Advertisement

ಚಿರತೆ ದಾಳಿಗೆ ಬಾಲಕ ಬಲಿ – ಅರಣ್ಯ ಇಲಾಖೆ ನಿರ್ಲಕ್ಷ್ಯವೇ ಕಾರಣ: ಕುಟುಂಬಸ್ಥರ ಆರೋಪ | Public TV

[ad_1]

ಬೆಂಗಳೂರು: ನಾಗಮಲೆಯಲ್ಲಿ (Nagamale) ಚಿರತೆ ದಾಳಿಗೆ (Leopard Attack) ಬಾಲಕ ಸಾವನ್ನಪ್ಪಿದಕ್ಕೆ ಅರಣ್ಯ ಇಲಾಖೆ (Forest Department) ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ನಗರದ (Bengaluru) ಕಾಮಾಕ್ಷಿಪಾಳ್ಯದ ವೃಷಭಾವತಿ ನಗರದ ಹರ್ಷಿತ್ ಗೌಡ ನಾಗಮಲೆಯಲ್ಲಿ ಚಿರತೆ ದಾಳಿಗೆ ಬಲಿಯಾಗಿದ್ದ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಾಲಕನ ಅಜ್ಜಿ, ನನ್ನ ಸೊಸೆ ಪವಿತ್ರ ತನ್ನ ಇಬ್ಬರು ಮಕ್ಕಳು ಹಾಗೂ ಸ್ನೇಹಿತರ ಜೊತೆ ದೇವರ ದರ್ಶನಕ್ಕೆ ಹೋಗಿದ್ದರು. ಪಾದಯಾತ್ರೆ ಮೂಲಕ ಕಾಡಿನಲ್ಲಿ ಹೋಗುವಾಗ ಮೊಮ್ಮಗನ ಮೇಲೆ ಚಿರತೆ ದಾಳಿ ಮಾಡಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ನಾಗಮಲೆಗೆ ಪಾದಯಾತ್ರೆ ಹೊರಟಿದ್ದ ಬಾಲಕ ಚಿರತೆ ದಾಳಿಗೆ ಬಲಿ

ಕಾಡಿನೊಳಗೆ ಹೋಗುವಾಗ 200 ರೂ. ಹೆಚ್ಚಿನ ಹಣ ತೆಗೆದುಕೊಂಡು ಒಳಗಡೆ ಬಿಟ್ಟಿದ್ದಾರೆ. ಮಗು ಮೇಲೆ ದಾಳಿಯಾಗಿ ಅರ್ಧ ಗಂಟೆಯಾದರೂ ಯಾವ ಅರಣ್ಯಾಧಿಕಾರಿಯೂ ಬಂದಿರಲಿಲ್ಲ. ನಂತರ ಜನ ಜಗಳ ಮಾಡಿದಾಗ ಮೃತದೇಹ ಹುಡುಕಿದ್ದಾರೆ. ನಮ್ಮ ಮಗುವಿಗೆ ಆದ ಹಾಗೆ ಯಾರಿಗೂ ಆಗಬಾರದು. ಈ ಸಾವಿಗೆ ಅರಣ್ಯ ಇಲಾಖೆ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ್ದಾರೆ.

ಮೇ 11 ರ ಬೆಳಗ್ಗೆ 9 ಗಂಟೆಗೆ ಸುಮ್ಮನಹಳ್ಳಿ ವಿದ್ಯುತ್ ಚಿತಾಗಾರದಲ್ಲಿ ಬಾಲಕನ ಅಂತ್ಯಕ್ರಿಯೆ ನಡೆಯಲಿದೆ. ಇದನ್ನೂ ಓದಿ: ನೀರು ಕುಡಿಯಲು ಬಂದು ಗಾಯಗೊಂಡಿದ್ದ ಕಾಡಾನೆ ಸಾವು

[ad_2]

Source link publictv.in

Leave a Reply

Your email address will not be published. Required fields are marked *