Advertisement

ಇನ್‌ ಸ್ಟಾಗ್ರಾಮ್ ರೀಲ್ಸ್ ನೋಡಿ ಮಾಡಿದ ಅಡುಗೆ ಸೇವಿಸಿ ಒಂದೇ ಕುಟುಂಬದ ನಾಲ್ವರು ಅಸ್ವಸ್ಥ!!

[ad_1]

ಇಂದು ಸೋಶಿಯಲ್ ಮೀಡಿಯಾ ಒಮ್ಮೆ ನಂಬಿಕೊಂಡು ಜೀವಿಸುವವರು ಅನೇಕರಿದ್ದಾರೆ. ಶಂಖದಿಂದ ಬಂದಿರುವುದು ತೀರ್ಥ ಎಂದು ನಂಬುವಂತೆ ಸೋಶಿಯಲ್ ಮೀಡಿಯಾದಲ್ಲಿ ತೋರುವುದೆಲ್ಲ ಸತ್ಯವೆಂದು ಭಾವಿಸಿ ಜೀವವನ್ನೇ ಕಳೆದುಕೊಳ್ಳುವ ಅನೇಕರನ್ನು ನಾವಿಂದು ಕಾಣಬಹುದು. ಇದೀಗ ಅಂತದ್ದೇ ಒಂದು ಘಟನೆ ನಡೆದಿದ್ದು ಇನ್ಸ್ಟಾಗ್ರಾಮ್ ರೀಲ್ಸ್ ನೋಡಿಕೊಂಡು ಮಾಡಿದ ಅಡುಗೆ ಸೇವಿಸಿ ಒಂದೇ ಕುಟುಂಬದ ನಾಲ್ವರು ಅಸ್ವಸ್ಥರಾಗಿರುವ ಘಟನೆ ನಡೆದಿದೆ.

ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯ ಎರ್ಲಂಪಾಲೆಂ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕುಟುಂಬವೊಂದು ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಅಡುಗೆ ವಿಡಿಯೋ ನೋಡಿದ್ದು, ಅದರಲ್ಲಿ ಉಮ್ಮತ್ತಿ ಹೂವನ್ನು (Datura Flower) ಬೇಳೆ ಸಾರಿನಲ್ಲಿ ಹಾಕಿಕೊಂಡು ತಿಂದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ತೋರಿಸಲಾಗಿತ್ತು. ಅದನ್ನು ನಿಜವೆಂದು ನಂಬಿದ ಕುಟುಂಬಸ್ಥರು, ತಮ್ಮ ಮನೆಯ ಅಂಗಳದಲ್ಲಿದ್ದ ಉಮ್ಮತ್ತಿ ಹೂಗಳನ್ನು ಕುಯ್ದು, ಬೇಳೆ ಸಾರಿಗೆ ಹಾಕಿ ಅಡುಗೆ ಮಾಡಿ ತಿಂದಿದ್ದಾರೆ.

ಆ ಅಡುಗೆ ತಿಂದ ಕೆಲವೇ ಹೊತ್ತಿನಲ್ಲಿ ಕುಟುಂಬದ ಎಲ್ಲರಿಗೂ ತೀವ್ರ ಅಸ್ವಸ್ಥತೆ ಕಾಡಿದೆ. ವಾಂತಿ, ತಲೆತಿರುಗುವಿಕೆ ಉಂಟಾಗಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ತಕ್ಷಣವೇ ಗಮನಿಸಿದ ಸ್ಥಳೀಯರು ಅವರನ್ನು ಕಾಕಿನಾಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯರು ವಿಚಾರ ಕೇಳಿ ತೀರ ಆತಂಕ ವ್ಯಕ್ತಪಡಿಸಿದ್ದು, ಉಮ್ಮತ್ತಿ ಹೂವು ಅತ್ಯಂತ ವಿಷಕಾರಿ ಎಂದು ಅವರು ತಿಳಿಸಿದ್ದಾರೆ. ಇದಕ್ಕೆ ನಿರ್ದಿಷ್ಟವಾದ ಯಾವುದೇ ಪ್ರತಿವಿಷ (Antidote) ಇಲ್ಲದ ಕಾರಣ, ಕೇವಲ ಸಪೋರ್ಟಿವ್ ಚಿಕಿತ್ಸೆಯ ಮೂಲಕವೇ ವಿಷದ ಪ್ರಭಾವವನ್ನು ಕಡಿಮೆ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ. ಸದ್ಯ ನಾಲ್ವರು ಇದೀಗ ಪ್ರಾಣಪಾಯದಿಂದ ಪಾರಾಗಿದ್ದಾರೆ.



[ad_2]

Source link

Leave a Reply

Your email address will not be published. Required fields are marked *