Advertisement

ಕೋವಿ ಪರವಾನಿಗೆ ನವೀಕರಣ, 15 ದಿನದೊಳಗೆ ಆನ್‌ಲೈನ್‌ ವ್ಯವಸ್ಥೆ

[ad_1]

ದ.ಕ: ಜಿಲ್ಲೆಯಲ್ಲಿ ಕೋವಿ ಪರವಾನಿಗೆ ನವೀಕರಣಕ್ಕೆ ಮುಂದಾಗುವ ಕೃಷಿಕರ ಅರ್ಜಿ ತ್ವರಿತ ವಿಲೇವಾರಿ ಮಾಡುವ ದೃಷ್ಟಿಯಿಂದ ದಕ್ಷಿಣ ಕನ್ನಡ ಜಿಲ್ಲಾಡಳಿತ ಇ-ಆಫೀಸ್‌ ಮೂಲಕ ಪ್ರತ್ಯೇಕ ಆನ್‌ಲೈನ್‌ ವ್ಯವಸ್ಥೆಯನ್ನು ಮಾಡಿದೆ.

ಲೋಡ್‌ ಟೆಸ್ಟಿಂಗ್‌ ಇದೀಗ ನಡೆಯುತ್ತಿರುವ ಕಾರಣ, 15 ದಿನದಲ್ಲಿ ವ್ಯವಸ್ಥೆ ಜಾರಿಗೆ ಬರುವ ನಿರೀಕ್ಷೆ ಇದೆ. ಇನ್ನು ಮುಂದೆ ಕೋವಿ ಲೈಸೆನ್ಸ್‌ ನವೀಕರಣವನ್ನು 60 ದಿನದೊಳಗೆ ಮುಗಿಸುವುದು ಜಿಲ್ಲಾಡಳಿತದ ಉದ್ದೇಶವಾಗಿದೆ.

ಕೋವಿ ನವೀಕರಣಕ್ಕೆ ಅರ್ಜಿ ಸಲ್ಲಿಸಿದರೆ ಅದನ್ನು ವಿನಾಕಾರಣ ಪೊಲೀಸ್‌ ಇಲಾಖೆ ತಡೆಹಿಡಿಯುತ್ತಿದ್ದು ಇದು ಕೃಷಿಕರ ಅಳಲಾಗಿತ್ತು. ವಿಧಾನಸಭೆಯಲ್ಲಿ ಈ ಕುರಿತು ಜಿಲ್ಲೆಯ ಶಾಸಕರು ಗಮನ ಸೆಳೆದಿದ್ದರು. ಗೃಹಸಚಿವರೂ ಅರ್ಹರಿಗೆ ವಿಳಂಬ ಮಾಡಬಾರದು ಎಂದು ವಿಧಾನಸಭೆಯಲ್ಲಿ ಹೇಳಿದ್ದರು.



[ad_2]

Source link

Leave a Reply

Your email address will not be published. Required fields are marked *