[ad_1]
2
ಪುತ್ತೂರು, ಮೇ 8: ಕಡಬ ಠಾಣಾ ವ್ಯಾಪ್ತಿಯ ಐತೂರು ಗ್ರಾಮದ ಕೆರ್ಮಾಯಿ ಎಂಬಲ್ಲಿ ಮಹಿಳೆಯರು ಮತ್ತು ಮಕ್ಕಳನ್ನು ಕರೆದುಕೊಂಡು ಬಂದು ಮತಾಂತರ ಹಾಗೂ ಅನೈತಿಕ ಚಟುವಟಿಕೆ ನಡೆಸುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಕಡಬ ಪೊಲೀಸರು ಸ್ಥಳ ಪರಿಶೀಲನೆ ಮಾಡಿದ್ದು, ಯಾವುದೇ ಅಂತಹ ಚಟುವಟಿಕೆ ಕಂಡು ಬಂದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.


ಮೇ.07 ರಂದು ಐತ್ತೂರಿನ ಮನೆಯೊಂದರಲ್ಲಿ ಜನ ಹೆಚ್ಚಿರುವ ಕುರಿತ ಮಾಹಿತಿಯ ಮೇರೆಗೆ ಪೊಲೀಸರು ಸ್ಥಳಕ್ಕೆ ತೆರಳಿದ್ದು ವಿಚಾರಣೆ ನಡೆಸಿದ್ದು, ಒಟ್ಟು 4 ಕುಟುಂಬಗಳಿಗೆ ಸೇರಿದ 23 ಜನ ಗಂಡಸರು, ಮಹಿಳೆಯರು ಹಾಗೂ ಮಕ್ಕಳು ಅಲ್ಲಿ ಇರುವುದು ಕಂಡು ಬಂದಿದೆ. ವಿಚಾರಣೆಯಲ್ಲಿ ಅವರೆಲ್ಲರೂ ಬೆಂಗಳೂರಿನ ಪರಿಚಯದವರಾಗಿದ್ದು, ಮಂಗಳುರಿಗೆ ಪ್ರವಾಸದ ನಿಮಿತ್ತ ಬಂದಿರುವುದಾಗಿ ತಿಳಿಸಿರುವುದಾಗಿ ವರದಿಯಾಗಿದೆ.
ಬೆಂಗಳೂರಿನ ಚರ್ಚ್ ಒಂದರ ಫಾದರ್ ಅವರ ತಮ್ಮನ ಕಡಬದ ಮನೆಯಲ್ಲಿ ತಂಗಿರುವುದಾಗಿ ತಿಳಿಸಿರುತ್ತಾರೆ. ಹಲವು ವರ್ಷಗಳಿಂದ ಫಾದರ್ ಪರಿಚಯವಿರುವುದರಿಂದ ಎಲ್ಲರೂ ಅಲ್ಲಿ ನೆಲೆಸಿದ್ದರು. ಬಂದವರೆಲ್ಲರೂ ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದು, 15,20 ವರ್ಷಗಳಿಂದ ಕ್ರಿಶ್ಚಿಯನ್ ಧರ್ಮವನ್ನು ಸ್ವಯಂಪ್ರೇರಿತವಾಗಿ ಪಾಲಿಸಿಕೊಂಡು ಬರುತ್ತಿರುವುದಾಗಿ ತಿಳಿಸಿದ್ದಾರೆ. ಅಲ್ಲದೇ ಯಾವುದೇ ಬಲವಂತದ ಮತಾಂತರ ನಡೆದಿರುವುದಿಲ್ಲ ಎಂಬುವುದಾಗಿ ತಿಳಿಸಿದ್ದಾರೆ.
ಸದರಿ ವಿಚಾರದಲ್ಲಿ ಯಾವುದೇ ಅನೈತಿಕ ಚಟುವಟಿಕೆ ಅಥವಾ ಬಲವಂತದ ಮತಾಂತರ ನಡೆದಿರುವ ಕುರಿತು ವಿಚಾರಣೆ ಸಂದರ್ಭದಲ್ಲಿ ಮಾಹಿತಿ ದೊರೆತಿರುವುದಿಲ್ಲ. ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಲಾಗಿದೆ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.
[ad_2]
Source link


















Leave a Reply