[ad_1]
2
ಹರಿದ್ವಾರಕ್ಕೆ ಪ್ರವಾಸ ಬಂದಿದ್ದ ಮಹಿಳೆಯೊಬ್ಬರು ತಮ್ಮ ಕುಟುಂಬದೊಂದಿಗೆ ಗಂಗಾ ನದಿಯ ಘಾಟ್‌ಗೆ ಭೇಟಿ ನೀಡಿದ್ದು, ಸ್ನಾನ ಮಾಡಲೆಂದು ಇಳಿಯುವಾಗ ತಮ್ಮ ಸಕು ನಾಯಿಯನ್ನು ಕೂಡಾ ಜೊತೆಗೆ ಕರೆತಂದಿದ್ದರು. ಪ್ರಾಣಿ ಪ್ರೀತಿ ಮಾನವೀಯ ಗುಣವೇ ಆದರೂ, ಮಹಿಳೆಯು ಆ ಪವಿತ್ರ ಕ್ಷೇತ್ರದಲ್ಲಿ ತೋರ್ಪಡಿಸಿದ ರೀತಿ ವಿವಾದಕ್ಕೆ ಕಾರಣವಾಯಿತು.


ಭಕ್ತರು ಪುಣ್ಯ ಸ್ನಾನ ಮಾಡುವ ಆ ಸ್ಥಳದಲ್ಲಿ ನಾಯಿಗೆ ನದಿಯಲ್ಲಿ ಸ್ನಾನ ಮಾಡಿಸುತ್ತಿರುವುದನ್ನು ಕಂಡ ಅಲ್ಲದ್ದ ಅರ್ಚಕರು, ಸ್ಥಳೀಯ ನಿವಾಸಿಗಳು ಮತ್ತು ಭಕ್ತರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. “ಇದು ಕೋಟ್ಯಂತರ ಜನರ ಶ್ರದ್ಧಾಕೇಂದ್ರ, ಇಲ್ಲಿ ಪ್ರಾಣಿಗಳಿಗೆ ಸ್ನಾನ ಮಾಡಿಸುವುದು ಧಾರ್ಮಿಕ ವಿಧಿವಿಧಾನಗಳಿಗೆ ಮತ್ತು ಶತಶತಮಾನಗಳಿಂದ ನಡೆದುಬಂದ ಸಂಪ್ರದಾಯಕ್ಕೆ ವಿರುದ್ಧವಾದುದು” ಎಂದು ಮಹಿಳೆಯನ್ನು ತಡೆದರು.
ಆದರೆ ಮಹಿಳೆ ಸ್ಥಳೀಯರ ಜೊತೆ ಉದ್ಧಟತನದಿಂದ ಕಿರುಚಾಡುತ್ತಾ ವಾಗ್ವಾದಕ್ಕೆ ಇಳಿದಿದ್ದು, ತನಗೂ ಮತ್ತು ತನ್ನ ಪ್ರಾಣಿಗೂ ಪವಿತ್ರ ನದಿಯಲ್ಲಿ ಸ್ನಾನ ಮಾಡುವ ಸಮಾನ ಹಕ್ಕಿದೆ ಎಂದು ವಾದ ಮಾಡಿದ್ದು, ಪರಿಸ್ಥಿತಿಯನ್ನು ಉದ್ವಿಗ್ನಗೊಳಿಸಿರು.
ನಂತರ ಭಕ್ತರ ಆಕ್ರೋಶ ಹೆಚ್ಚಾದಾಗ, ಮಹಿಳೆಯ ಕುಟುಂಬದ ಸದಸ್ಯರು ಆಕೆಯನ್ನು ಅಲ್ಲಿಂದ ಕರೆದುಕೊಂಡು ಹೋಗಿದ್ದು, ಗಲಾಟೆ ನಂತರ ತಣ್ಣಗಾಯ್ತು.
[ad_2]
Source link


















Leave a Reply