Advertisement

ಜೋಯಿಡಾದಲ್ಲಿ 7ನೇ ತರಗತಿ ವಿದ್ಯಾರ್ಥಿನಿ ಹೃದಯಾಘಾತಕ್ಕೆ ಬಲಿ

[ad_1]

Heart Attack

ಕಾರವಾರ: 7ನೇ ತರಗತಿ ಶಾಲಾ ಬಾಲಕಿಯೊಬ್ಬಳು ಹೃದಯಾಘಾತದಿಂದ (Heart Attack) ಸಾವನ್ನಪ್ಪಿದ ಘಟನೆ ಜೋಯಿಡಾ (Joida) ತಾಲೂಕಿನ ಚಾಪೇಲಿ – ಗವಳಿವಾಡ ಗ್ರಾಮದಲ್ಲಿ ನಡೆದಿದೆ.

ಮೃತ ಬಾಲಕಿಯನ್ನು ಗ್ರಾಮದ ಗಂಗು ಗವಳಿ (13) ಎಂದು ಗುರುತಿಸಲಾಗಿದೆ. ಬಾಲಕಿಗೆ ಯಾವುದೇ ಕಾಯಿಲೆಯಾಗಲಿ ಅಥವಾ ಹೃದಯ ಸಂಬಂಧಿ ಸಮಸ್ಯೆಗಳಾಗಲಿ ಇರಲಿಲ್ಲ. ಎಲ್ಲ ಮಕ್ಕಳಂತೆ ನಿತ್ಯ ಆಟ ಪಾಠದಲ್ಲಿ ಇರುತ್ತಿದ್ದ ಗಂಗು, ಸಾವಿಗೂ ಮುನ್ನ ದಿನಪೂರ್ತಿ ಆಟ ಆಡಿದ್ದಳು. ಇದನ್ನೂ ಓದಿ: ಹೃದಯಾಘಾತದಿಂದ ನ್ಯಾಯಾಧೀಶೆ ಸಾವು

ರಾತ್ರಿ ಊಟ ಮಾಡಿ ಮಲಗಿದವಳು ಬೆಳಿಗ್ಗೆ ಎದ್ದು ವಾಂತಿ ಮಾಡಿದ್ದಳು. ವಾಂತಿ ಮಾಡಿದ ಕೆಲವೇ ಕ್ಷಣಕ್ಕೆ ವಿದ್ಯಾರ್ಥಿನಿ ಕೊನೆಯುಸಿರೆಳೆದಿದ್ದಾಳೆ. ರಾಮನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಸ್ವಿಮ್ಮಿಂಗ್ ಮಾಡುವಾಗಲೇ ಹೃದಯಾಘಾತದಿಂದ ಸೇನಾಧಿಕಾರಿ ಸಾವು

[ad_2]

Source link publictv.in

Leave a Reply

Your email address will not be published. Required fields are marked *