Advertisement

ಡಾ.ರಾಜ್ ಸಮಾಧಿಯ ಪೋಸ್ಟ್ ಪ್ರಶ್ನಿಸಿ ಮನೆಗೆ ಮುತ್ತಿಗೆ ಹಾಕಿದ್ದವರ ವಿರುದ್ಧ ಚೇತನ್ ದೂರು

[ad_1]

chetan 13 2

ಬೆಂಗಳೂರು: ಡಾ.ರಾಜ್‌ಕುಮಾರ್ ಸಮಾಧಿ ಬಗ್ಗೆ ಹಾಕಿದ್ದ ಪೋಸ್ಟ್ ಪ್ರಶ್ನಿಸಿ ಮನೆಗೆ ಮುತ್ತಿಗೆ ಹಾಕಿದ್ದವರ ವಿರುದ್ಧ ನಟ ಚೇತನ್ ಅಹಿಂಸಾ (Chetan Ahimsa) ಇದೀಗ ದೂರು ನೀಡಿದ್ದಾರೆ.

ಇತ್ತೀಚಿಗೆ ಡಾ.ರಾಜ್‌ಕುಮಾರ್ ಸಮಾಧಿ ಜಾಗದ ಬಗ್ಗೆ ತಗಾದೆ ತೆಗೆದಿದ್ದ ನಟ ಚೇತನ್ ವಿರುದ್ಧ ಆಕ್ರೋಶ ಹೊರಬಿದ್ದಿತ್ತು. ಪೋಸ್ಟ್ ಪ್ರಶ್ನಿಸಿ ಮನೆಗೆ ನುಗ್ಗಿದ್ದವರ ವಿರುದ್ಧ ಇಂದು (ಮೇ 2) ನಟ ಚೇತನ್ ಅಹಿಂಸಾ ಶೇಷಾದ್ರಿಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಚೇತನ್‌ ಒಬ್ಬ ಅರೆಹುಚ್ಚ, ನಿರುದ್ಯೋಗಿ, ಮುಠ್ಠಾಳ, ರಾಜ್ಯದಿಂದ ಗಡೀಪಾರು ಮಾಡ್ಬೇಕು – ಸಾರಾ ಗೋವಿಂದು ಕಿಡಿ

ಸಾ.ರಾ ಗೋವಿಂದು, ಶಿವರಾಮೇಗೌಡ, ಶಿವಕುಮಾರ್ ನಾಯ್ಕ್ ಸೇರಿದಂತೆ ಹಲವರ ವಿರುದ್ಧ ದೂರು ದಾಖಲಿಸಿದ್ದಾರೆ. ದೂರು ನೀಡಿದ ಬಳಿಕ ಪ್ರತಿಕ್ರಿಯಿಸಿದ ಚೇತನ್, ಕಳೆದ ಶನಿವಾರ ಸಾ.ರಾ ಗೋವಿಂದು ಮನೆ ಹತ್ರ ಬಂದಿದ್ರು. ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ರು. ಸಾರಾ ಗೋವಿಂದು ಹಿನ್ನೆಲೆಯೇ ಬೇರೆ ಇದೆ. ಅವರು ದುರಹಂಕಾರದಲ್ಲಿ ಮತ್ತು ಗೂಂಡಾಗಿರಿ ಮಾಡ್ತಿದ್ದಾರೆ. ಎಲ್ಲಾ ಸಂಘಟನೆಗಳು ಸೇರಿ ದಾಖಲೆ ಸಮೇತ ದೂರು ನೀಡಿದ್ದೇವೆ ಅಂತ ತಿಳಿಸಿದ್ದಾರೆ.

