Advertisement

ಇನ್ಮುಂದೆ ಒಂದು ಮನೆಗೆ ಒಂದೇ ಗ್ಯಾಸ್ ಕಲೆಕ್ಷನ್ – LPG ಸಿಲಿಂಡರ್’ ಬಗ್ಗೆ ಕೇಂದ್ರದಿಂದ ಹೊಸ ನಿಯಮ ಜಾರಿ

[ad_1]

ಪಶ್ಚಿಮ ಏಷ್ಯಾದ ರಾಷ್ಟ್ರಗಳಲ್ಲಿ ಉಂಟಾಗಿರುವ ಯುದ್ಧದ ವಾತಾವರಣದಿಂದಾಗಿ ಜಗತ್ತಿನಾದ್ಯಂತ ಎಲ್ ಪಿ ಜಿ ಸಮಸ್ಯೆ ದೊಡ್ಡ ಮಟ್ಟದಲ್ಲಿ ಉಂಟಾಗಿದೆ. ಭಾರತದಲ್ಲಿ ಇನ್ನೂ ಇದರ ಸಮಸ್ಯೆಗೆ ಅಂತ್ಯ ದೊರಕಿಲ್ಲ. ಈ ನಡುವೆ ಕೇಂದ್ರ ಸರ್ಕಾರದಿಂದ ಎಲ್‌ಪಿಜಿ ಸಿಲಿಂಡರ್ ಕುರಿತು ಹೊಸ ನಿಯಮ ಜಾರಿಯಾಗಿದ್ದು ‘ಇನ್ನು ಮುಂದೆ ಒಂದು ಮನೆಗೆ ಒಂದೇ ಗ್ಯಾಸ್ ಕಲೆಕ್ಷನ್’ ಪಾಲಿಸಿ ಜಾರಿಯಾಗಲಿದೆ.

ಯಸ್, ದೇಶಾದ್ಯಂತ ‘ಒಂದೇ ಮನೆಗೆ ಒಂದೇ ಗ್ಯಾಸ್ ಕನೆಕ್ಷನ್’ ಎಂಬ ಹೊಸ ನಿಯಮವನ್ನು ಜಾರಿಗೆ ತರಲಾಗುತ್ತಿದ್ದು, ಪೈಪ್ಡ್ ನ್ಯಾಚುರಲ್ ಗ್ಯಾಸ್ (PNG) ಸಂಪರ್ಕ ಹೊಂದಿರುವ ಕುಟುಂಬಗಳು ತಮ್ಮ ಬಳಿ ಇರುವ ಎಲ್‌ಪಿಜಿ (LPG) ಸಿಲಿಂಡರ್‌ಗಳನ್ನು ಕಡ್ಡಾಯವಾಗಿ ಹಿಂತಿರುಗಿಸಬೇಕೆಂದು ಕೇಂದ್ರ ಸರ್ಕಾರ ಆದೇಶಿಸಿದೆ. 

ಈಗಾಗಲೇ ಅನೇಕ ಗ್ರಾಹಕರಿಗೆ ತಮ್ಮ ಕನೆಕ್ಷನ್ ವಿವರಗಳನ್ನು ಧೃಢೀಕರಿಸುವಂತೆ ಗ್ಯಾಸ್ ಕಂಪನಿಗಳಿಂದ ಸಂದೇಶಗಳು ಬರಲಾರಂಭಿಸಿವೆ. ಪ್ರಾಥಮಿಕ ಅಂದಾಜಿನ ಪ್ರಕಾರ, ಸುಮಾರು 50,000 ಗ್ರಾಹಕರು ಈಗಾಗಲೇ ತಮ್ಮ ಎಲ್‌ಪಿಜಿ ಸಿಲಿಂಡರ್‌ಗಳನ್ನು ಹಿಂತಿರುಗಿಸಿದ್ದಾರೆ.

ಇಷ್ಟೇ ಅಲ್ಲದೆ ಇನ್ಮುಂದೆ ಹಳೆಯ ಮತ್ತು ಬಳಕೆಗೆ ಅನರ್ಹವಾದ ಸಿಲಿಂಡರ್‌ಗಳನ್ನು ಹಿಂತಿರುಗಿಸುವುದು ಕಡ್ಡಾಯವಾಗಿದೆ. ಗ್ರಾಹಕರ ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗಿದ್ದು, ಐದು ವರ್ಷಗಳಿಗಿಂತ ಹಳೆಯದಾದ ಅಥವಾ ಮರುಪರಿಶೀಲನೆಯ ದಿನಾಂಕ (Expiry Date) ಮುಗಿದಿರುವ ಸಿಲಿಂಡರ್‌ಗಳನ್ನು ಬಳಸುವಂತಿಲ್ಲ. ಇಂತಹ ಸಿಲಿಂಡರ್‌ಗಳನ್ನು ಕೂಡಲೇ ಗ್ಯಾಸ್ ಏಜೆನ್ಸಿಗೆ ನೀಡಿ ಹೊಸದನ್ನು ಪಡೆಯಬೇಕು ಎಂದು ಸೂಚಿಸಲಾಗಿದೆ.

The post ಇನ್ಮುಂದೆ ಒಂದು ಮನೆಗೆ ಒಂದೇ ಗ್ಯಾಸ್ ಕಲೆಕ್ಷನ್ – LPG ಸಿಲಿಂಡರ್’ ಬಗ್ಗೆ ಕೇಂದ್ರದಿಂದ ಹೊಸ ನಿಯಮ ಜಾರಿ appeared first on Hosakananda.

[ad_2]

Source link

Leave a Reply

Your email address will not be published. Required fields are marked *