Advertisement

ಧೋನಿಯವರಂತೆ 5 ಐಪಿಎಲ್ ಟ್ರೋಫಿ ಗೆಲ್ಲುವುದು ನನ್ನ ಗುರಿ: ಕೆಎಲ್ ರಾಹುಲ್

[ad_1]

KL Rahul MS Dhoni

ನವದೆಹಲಿ: ಮಹೇಂದ್ರ ಸಿಂಗ್ ಧೋನಿಯವರಂತೆ (MS Dhoni) 5 ಐಪಿಎಲ್ ಟ್ರೋಫಿ (IPL Trophy) ಗೆಲ್ಲುವುದು ನನ್ನ ಗುರಿ ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭಿಕ ಆಟಗಾರ ಕೆಎಲ್ ರಾಹುಲ್ (KL Rahul) ಹೇಳಿದ್ದಾರೆ.

ಧೋನಿ ಐಪಿಎಲ್‌ನಲ್ಲಿ ಗಳಿಸಿರುವ ಒಟ್ಟು ರನ್ (5439) ದಾಖಲೆಯನ್ನು ಕೆಎಲ್ ರಾಹುಲ್ ಮುರಿದಿದ್ದರು. ಈ ಕುರಿತು ಸಂದರ್ಶನದಲ್ಲಿ ಮಾತನಾಡಿದ ರಾಹುಲ್, ಮಹೀ ಭಾಯ್ ಅವರ ದಾಖಲೆಯನ್ನು ಮುರಿದಿದ್ದೆ ಎಂಬ ಅರಿವು ನನಗೆ ಇರಲಿಲ್ಲ. ವೈಯಕ್ತಿಯ ದಾಖಲೆಗಳನ್ನು ಸಾಧಿಸುವುದು ಉತ್ತಮ. ಅದು ನಮ್ಮ ಆತ್ಮವಿಶ್ವಾಸವನ್ನು ವೃದ್ಧಿಸುತ್ತದೆ. ಆದರೆ ಧೋನಿಯವರಂತೆ ಐದು ಐಪಿಎಲ್ ಟ್ರೋಫಿಯನ್ನು ಗೆಲ್ಲುವುದೇ ನನಗೆ ಹೆಚ್ಚು ಖುಷಿ ಕೊಡುತ್ತದೆ ಎಂದರು.

ಕ್ರಿಕೆಟ್ ಎಂಬುದು ತಂಡದ ಆಟ. ಟ್ರೋಫಿ ಜಯಿಸುವುದು ತಂಡಗಳ ಗುರಿಯಾಗಿರುತ್ತದೆ. ಅಂತಹ ತಂಡವನ್ನು ಪ್ರತಿನಿಧಿಸುವುದು ಹೆಚ್ಚು ತೃಪ್ತಿ ಕೊಡುವ ಸಂಗತಿ. ಆದ್ದರಿಂದ ಅದೇ ನನ್ನ ಗುರಿ ಎಂದು ರಾಹುಲ್ ಹೇಳಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣದೊಂದಿಗೆ ನನಗೆ ಭಾವನಾತ್ಮಕ ನಂಟಿದೆ. ನನ್ನ ತವರಿನ ಅಂಗಳ ಅದು. ಅಲ್ಲದೇ ಆರ್‌ಸಿಬಿ ಎದುರು ಆಡುವುದು ಕೂಡ ಒಂದು ರೀತಿಯ ವಿಶೇಷ ಸಂಗತಿ ಎಂದಿದ್ದಾರೆ.


[ad_2]

Source link publictv.in

Leave a Reply

Your email address will not be published. Required fields are marked *