Advertisement

WE ARE BACK, back with a BANG! – ಅಸ್ಸಾಂನಲ್ಲಿ ಬಿಜೆಪಿಗೆ ಹ್ಯಾಟ್ರಿಕ್‌ ಜಯ – 3ನೇ ಅವಧಿಗೂ ಶರ್ಮಾ ಸಿಎಂ ಆಗೋದು ಫಿಕ್ಸ್‌

[ad_1]

Himanta Sarmas BJP To Win 70 80 Of Assams 126 Seats NDA Sweep Exit Poll

ಗುವಾಹಟಿ: ಅಸ್ಸಾಂನಲ್ಲಿ (Assam) ಬಿಜೆಪಿ ಹ್ಯಾಟ್ರಿಕ್ ಜಯಭೇರಿ ಬಾರಿಸಿದೆ. 3ನೇ ಅವಧಿಗೂ ಹಿಮಂತ್ ಬಿಸ್ವಾ ಶರ್ಮಾ ಸಿಎಂ ಆಗೋದು ಖಚಿತವಾಗಿದೆ. ಆದ್ರೆ ಕಾಂಗ್ರೆಸ್‌ನ ಗೌರವ್ ಗೊಗೊಯ್ ಸೋಲು ಕಂಡಿರುವುದು ʻಕೈʼ ಪಡೆಗೆ ಮುಖಭಂಗವಾಗಿದೆ.

ಅಸ್ಸಾಂನಲ್ಲಿ 126 ಸದಸ್ಯ ಬಲದ ವಿಧಾನಸಭೆಗೆ ಬಹುಮತಕ್ಕೆ 64 ಸೀಟ್‌ಗಳು ಬೇಕಾಗಿದ್ದವು. ಈ ಪೈಕಿ ಬಿಜೆಪಿ 82, ಕಾಂಗ್ರೆಸ್‌ 19, ಬಿಂಪಿಎಫ್‌ ಮತ್ತು ಎಜಿಪಿ ತಲಾ 10, ಎಐಯುಡಿಎಫ್‌ 2, ಆರ್‌ಜೆಆರ್‌ಡಿ ತಲಾ 2 ಸ್ಥಾನಗಳು ಮತ್ತು ಎಐಟಿಸಿ 1 ಸ್ಥಾನ ಗೆದ್ದಿದೆ. ಈ ಸಂಸತವನ್ನು ಅಸ್ಸಾಂ ಮುಖ್ಯಮಂತ್ರಿಗಳ ಕಚೇರಿ ತನ್ನ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದೆ.

ಹಿಮಂತ ಬಿಸ್ವಾ ಶರ್ಮಾ ಅವರ ಭಾವಚಿತ್ರದೊಂದಿಗೆ `ನಮ್ಮನ್ನ ಮಿಸ್‌ ಮಾಡಿಕೊಂಡ್ರಾ? ನಾವು ಮತ್ತೆ ಹಿಂತಿರುಗಿದ್ದೇವೆ ಎನ್ನುವ ಬ್ಯಾಂಗ್‌ನೊಂದಿಗೆ ಹಿಂತಿರುಗಿದ್ದೇವೆ!ʼ ಎನ್ನುವ ಬರಹವನ್ನ ಹಂಚಿಕೊಂಡಿದೆ.

ಗೆದ್ದ ಮತ್ತು ಸೋತ ಪ್ರಮುಖರು
* ಹಿಮಂತ್ ಬಿಸ್ವಾ ಶರ್ಮಾ – ಬಿಜೆಪಿ – ಜಾಲುಕ್‌ಬರಿ – ಜಯ – ಗೆಲುವಿನ ಅಂತರ: 89,434 (ಪಡೆದ ಮತ 1,27,151)
* ಗೌರವ್ ಗೊಗೋಯ್ – ಕಾಂಗ್ರೆಸ್- ಜೊರ್ಹತ್ – ಸೋಲು – ಗೆಲುವಿನ ಅಂತರ: 23,181 (ಪಡೆದ ಮತ 46,257)



[ad_2]

Source link publictv.in

Leave a Reply

Your email address will not be published. Required fields are marked *