[ad_1]

ವಾಷಿಂಗ್ಟನ್: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ (Xi Jinping) ಅವರ ಆಹ್ವಾನದ ಮೇರೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಮೇ 13ರಿಂದ 15ರವರೆಗೆ ಚೀನಾಗೆ (China) ಅಧಿಕೃತ ಭೇಟಿ ನೀಡಲಿದ್ದಾರೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರರು ಸೋಮವಾರ ಹೇಳಿದ್ದಾರೆ.
ಸುಮಾರು ಒಂಬತ್ತು ವರ್ಷಗಳಲ್ಲಿ ಅಮೆರಿಕ ಅಧ್ಯಕ್ಷರು ಚೀನಾಕ್ಕೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ. ದೀರ್ಘಾವಧಿಯ ಅಮೆರಿಕ -ಇಸ್ರೇಲ್-ಇರಾನ್ ಯುದ್ಧ, ಜಾಗತಿಕ ಇಂಧನ ಬಿಕ್ಕಟ್ಟಿಗೆ ಕಾರಣವಾದ ಹಾರ್ಮುಜ್ ಜಲಸಂಧಿಯ ದಿಗ್ಬಂಧನದ ಬಿಕ್ಕಟ್ಟು ಮತ್ತು ತೈವಾನ್ ಸೇರಿದಂತೆ ಹಲವಾರು ವಿಷಯಗಳ ಕುರಿತು ಎರಡೂ ದೇಶಗಳ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಈ ಭೇಟಿ ಭಾರಿ ಮಹತ್ವ ಪಡೆದುಕೊಂಡಿದೆ. ಇದನ್ನೂ ಓದಿ: ತಮ್ಮನ ʼಪ್ರೀತಿʼಗೆ ಅಣ್ಣನಿಗೆ ಶಿಕ್ಷೆ- ಅರ್ಚಕನ ಕಿಡ್ನಾಪ್, ಅಮಾನುಷ ಹಲ್ಲೆ!
ಅಮೆರಿಕದ ಪ್ರಧಾನ ಉಪ ಪತ್ರಿಕಾ ಕಾರ್ಯದರ್ಶಿ ಅನ್ನಾ ಕೆಲ್ಲಿ ಭಾನುವಾರ ಮಾತನಾಡಿ, ಟ್ರಂಪ್ ಬುಧವಾರ ಸಂಜೆ ಬೀಜಿಂಗ್‌ಗೆ ಆಗಮಿಸಲಿದ್ದಾರೆ ಎಂದು ಹೇಳಿದ್ದಾರೆ. ಕೆಲ್ಲಿ ಅವರ ಪ್ರಕಾರ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ದ್ವಿಪಕ್ಷೀಯ ಸಭೆಯಲ್ಲಿ ಭಾಗವಹಿಸಲಿದ್ದಾರೆ. ನಂತರ ಟ್ರಂಪ್ ‘ಟೆಂಪಲ್ ಆಫ್ ಹೆವೆನ್’ಗೆ ಭೇಟಿ ನೀಡಲಿದ್ದು, ಅಂದೇ ಅಧಿಕೃತ ಔತಣಕೂಟ ನಡೆಯಲಿದೆ ಎಂದು ಕೆಲ್ಲಿ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಚಿನ್ನ ಖರೀದಿಸಬೇಡಿ – ಮೋದಿ ಕರೆಯ ಬೆನ್ನಲ್ಲೇ ಹಳದಿ ಲೋಹದ ಬೆಲೆ ಭಾರೀ ಇಳಿಕೆ!
ಶುಕ್ರವಾರವೂ ದ್ವಿಪಕ್ಷೀಯ ಮಾತುಕತೆ ಮುಂದುವರೆಯಲಿದೆ. ಇದೇ ವರ್ಷದ ಅಂತ್ಯದ ವೇಳೆಗೆ ಚೀನಾ ಅಧ್ಯಕ್ಷರು ಅಮೆರಿಕಗೆ ಭೇಟಿ ನೀಡುವ ಸಾಧ್ಯತೆಯಿದೆ. ಟ್ರಂಪ್ ಭೇಟಿ ವೇಳೆ ಉಭಯ ದೇಶಗಳ ನಡುವೆ ವ್ಯಾಪಾರ ಒಪ್ಪಂದ ಏರ್ಪಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಯುವತಿ ವಿಚಾರವಾಗಿ ಕಿರುಕುಳ ಆರೋಪ – ಆಡಿಯೋ ರೆಕಾರ್ಡ್ ಮಾಡಿಟ್ಟು ಯುವಕ ಆತ್ಮಹತ್ಯೆ
[ad_2]
Source link publictv.in

















Leave a Reply