಕ್ರಮಗಳನ್ನು ಉಲ್ಲೇಖಿಸಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು, ಮತಗಟ್ಟೆ ಏಜೆಂಟ್‌ಗಳು, ವೀಕ್ಷಕರು ಮರು ಮತದಾನಕ್ಕೆ ಒತ್ತಾಯಿಸಿದ್ದರು.

ಡೈಮಂಡ್ ಹಾರ್ಬರ್‌ನ ಫಾಲ್ಟಾ ಕ್ಷೇತ್ರದಲ್ಲಿ ಮರು ಮತದಾನದ ಬಗ್ಗೆ ಇಂದು (ಮೇ 2) ನಿರ್ಧಾರ ತೆಗೆದುಕೊಳ್ಳಲಾಗುವುದು, ಏಕೆಂದರೆ ಕ್ಷೇತ್ರದ ವರದಿಗಾಗಿ ಇನ್ನೂ ಕಾಯಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಟಿಎಂಸಿ ನಾಯಕ ಕುನಾಲ್ ಘೋಷ್, ಬಿಜೆಪಿ ದೊಡ್ಡ ಅಂತರದಿಂದ ಸೋಲುತ್ತದೆ ಎಂದು ಗೊತ್ತಾಗಿ ಡೈಮಂಡ್ ಹಾರ್ಬರ್ ಮತ್ತು ಮಗ್ರಹತ್‌ನಲ್ಲಿ ಮರು ಮತದಾನಕ್ಕೆ ಒತ್ತಾಯಿಸಿದೆ. ಜನಮತ ಬಿಜೆಪಿ ವಿರುದ್ಧವಾಗಿದೆ ಮತ್ತು ಅದು ಹಾಗೆಯೇ ಇರುತ್ತದೆ ಎಂದಿದ್ದಾರೆ.

ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ, ಟಿಎಂಸಿಗೆ ಅನುಕೂಲಕರವಾಗಿ ಹಲವಾರು ಬೂತ್‌ಗಳಲ್ಲಿ ಅವ್ಯವಹಾರ ನಡೆದಿವೆ. ಚುನಾವಣಾ ಆಯೋಗದ ಮರು ಮತದಾನದ ನಿರ್ಧಾರದಿಂದ ನಾವು ಸಂತೋಷಗೊಂಡಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: 

[ad_2]

Source link publictv.in

Leave a Reply

Your email address will not be published. Required fields are marked *