Advertisement

ವಯಸ್ಸು 29, ಪಂಚ ಭಾಷೆಗಳಲ್ಲಿ ಪ್ರವೀಣೆ; ವಿಜಯ್‌ ಸಂಪುಟದಲ್ಲಿ ಸ್ಥಾನ ಪಡೆದ ಅತಿ ಕಿರಿಯ ಸಚಿವೆ ಯಾರು?

[ad_1]

vijay s.keerthana

ಚೆನ್ನೈ: ವಯಸ್ಸು 29. ಐದು ಭಾಷೆಗಳಲ್ಲಿ ಪ್ರವೀಣೆ. ತಮಿಳಗ ವೆಟ್ರಿ ಕಳಗಂ (TVK)ನಿಂದ ಅತ್ಯಂತ ಕಿರಿಯ ಶಾಸಕಿಯಾಗಿ ಹೊರಹೊಮ್ಮಿದ್ದಾರೆ ಎಸ್‌.ಕೀರ್ತನಾ, ವಿಜಯ್‌ ನೇತೃತ್ವದಲ್ಲಿ ಸರ್ಕಾರದಲ್ಲಿ ಸಚಿವೆ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ವಿರುಧುನಗರ ಜಿಲ್ಲೆಯ ಶಿವಕಾಸಿ ಕ್ಷೇತ್ರದಲ್ಲಿ ಗೆದ್ದಿರುವ ಇವರು, ತಮಿಳುನಾಡು ರಾಜಕೀಯದಲ್ಲಿ ಪಕ್ಷದ ಹೊಸ ಮುಖಗಳಲ್ಲಿ ಒಬ್ಬರು.

ರಾಜಕೀಯದಲ್ಲಿ ಗುರುತಿಸಿಕೊಳ್ಳಬೇಕು ಎಂಬುದು ನನ್ನ ಕನಸಾಗಿತ್ತು. ಅದಕ್ಕಾಗಿಯೇ ನಾನು ರಾಜಕೀಯ ವೃತ್ತಿಜೀವನವನ್ನು ಆರಿಸಿಕೊಂಡೆ ಎಂದು ಕೀರ್ತನಾ ಅವರು ಭಾನುವಾರ ಸಚಿವೆಯಾಗಿ ಪ್ರಮಾಣವಚನ ಸ್ವೀಕರಿಸುವ ಮೊದಲು ಮಾತನಾಡಿದ್ದಾರೆ.

ನಾನು ಹಲವು ನಾಯಕರೊಂದಿಗೆ ಕೆಲಸ ಮಾಡಿದ್ದೇನೆ. ವ್ಯವಸ್ಥೆಯು ಮತ್ತು ಅಧಿಕಾರಶಾಹಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅರ್ಥಮಾಡಿಕೊಂಡಿದ್ದೇನೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಯಾರು ಈ ಕೀರ್ತನಾ?
1996 ರಲ್ಲಿ ವಿರುಧುನಗರದಲ್ಲಿ ಕೀರ್ತನಾ ಜನಿಸಿದರು. ತಮಿಳು ಮಾಧ್ಯಮ ಸರ್ಕಾರಿ ಶಾಲೆಯಲ್ಲಿ ಅಧ್ಯಯನ ಮಾಡಿದರು. ಮಧುರೈ ಕಾಮರಾಜ್ ವಿಶ್ವವಿದ್ಯಾಲಯದೊಂದಿಗೆ ಸಂಯೋಜಿತವಾಗಿರುವ ಕಾಲೇಜಿನಿಂದ ಗಣಿತದಲ್ಲಿ ಬಿಎಸ್ಸಿ ಮುಗಿಸಿದರು. 2019 ರಲ್ಲಿ ಪುದುಚೇರಿ ವಿಶ್ವವಿದ್ಯಾಲಯದಿಂದ ಸಂಖ್ಯಾಶಾಸ್ತ್ರ ವಿಷಯದಲ್ಲಿ ಎಂಎಸ್ಸಿ ಪಡೆದರು.

ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸುವ ಮೊದಲು, ಕೀರ್ತನಾ ಶೋಟೈಮ್ ಕನ್ಸಲ್ಟಿಂಗ್ ಮತ್ತು ಐಪಿಎಸಿ ಜೊತೆ ರಾಜಕೀಯ ಸಲಹೆಗಾರ್ತಿ ಮತ್ತು ಡಿಜಿಟಲ್ ಪ್ರಚಾರ ತಂತ್ರಜ್ಞೆಯಾಗಿ ಕೆಲಸ ಮಾಡಿದರು. ತೆಲುಗು ದೇಶಂ ಪಕ್ಷ (ಟಿಡಿಪಿ), ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪರ ಚುನಾವಣಾ ಪ್ರಚಾರಗಳಲ್ಲಿಯೂ ತೊಡಗಿಸಿಕೊಂಡಿದ್ದರು.

ನಂತರದ ವರ್ಷಗಳಲ್ಲಿ ಮಾಜಿ ಸಿಎಂಗಳಾದ ಸ್ಟಾಲಿನ್, ಮಮತಾ ಬ್ಯಾನರ್ಜಿ ಮತ್ತು ಆಂಧ್ರ ಪ್ರದೇಶದ ಹಾಲಿ ಸಿಎಂ ಚಂದ್ರಬಾಬು ನಾಯ್ಡು ಅವರೊಂದಿಗೆ ಕೆಲಸ ಮಾಡಿದರು. ತಮ್ಮ ಅನುಭವದ ಬಗ್ಗೆ ಮಾತನಾಡಿದ ಕೀರ್ತನಾ, ರಾಜಕೀಯ ತಂತ್ರಜ್ಞೆಯಾಗಿ ಕೆಲಸ ಮಾಡಿದ್ದರಿಂದ ಆಡಳಿತ ಮತ್ತು ಅಧಿಕಾರಶಾಹಿಯ ಕಾರ್ಯನಿರ್ವಹಣೆಯ ಬಗ್ಗೆ ಆಳವಾದ ತಿಳುವಳಿಕೆ ಪಡೆಯಲು ಸಾಧ್ಯವಾಯಿತು ಎಂದು ತಿಳಿಸಿದ್ದಾರೆ.

ಪಂಚ ಭಾಷೆಗಳಲ್ಲಿ ಪ್ರವೀಣೆ
ತಮಿಳು, ಇಂಗ್ಲಿಷ್, ಹಿಂದಿ ಮತ್ತು ತೆಲುಗು ಸೇರಿದಂತೆ ಐದು ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುತ್ತಾರೆ. ಬಹು ಭಾಷೆಗಳನ್ನು ಕಲಿಯುವುದರಿಂದ ವಿವಿಧ ರಾಜ್ಯಗಳಲ್ಲಿ ಕೆಲಸ ಮಾಡಲು ಮತ್ತು ಜನರೊಂದಿಗೆ ಹೆಚ್ಚು ನೇರವಾಗಿ ಸಂಪರ್ಕ ಸಾಧಿಸಲು ಸಹಾಯವಾಯಿತು ಎಂದು ಕೀರ್ತನಾ ವಿವರಿಸಿದ್ದಾರೆ. ಭಾರತದಾದ್ಯಂತ ಜನರು ವಿಜಯ್ ಅವರ ಸಂದೇಶವನ್ನು ಅರ್ಥಮಾಡಿಕೊಳ್ಳಲು ಮತ್ತು ಸಂಪರ್ಕ ಸಾಧಿಸಲು ಹಿಂದಿ ಭಾಷೆಯಲ್ಲಿ ಪ್ರಚಾರ ನಡೆಸಿದೆ ಎಂದಿದ್ದಾರೆ.

2026 ರ ವಿಧಾನಸಭಾ ಚುನಾವಣೆಯಲ್ಲಿ ಶಿವಕಾಶಿ ಕ್ಷೇತ್ರದಲ್ಲಿ ಕೀರ್ತನಾ 68,709 ಮತಗಳನ್ನು ಪಡೆದರು. ಕಾಂಗ್ರೆಸ್ ಅಭ್ಯರ್ಥಿ ಅಶೋಕನ್ ಜಿ ಅವರನ್ನು 11,670 ಮತಗಳ ಅಂತರದಿಂದ ಸೋಲಿಸಿದರು. ಅವರು ಏಳು ದಶಕಗಳಲ್ಲಿ ಶಿವಕಾಶಿಯಿಂದ ಮಾಜಿ ಎಐಎಡಿಎಂಕೆ ಸಚಿವರನ್ನು ಸೋಲಿಸಿದ ಮೊದಲ ಮಹಿಳಾ ಶಾಸಕಿಯಾಗಿದ್ದಾರೆ.

[ad_2]

Source link publictv.in

Leave a Reply

Your email address will not be published. Required fields are marked *