Advertisement

ಪಶ್ಚಿಮ ಬಂಗಾಳದ ಡಿಸಿಎಂ ಹುದ್ದೆಯ ಹಾರ ಮಹಾಭಾರತದ ʼದ್ರೌಪದಿʼಯ ಕೊರಳಿಗೆ!

[ad_1]

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಪತನಕ್ಕಾಗಿ ದಶಕದಿಂದ ಕಾದಿದ್ದ ʼದ್ರೌಪದಿʼಗೆ ಬಿಜೆಪಿ ಪಶ್ಚಿಮ ಬಂಗಾಳದ ಉಪ ಮುಖ್ಯಮಂತ್ರಿ ಸ್ಥಾನವನ್ನು ನೀಡಿದೆ. ಸುವೇಂದು ಅಧಿಕಾರಿ ಇದೀಗ ಪಶ್ಚಿಮ ಬಂಗಾಳದ ಮೊಟ್ಟ ಮೊದಲ ಬಿಜೆಪಿ ಸಿಎಂ ಆಗಲಿದ್ದು, ಮಾತ್ರವಲ್ಲದೇ ಇಬ್ಬರನ್ನು ಡಿಸಿಎಂ ಆಗಿ ಆಯ್ಕೆ ಮಾಡಲಾಗಿದ್ದು, ಅವರಲ್ಲಿ ಒಬ್ಬರು ನಟಿ ರೂಪಾ ಗಂಗೂಲಿ.

ಮಹಾಭಾರತ ಧಾರವಾಹಿಯಲ್ಲಿ ದ್ರೌಪದಿ ಪಾತ್ರಧಾರಿ ರೂಪಾ ಗಂಗೂಲಿ ಈಗ ಪಶ್ಚಿಮ ಬಂಗಾಳದ ಉಪಮುಖ್ಯಮಂತ್ರಿ. ರೂಪಾ ಗಂಗೂಲಿ ಅವರದ್ದು ಟಿವಿ ಮತ್ತು ಸಿನಿಮಾ ಕ್ಷೇತ್ರದಲ್ಲಿ ಹೆಸರು ಮಾಡಿದವರು.

2015 ರಲ್ಲಿ ರೂಪಾ ಗಂಗೂಲಿ ಬಿಜೆಪಿ ಸೇರುವ ಮೂಲಕ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದರು. 2016 ರ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದು, ಆದರೂ ಛಲ ಬಿಡದೆ ಪಕ್ಷ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು ರೂಪ. ಅದೇ ವರ್ಷ ಮೇ ತಿಂಗಳಲ್ಲಿ ಚುನಾವಣಾ ಹಿಂಸಾಚಾರದ ಸಂತ್ರಸ್ತರನ್ನು ಭೇಟಿ ಮಾಡಿ ವಾಪಾಸು ಬರುವಾಗ ಟಿಎಂಸಿ ಕಾರ್ಯಕರ್ತರು ರೂಪಾ ಅವರ ಮೇಲೆ ದಾಳಿ ಮಾಡಿ ಹಲ್ಲೆಗೈದರು. ಆಗ ರೂಪಾ ಅವರು ತಲೆಗೆ ಗಂಭೀರ ಪೆಟ್ಟಾಗಿತ್ತು. ಅವರು ಆಸ್ಪತ್ರೆ ಸೇರಿದರು. ಅದೇ ವರ್ಷ ಅವರನ್ನು ರಾಜ್ಯಸಭೆಗೆ ನಾಮಿನೇಟ್‌ ಮಾಡಿ ಕಳಿಸಿತು ಬಿಜೆಪಿ. 2022 ರಲ್ಲಿ ತಮ್ಮ ಅವಧಿ ಮುಗಿಸಿದ ರೂಪಾ, ಈಗ ಮತ್ತೆ ಚುನಾವಣೆ ಸ್ಪರ್ಧಿಸಿ ಗೆದ್ದಿಲ್ಲದೆ, ಉಪ ಮುಖ್ಯಮಂತ್ರಿ ಆಗಲಿದ್ದಾರೆ.

ರೂಪಾ ಗಂಗೂಲಿ ಅವರು 1992 ರಲ್ಲಿ ಒಬ್ಬರನ್ನು ವಿವಾಹವಾಗಿದ್ದು, ಅವರನ್ನು ಓರ್ವ ಗಂಡು ಮಗುವನ್ನು ಪಡೆದರು. 2007 ರಲ್ಲಿ ಇಬ್ಬರೂ ವಿಚ್ಛೇದನ ಪಡೆದರು. ನಂತರ ರೂಪಾ ಗಂಗೂಲಿ ಅವರು ಬೆಂಗಾಲಿ ಗಾಯಕ ದಿವ್ಯೇಂದು ಮುಖರ್ಜಿ ಎನ್ನುವವರ ಜೊತೆ ಲಿವಿನ್‌ ರಿಲೇಷನ್‌ನಲ್ಲಿದ್ದರು. ಇವರಿಬ್ಬರು ಹಲವು ವರ್ಷ ಮುಂಬೈನಲ್ಲಿ ಒಟ್ಟಿಗೆ ಇದ್ದರು. ನಂತರ ಇಬ್ಬರೂ ಬೇರಾದರು. ಪ್ರಸ್ತುತ ರೂಪಾ ಅವರು ತಮ್ಮ ಪುತ್ರನ ಜೊತೆ ಇದ್ದಾರೆ.

banner

ರೂಪಾ ಅವರು ಹಿಂದಿ, ಕನ್ನಡ, ತೆಲುಗು, ಒಡಿಯಾ, ಮಲಯಾಳಂ, ಮರಾಠೀ, ಬೆಂಗಾಲಿ, ಅಸ್ಸಾಮಿ ಸೇರಿ ಹಲವು ಭಾಷೆಯ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ. ಪೊಲೀಸ್‌, ದಾದ, ಕದನ, ಸಿಬಿಐ ವಿಜಿ, ಬಹದ್ದೂರ್‌ ಹೆಣ್ಣು ಕನ್ನಡ ಸಿನಿಮಾಗಳಲ್ಲಿ ರೂಪಾ ಅವರು ನಟಿಸಿದ್ದಾರೆ.



[ad_2]

Source link

Leave a Reply

Your email address will not be published. Required fields are marked *