ವಿವಾದ ಏನು?
ಏ.24ರಂದು ಡಾ.ರಾಜ್‌ಕುಮಾರ್ ಹುಟ್ಟುಹಬ್ಬದ ದಿನ ರಾತ್ರಿ ನಟ ಚೇತನ್ ಅಹಿಂಸಾ ರಾಜ್‌ಕುಮಾರ್ ಸಮಾಧಿ ಬಗ್ಗೆ ಪೋಸ್ಟ್ ಹಾಕಿದ್ದರು. ಸಮಾಧಿಗೆ 2.5 ಎಕರೆ ಜಾಗ ನೀಡಿದ್ದು ಸರಿನಾ? ಅಂತ ಪ್ರಶ್ನೆ ಮಾಡಿದ್ದರು. 21ನೇ ಶತಮಾನದಲ್ಲಿ ಪ್ರಮುಖ ಹೋರಾಟವೇ ಭೂಮಿಯಾಗಿದೆ. ಸರ್ಕಾರ ಅದನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕರ ಉಪಯೋಗಕ್ಕೆ ಹಂಚಬೇಕು. ಮತಗಳ ಲಾಭದ ಉದ್ದೇಶದಿಂದ ಹಂಚಬಾರದು ಎಂದು ಪೋಸ್ಟ್ ಮಾಡಿದ್ದರು. ಇದರ ಬೆನ್ನಲ್ಲೇ ರಾಜ್ ಅಭಿಮಾನಿಗಳು ಚೇತನ್ ವಿರುದ್ಧ ಆಕ್ರೋಶ ಹೊರಹಾಕಿದ್ದರು.

ಚೇತನ್ ಪೋಸ್ಟ್ನಿಂದ ಡಾ. ರಾಜ್ ಅಭಿಮಾನಿಗಳು ರೊಚ್ಚಿಗೆದ್ದು, ನಿರ್ಮಾಪಕ ಸಾರಾ ಗೋವಿಂದು, ಫಿಲ್ಮ್ ಚೇಂಬರ್ ಅಧ್ಯಕ್ಷೆ-ನಟಿ ಜಯಮಾಲ, ಹಿರಿಯ ನಟ ಸುಂದರ್ ರಾಜ್ ಅವರು ಚೇತನ್ ವಿರುದ್ಧ ಕೆಂಡಕಾರಿದ್ದರು. ಇನ್ನು, ಡಾ.ರಾಜ್‌ಕುಮಾರ್ ಸೇನೆ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿತ್ತು. ಅಲ್ಲದೇ ನಿರ್ಮಾಪಕ ಸಾರಾ ಗೋವಿಂದು ಸೇರಿದಂತೆ ಹಲವಾರು ಅಭಿಮಾನಿಗಳು ಚೇತನ್ ನಿವಾಸಕ್ಕೆ ಮುತ್ತಿಗೆ ಹಾಕಿದ್ದರು. ಇದರ ಬೆನ್ನಲ್ಲೇ ನಟ ಚೇತನ್ ಕೂಡ ಅಭಿಮಾನಿಗಳಿಗೆ ಕ್ಷಮೆ ಕೇಳಿದ್ದರು. ನನ್ನ ಹೇಳಿಕೆಯಿಂದ ಯಾರದಾದ್ರೂ ಮನಸ್ಸಿಗೆ ನೋವು ಆಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ. ಕ್ಷಮೆನೂ ಕೇಳುತ್ತೇನೆ, ಯಾರಿಗೂ ನೋವು ಮಾಡುವ ಉದ್ದೇಶ ನನಗಿರಲಿಲ್ಲ. ನಾನು ಸಹ ರಾಜ್ ಕುಮಾರ್ ಅಭಿಮಾನಿ ಎಂದಿದ್ದರು.ಇದನ್ನೂ ಓದಿ: ರಾಜ್‌ಕುಮಾರ್‌ ಸಮಾಧಿ ಬಗ್ಗೆ ವಿವಾದಾತ್ಮಕ ಪೋಸ್ಟ್‌ – ಅಭಿಮಾನಿಗಳು ಮುತ್ತಿಗೆ ಹಾಕುತ್ತಿದ್ದಂತೆ ಕ್ಷಮೆಯಾಚಿಸಿದ ಚೇತನ್‌


[ad_2]

Source link publictv.in

Leave a Reply

Your email address will not be published. Required fields are marked *