Advertisement

ನೆರಿಯ ಮನೆಯೊಂದರ ಗೋಡೆಯಲ್ಲಿ ಪತ್ತೆಯಾದ 26 ನಾಗರ ಹಾವಿನ ಮರಿಗಳು

[ad_1]

ನೆರಿಯ: ನೆರಿಯ ಕುಡುಮಡ್ಕ ಮನೆಯೊಂದರ ಗೋಡೆಯಲ್ಲಿ 26 ನಾಗರಹಾವಿನ ಮರಿ ಹಾಗೂ ತಾಯಿ ಹಾವು ಪತ್ತೆಯಾಗಿದ್ದು, ಇವುಗಳನ್ನು ರಕ್ಷಿಸಿ ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಡಲಾಗಿರುವ ಕುರಿತು ವರದಿಯಾಗಿದೆ.

ಮನೆಯ ಗೋಡೆಯಲ್ಲಿ ಕಳೆದ ಕೆಲವು ದಿನಗಳಿಂದ ನಾಗರಹಾವು ಸುಳಿದಾಡುವುದನ್ನು ಕಂಡ ಶ್ರೀನಿವಾಸಗೌಡ ಎಂಬವರು ಕಕ್ಕಿಂಜೆಯ ಉರಗಮಿತ್ರ, ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯ ಸ್ನೇಕ್ ಅನಿಲ್ ಅವರಿಗೆ ಮಾಹಿತಿ ನೀಡಿದರು.

ಈ ವೇಳೆ ಆಗಮಿಸಿದ ಅವರು ತಾಯಿ ನಾಗರಹಾವನ್ನು ಹಿಡಿದಿದ್ದು ಈ ವೇಳೆ ಗೋಡೆಯಲ್ಲಿ ಮರಿಗಳು ಕಂಡು ಬಂದವು. ಗೋಡೆಯಲ್ಲಿದ್ದ 26 ಮರಿಗಳನ್ನು ಹಿಡಿದು ಅವುಗಳನ್ನು ತಾಯಿ ಸಹಿತ ಚಾರ್ಮಾಡಿ ಘಾಟಿಯ ಅರಣ್ಯ ಪ್ರದೇಶದ ಸುರಕ್ಷಿತ ಜಾಗದಲ್ಲಿ ಗುರುವಾರ ಬಿಡಲಾಗಿದೆ.

ಈ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯರು ಸಹಕರಿಸಿದರು. ಈ ಮರಿಗಳು ಸುಮಾರು 10 ದಿನಗಳ ಹಿಂದೆ ಮೊಟ್ಟೆಯಿಂದ ಹೊರಬಂದಿರಬಹುದು ಎಂದು ಅಂದಾಜಿಸಲಾಗಿದ್ದು ಎಲ್ಲವೂ ಆರೋಗ್ಯ ಪೂರ್ಣವಾಗಿ ಇರುವುದಾಗಿ ಅನಿಲ್ ಅವರು ತಿಳಿಸಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ನೆರಿಯ ಗ್ರಾಮದ ಗುಂಡಿಕಂಡ ಎಂಬಲ್ಲಿ ಮನೆಯ ಗೋಡೆಯೊಂದರಲ್ಲಿ ಪತ್ತೆಯಾಗಿದ್ದ ನಾಗರಹಾವಿನ 16 ಮೊಟ್ಟೆಗಳನ್ನು ಅನಿಲ್ ಅವರು ರಕ್ಷಿಸಿ ಅವುಗಳಿಗೆ ಕೃತಕ ಕಾವು ನೀಡಿ ಮರಿಗಳು ಹೊರಬಂದ ಬಳಿಕ ಭಾನುವಾರ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದರು. ಈ ಮೊಟ್ಟೆಗಳನ್ನು ಇರುವೆಗಳ ದಾಳಿಯಿಂದ ರಕ್ಷಿಸಲಾಗಿತ್ತು.

banner



[ad_2]

Source link

Leave a Reply

Your email address will not be published. Required fields are marked *