Advertisement

ತಮಿಳುನಾಡಲ್ಲಿ TVK ವಿಜಯದ ಬೆನ್ನಲ್ಲೇ ಅಣ್ಣಾ ಮಲೈ ಸಂಚಲನಕಾರಿ ಹೇಳಿಕೆ!!

[ad_1]

ತಮಿಳುನಾಡಿನಲ್ಲಿ ನಟ ವಿಜಯ್ ದಳಪತಿ ನೇತೃತ್ವದ ಟಿ ವಿ ಕೆ ಪಾರ್ಟಿ ಭರ್ಜರಿ ಜಯಭೇರಿ ಬಾರಿಸಿ ಹೊಸ ಇತಿಹಾಸವನ್ನು ಸೃಷ್ಟಿಸಿದೆ. ಇದರ ಬೆನ್ನಲ್ಲೇ ಇದೀಗ ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಅಣ್ಣಾ ಮಲೈ ಅವರು ಸಂಚಲನಕಾರಿ ಹೇಳಿಕೆ ಒಂದನ್ನು ನೀಡಿದ್ದಾರೆ.

ಶ್ರೀಲಂಕಾ ಪ್ರವಾಸದಲ್ಲಿದ್ದ ಅಣ್ಣಾಮಲೈ ಅವರು ಸೋಷಿಯಲ್ ಮೀಡಿಯಾ ಮೂಲಕ ವಿಜಯ್ ಅವರಿಗೆ ಶುಭಾಶಯ ಕೋರಿದ್ದಾರೆ. ಇದೇ ವೇಳೆ “ಶೀಘ್ರದಲ್ಲೇ ನಮಗೂ (ಬಿಜೆಪಿ) ಅಚ್ಚೇ ದಿನ್ ಬರಲಿದೆ” ಎಂದು ಅಣ್ಣಾಮಲೈ ಹೇಳಿರುವುದು ರಾಜಕೀಯ ವಿಶ್ಲೇಷಕರ ಕುತೂಹಲಕ್ಕೆ ಕಾರಣವಾಗಿದೆ

ಬಿಜೆಪಿ ಕೇಂದ್ರ ಆಯ್ಕೆ ಸಮಿತಿಯು ಅಣ್ಣಾಮಲೈ ಅವರನ್ನು ದೂರವಿಟ್ಟೇ ಸೀಟು ಹಂಚಿಕೆ ಪ್ರಕ್ರಿಯೆ ಪೂರ್ಣಗೊಳಿಸಿತ್ತು. ಈ ಭಿನ್ನಾಭಿಪ್ರಾಯದ ಹೊರತಾಗಿಯೂ ಅಣ್ಣಾಮಲೈ ಅವರು ಪಕ್ಷದ ಪರವಾಗಿ ರಾಜ್ಯಾದ್ಯಂತ ಬಿರುಸಿನ ಪ್ರಚಾರ ನಡೆಸಿದ್ದರು. ಇದೀಗ ಅಣ್ಣಾಮಲೈ ಅವರು ವಿಜಯ್ ಗೆಲುವನ್ನು ಮುಕ್ತವಾಗಿ ಶ್ಲಾಘಿಸಿರುವುದು ಮತ್ತು ‘ಅಚ್ಚೇ ದಿನ್’ ಬಗ್ಗೆ ಮಾತನಾಡಿರುವುದು, ಭವಿಷ್ಯದಲ್ಲಿ ಬಿಜೆಪಿ ಮತ್ತು ಟಿವಿಕೆ ನಡುವೆ ಹೊಸ ರಾಜಕೀಯ ಸಮೀಕರಣಗಳು ಸೃಷ್ಟಿಯಾಗಬಹುದೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಅಲ್ಲದೆ ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿದೆ.



[ad_2]

Source link

Leave a Reply

Your email address will not be published. Required fields are marked *