Advertisement

ಚಿನ್ನ ಖರೀದಿಸಬೇಡಿ – ಮೋದಿ ಕರೆಯ ಬೆನ್ನಲ್ಲೇ ಹಳದಿ ಲೋಹದ ಬೆಲೆ ಭಾರೀ ಇಳಿಕೆ!

[ad_1]

MCX gold Price

ಮುಂಬೈ: ದೇಶದ ಆರ್ಥಿಕ ಹಿತದೃಷ್ಟಿಯಿಂದ “ಭಾರತೀಯರು ಒಂದು ವರ್ಷದವರೆಗೆ ಮದುವೆ ಸಮಾರಂಭಗಳಿಗೆ ಚಿನ್ನ ಖರೀದಿಸಬೇಡಿ” ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ನೀಡಿದ ಕರೆ ಮಾರುಕಟ್ಟೆಯ ಮೇಲೆ ತಕ್ಷಣದ ಪರಿಣಾಮ ಬೀರಿದೆ. ಪ್ರಧಾನಿಯವರ ಈ ಮಹತ್ವದ ಮನವಿಯ ಬೆನ್ನಲ್ಲೇ ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX) ಚಿನ್ನದ ದರದಲ್ಲಿ (Gold Price) ಗಣನೀಯ ಕುಸಿತ ಕಂಡುಬಂದಿದೆ.

ಬೆಳಗ್ಗೆ 9:40ರ ವೇಳೆಗೆ ಜೂನ್‌ ತಿಂಗಳ ಚಿನ್ನದ ಫ್ಯೂಚರ್‌ ಕಾಂಟ್ರಾಕ್ಟ್‌ 574 ರೂ. (38%) ರೂ. ಇಳಿಕೆಯಾಗಿದೆ 1,53,669 ರೂ.ನಲ್ಲಿ ವ್ಯವಹಾರ ನಡೆಸುತ್ತಿದೆ. ಆದರೆ ಬೆಳ್ಳಿಯ ದರ ಏರಿಕೆಯಾಗಿದೆ. ಜೂನ್‌ ಫ್ಯೂಚರ್‌ 698 ರೂ. (26%) ಏರಿಕೆಯಾಗಿದ್ದು 2,65,957 ರೂ.ನಲ್ಲಿ ವ್ಯವಹಾರ ನಡೆಸುತ್ತಿದೆ. ಈ ದರ ಇಂದು ಸಂಜೆ ಮಾರುಕಟ್ಟೆ ಕೊನೆಯಾಗುವ 3:30ರ ವೇಳೆಗೆ ಮತ್ತಷ್ಟು ಏರಿಳಿತವಾಗುವ ಸಾಧ್ಯತೆಯಿದೆ.

ಪಶ್ಚಿಮ ಏಷ್ಯಾದಲ್ಲಿ ಉಲ್ಬಣಿಸಿರುವ ಯುದ್ಧದ ಬಿಕ್ಕಟ್ಟು ಜಾಗತಿಕ ಆರ್ಥಿಕತೆಯ ಮೇಲೆ ಒತ್ತಡ ಹೇರುತ್ತಿದೆ. ಈ ಸವಾಲುಗಳನ್ನು ಎದುರಿಸಲು ಭಾರತೀಯರು ಸಿದ್ಧರಾಗಬೇಕು ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ಭಾರತವು ತನ್ನ ಹೆಚ್ಚಿನ ಚಿನ್ನದ ಅಗತ್ಯವನ್ನು ಆಮದಿನ ಮೂಲಕವೇ ಪೂರೈಸಿಕೊಳ್ಳುತ್ತದೆ. ಇದರಿಂದ ದೇಶದ ಅಮೂಲ್ಯವಾದ ವಿದೇಶಿ ವಿನಿಮಯ (Foreign Exchange) ದೊಡ್ಡ ಪ್ರಮಾಣದಲ್ಲಿ ಹೊರಹೋಗುತ್ತಿದೆ. ಆಮದು ವೆಚ್ಚವನ್ನು ತಗ್ಗಿಸುವ ಮೂಲಕ ದೇಶದ ಆರ್ಥಿಕತೆಯನ್ನು ಬಲಪಡಿಸು ಉದ್ದೇಶದಿಂದ ಮೋದಿ ಅವರು ಈ ಮಾತನ್ನು ಹೇಳಿದ್ದರು.

[ad_2]

Source link publictv.in

Leave a Reply

Your email address will not be published. Required fields are marked *