Advertisement

ಲಕ್ನೋ ವಿರುದ್ಧ ಮುಂಬೈಗೆ 6 ವಿಕೆಟ್‌ಗಳ ಜಯ

[ad_1]

ಮುಂಬೈ: ಇಲ್ಲಿನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಟೂರ್ನಿಯ 47ನೇ ಪಂದ್ಯದಲ್ಲಿ ಲಕ್ನೋ ವಿರುದ್ಧ ಮುಂಬೈಗೆ 6 ವಿಕೆಟ್‌ಗಳ ಜಯಗಳಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್‌ಜೈಂಟ್ಸ್ ತಂಡವು 20 ಓವರ್‌ಗಳ ಅಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 228 ರನ್ ಗಳಿಸಿತು. ಈ ಗುರಿಯನ್ನು ಬೆನ್ನಟ್ಟಿದ ಮುಂಬೈ 18.4 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 229 ರನ್‌ ಗಳಿಸಿ ಜಯಗಳಿಸಿತು.

ಲಕ್ನೋ ಪರ ಮಿಚೆಲ್ ಮಾರ್ಷ್ 25 ಎಸೆತಗಳಲ್ಲಿ 44 ರನ್ ಹಾಗೂ ನಿಕೋಲಸ್ ಪೂರನ್ 21 ಎಸೆತ 63 ರನ್ ಸ್ಪೋಟಕ ಆಟವಾಡಿದರು. ಡೆತ್‌ ಓವರ್‌ನಲ್ಲಿ ಮಾಕ್ರ್ರಮ್ 25 ಎಸೆತ 31 ರನ್, ಹಿಮ್ಮತ್ ಸಿಂಗ್ 31 ಎಸೆತಗಳಲ್ಲಿ 40 ರನ್ ಗಳಿಸಿ ತಂಡದ ಮೊತ್ತವನ್ನು 225 ರನ್ ಗಡಿ ದಾಟಿಸಿದರು.

ಮುಂಬೈ ಪರ ರಯಾನ್ ರಿಕಲ್ಟನ್ 32 ಎಸೆತಗಳಲ್ಲಿ 8 ಸಿಕ್ಸರ್‌, 6 ಬೌಂಡರಿ ನೆರವಿಂದ 83 ರನ್‌ ಗಳಿಸಿದರು. ರೋಹಿತ್‌ ಶರ್ಮಾ 44 ಎಸೆತಗಳಲ್ಲಿ 7 ಸಿಕ್ಸರ್‌, 6 ಬೌಂಡರಿ ಸಿಡಿಸಿ 84 ರನ್‌ ಕಲೆ ಹಾಕಿದರು. ನಮನ್‌ ಧೀರ್‌ 12 ಎಸೆತಗಳಲ್ಲಿ 23 ರನ್‌ ಗಳಿಸಿ ಅಜೇಯರಾಗಿ ಉಳಿದರು.

[ad_2]

Source link publictv.in

Leave a Reply

Your email address will not be published. Required fields are marked *