Advertisement

2025ರ ದಸರಾಗೆ 43 ಕೋಟಿ ರೂ. ಖರ್ಚು – 7 ತಿಂಗಳ ಬಳಿಕ ಲೆಕ್ಕ ಕೊಟ್ಟ ಜಿಲ್ಲಾಡಳಿತ

[ad_1]

mysuru dasara jambusavari golden ambari abhimanyu 8

ಮೈಸೂರು: ಕಳೆದ ವರ್ಷದ ನಾಡಹಬ್ಬ ಮೈಸೂರು ದಸರಾದ (Mysuru Dasara) ಖರ್ಚು ವೆಚ್ಚದ ಲೆಕ್ಕವನ್ನು ಮೈಸೂರು ಜಿಲ್ಲಾಡಳಿತ (Mysuru District Administration) ಈಗ ಬಿಡುಗಡೆ ಮಾಡಿದೆ.

ದಸರಾ ಮುಗಿದು 7 ತಿಂಗಳ ಬಳಿಕ ಖರ್ಚು ವೆಚ್ಚದ ಲೆಕ್ಕವನ್ನು ಜಿಲ್ಲಾಡಳಿತ ಬಿಡುಗಡೆ ಮಾಡಿದ್ದು, ಕಳೆದ ವರ್ಷ ಒಟ್ಟು 43 ಕೋಟಿ ರೂ. ಖರ್ಚು ಮಾಡಿರುವುದಾಗಿ ಹೇಳಿದೆ.

Mysuru Dasara 21

ಯುವದಸರಾಗೆ ಬರೋಬ್ಬರಿ 16 ಕೋಟಿ ರೂ. ವೆಚ್ಚ ಮಾಡಿದೆ. ಸಿವಿಲ್ ಕಾಮಗಾರಿಗಳಿಗೆ 6 ಕೋಟಿ ರೂ. ಏರ್ ಶೋಗೆ 55 ಲಕ್ಷ ರೂ.ಗೆ ನೀಡಲಾಗಿದೆ. ದಸರಾ ವಿಜೃಂಭಣೆಯಿಂದ ಆಚರಿಸಲು ಸರ್ಕಾರ 30 ಕೋಟಿ, ಮೈಸೂ ರು ಅಭಿವೃದ್ಧಿ ಪ್ರಾಧಿಕಾರ 10 ಕೋಟಿ, ಪ್ರಾಯೋಜಕತ್ವದಿಂದ 1.81 ಕೋಟಿ, ಟಿಕೆಟ್ ಮಾರಾಟದಿಂದ 3. 21 ಕೋಟಿ ರೂ. ಸೇರಿ ಒಟ್ಟು 45.3 ಕೋಟಿ ರೂ. ಸಂಗ್ರಹ ವಾಗಿತ್ತು.

ಸ್ವಾಗತ ಆಮಂತ್ರಣ ಮತ್ತು ಸ್ಥಳಾವಕಾಶಕ್ಕೆ 6 ಕೋಟಿ ರೂ, ಮೆರವಣಿಗೆಗೆ 1.60 ಕೋಟಿ ರೂ, ಪಂಜಿನ ಕವಾಯತು 1.48 ಕೋಟಿ ರೂ, ಸ್ತಬ್ಧಚಿತ್ರಕ್ಕೆ 7 ಲಕ್ಷ ರೂ, ರೈತ ದಸರಾಗೆ 52 ಲಕ್ಷ ರೂ, ಸಾಂಸ್ಕೃತಿಕ ದಸರಾಗೆ 3 ಕೋಟಿ ರೂ. ಲಲಿತಕಲೆಗೆ 22 ಲಕ್ಷ ರೂ, ಕವಿಗೋ ಷ್ಠಿಗೆ 70 ಲಕ್ಷ ರೂ. ವೆಚ್ಚ ಮಾಡಿದೆ.

[ad_2]

Source link publictv.in

Leave a Reply

Your email address will not be published. Required fields are marked *