Advertisement

Tamil Nadu Trends | ಅಪ್ಪ-ಮಗನಿಗೆ ಹಿನ್ನಡೆ – ಶತಕದ ಗಡಿ ದಾಟಿದ ‘ಜನ ನಾಯಗನ್’

[ad_1]

ಚೆನ್ನೈ: ತೀವ್ರ ಕುತೂಹಲ ಕೆರಳಿಸಿದ್ದ ತಮಿಳುನಾಡಿನಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಇದೇ ಮೊದಲ ಬಾರಿಗೆ ಚುನಾವಣಾ ಅಖಾಡಕ್ಕೆ ಇಳಿದಿರುವ ದಳಪತಿ ವಿಜಯ್‌ (Thalapathy vijay) ನೇತೃತ್ವದ ಟಿವಿಕೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತಿದೆ.

ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಟಿವಿಕೆ 101, ಆಡಳಿತ ಡಿಎಂಕೆ (DMK) 52 ಎಐಎಡಿಎಂಕೆ ಮೈತ್ರಿಕೂಟ 79 ಸ್ಥಾನಗಳು ಹಾಗೂ ಇತರೇ ಒಂದು ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

ಅಪ್ಪ – ಮಗನಿಗೆ ಹಿನ್ನಡೆ
ಇನ್ನೂ ಆಡಳಿತ ಡಿಎಂಕೆ ಪಕ್ಷಕ್ಕೆ ಭಾರೀ ಹಿನ್ನಡೆ ಆಗಿದೆ. ಡಿಎಂಕೆ ಭದ್ರಕೋಟೆ ಎಂದು ಪರಿಗಣಿಸಲಾದ ಉದಯನಿಧಿ ಸ್ಟಾಲಿನ್‌ ಪ್ರತಿನಿಧಿಸಿರುವ ಚೆಪಾಕ್-ತಿರುವಲ್ಲಿಕೇಣಿ ವಿಧಾನಸಭಾ ಕ್ಷೇತ್ರ ಹಾಗೂ ಎಂ.ಕೆ ಸ್ಟಾಲಿನ್‌ ಪ್ರತಿನಿಧಿಸಿರುವ ಕೊಳತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಟಿವಿಕೆ ಮುನ್ನಡೆ ಕಾಯ್ದುಕೊಂಡಿದೆ. ಅಪ್ಪ-ಮಗ ಹಿನ್ನಡೆ ಅನುಭವಿಸುತ್ತಿದ್ದಾರೆ. ಆದ್ರೆ ತಿರುಚಿ ಪೂರ್ವ, ಪೆರಂಬೂರು ಎರಡೂ ಕ್ಷೇತ್ರಗಳಲ್ಲಿ ನಟ ವಿಜಯ್ ಮುನ್ನಡೆ ಕಾಯ್ದುಕೊಂಡಿದ್ದಾರೆ.

TVK vs DMKTVK vs DMK

ತಮಿಳುನಾಡಿನಲ್ಲಿ ಸಮ್ಮಿಶ್ರ ಸರ್ಕಾರ?
ತಮಿಳುನಾಡಿನಲ್ಲಿ ಆರಂಭಿಕ ಮತ ಎಣಿಕೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಟಿವಿಕೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತಿದೆ. ಬಹುಮತಕ್ಕೆ 118 ಸ್ಥಾನಗಳು ಬೇಕಿದ್ದು, ಈಗಾಗಲೇ ಟಿವಿಕೆ 100 ಸ್ಥಾನಗಳ ಗಡಿ ದಾಟಿದೆ. ಇನ್ನ ಎಐಎಡಿಎಂಕೆ 2ನೇ ಸ್ಥಾನದಲ್ಲಿದ್ದು, ಡಿಎಂಕೆ 3ನೇ ಸ್ಥಾನಕ್ಕೆ ಕುಸಿದಿದೆ. ಹೀಗಾಗಿ ಅತಂತ್ರ ಸ್ಥಿತಿ ನಿರ್ಮಾಣವಾಗಲಿದ್ದು, ಸಮ್ಮಿಶ್ರ ಸರ್ಕಾರ ರಚನೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗ್ತಿದೆ.




[ad_2]

Source link publictv.in

Leave a Reply

Your email address will not be published. Required fields are marked *