Advertisement

ಆಧಾರ್‌ನಲ್ಲಿ ಕೇವಲ ಫೋಟೋ, ಕ್ಯೂಆರ್‌ ಕೋಡ್‌ – ಈ ವರದಿ ಫೇಕ್‌ ನ್ಯೂಸ್‌ ಎಂದ ಪಿಐಬಿ

[ad_1]

aadhaar has only photo and qr code pib calls this report fake news

ನವದೆಹಲಿ: ಈ ವರ್ಷದ ಅಂತ್ಯದ ವೇಳೆಗೆ ಆಧಾರ್‌ ಕಾರ್ಡ್‌ನಲ್ಲಿ (Aadhar Card) ಕೇವಲ ಫೋಟೋ ಮತ್ತು ಕ್ಯೂಆರ್‌ ಕೋಡ್‌ (QR Code) ಮಾತ್ರ ಇರಲಿದೆ ಎಂಬ ಸುದ್ದಿ ಸುಳ್ಳು ಎಂದು ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋ (PIB) ತಿಳಿಸಿದೆ.

ಆಧಾರ್‌ ಕಾರ್ಡ್‌ನಲ್ಲಿ ಯಾವುದೇ ಬದಲಾವಣೆಗಳಿಗೆ ಯಾವುದೇ ಯೋಜನೆ ಇಲ್ಲ. ಇಂತಹ ಸುದ್ದಿ ವರದಿಗಳು ಮತ್ತು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಜನರ ಮನಸ್ಸಿನಲ್ಲಿ ಅನಗತ್ಯ ಗೊಂದಲವನ್ನು ಸೃಷ್ಟಿಸುತ್ತಿವೆ ಎಂದು ಹೇಳಿದೆ.

ಜನರು ಅಂತಹ ವರದಿಗಳು ಮತ್ತು ಸಾಮಾಜಿಕ ಮಾಧ್ಯಮ (Social Media) ಪೋಸ್ಟ್‌ಗಳನ್ನು ನಿರ್ಲಕ್ಷಿಸಬೇಕು. UIDAI ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳು ಮತ್ತು PIB ಮೂಲಕ ಹೊರಡಿಸಲಾದ ಪತ್ರಿಕಾ ಪ್ರಕಟಣೆಗಳನ್ನು ಮಾತ್ರ ನಂಬಬೇಕೆಂದು ಮನವಿ ಮಾಡಿದೆ. ಇದನ್ನೂ ಓದಿ: ಬೆಂಗಳೂರಿನ ಗ್ಯಾಲಕ್ಸ್ ಐ ಅಭಿವೃದ್ಧಿ ಪಡಿಸಿದ ವಿಶ್ವದ ಮೊದಲ OptoSAR ಉಪಗ್ರಹ ಉಡಾವಣೆ ಯಶಸ್ವಿ – ಪಾಕಿಸ್ತಾನ, ಚೀನಾಗೆ ತಲೆನೋವು ಯಾಕೆ?

ಫೇಕ್‌ ಸುದ್ದಿ ಏನಿತ್ತು?
ಆಧಾರ್ ಕಾರ್ಡ್‌ನಿಂದ ಹೆಸರು ಮತ್ತು ವಿಳಾಸವನ್ನು ತೆಗೆದುಹಾಕಲು UIDAI ಸಿದ್ಧತೆ ನಡೆಸುತ್ತಿದ್ದು, ಫೋಟೋ ಮತ್ತು ಕ್ಯೂಆರ್ ಕೋಡ್ (QR Code) ಅನ್ನು ಮಾತ್ರ ಇರಿಸಲಾಗುತ್ತದೆ. ಡೇಟಾ ದುರುಪಯೋಗ ಮತ್ತು ಗುರುತಿನ ಕಳ್ಳತನವನ್ನು ಸಂಪೂರ್ಣವಾಗಿ ತೊಡೆದುಹಾಕುವುದು ಇದರ ಉದ್ದೇಶವಾಗಿದೆ ಎಂಬ ಸುದ್ದಿ ಹರಿದಾಡುತ್ತಿತ್ತು.



[ad_2]

Source link publictv.in

Leave a Reply

Your email address will not be published. Required fields are marked *