Advertisement

ಅಕ್ಷರ್‌, ಮಿಲ್ಲರ್‌ ಫಿಫ್ಟಿ ಆಟ – ಪಂಜಾಬ್‌ ವಿರುದ್ಧ ಡೆಲ್ಲಿಗೆ 3 ವಿಕೆಟ್‌ಗಳ ಜಯ

[ad_1]

David Miller Axar Patel

ಧರ್ಮಶಾಲಾ: ಅಕ್ಷರ್‌ ಪಟೇಲ್‌ ಮತ್ತು ಡೇವಿಡ್‌ ಮಿಲ್ಲರ್‌ ಜವಾಬ್ದಾರಿಯುತ ಬ್ಯಾಟಿಂಗ್‌ ನೆರವಿನಿಂದ ಪಂಜಾಬ್‌ ಕಿಂಗ್ಸ್‌ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ 3 ವಿಕೆಟ್‌ಗಳ ಜಯ ಸಾಧಿಸಿದೆ.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಪಂಜಾಬ್‌ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 210 ರನ್‌ ಗಳಿಸಿತು. ಗುರಿ ಬೆನ್ನತ್ತಿದ ಡೆಲ್ಲಿ ಮೂರು ವಿಕೆಟ್‌ಗಳ ಗೆಲುವು ದಾಖಲಿಸಿತು.

ಪಂಜಾಬ್‌ ಆರಂಭದಲ್ಲಿ ಅಬ್ಬರದ ಬ್ಯಾಟಿಂಗ್‌ ಪ್ರದರ್ಶನ ನೀಡಿತು. ಫಾರ್ಮ್‌ನಲ್ಲಿರುವ ಪ್ರಿಯಾಂಶ್‌ ಆರ್ಯ, ಪ್ರಭಸಿಮ್ರಾನ್‌ ಸಿಂಗ್‌ ಉತ್ತಮ ಆರಂಭವನ್ನೇ ನೀಡಿದರು. ಪ್ರಿಯಾಂಶ್‌ 33 ಬಾಲ್‌ಗೆ ಅರ್ಧಶತಕ ಬಾರಿಸಿದರು. ಮೊದಲ ವಿಕೆಟ್‌ ನಷ್ಟಕ್ಕೆ ಈ ಜೋಡಿ 78 ರನ್‌ ಗಳಿಸಿತು. ಈ ನಡುವೆ 18 ರನ್‌ ಗಳಿಸಿ ಪ್ರಭಸಿಮ್ರಾನ್‌ ಔಟಾದರು. ನಂತರ ಕ್ರೀಸ್‌ಗೆ ಬಂದ ನಾಯಕ ಕ್ಯಾಪ್ಟನ್‌ ಶ್ರೇಯಸ್‌ ಅಯ್ಯರ್‌ ಕೂಡ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದರು. 36 ಬಾಲ್‌ಗೆ 59 ರನ್‌ ಗಳಿಸಿದರು. ಕೂಪರ್ ಕಾನೋಲಿ 38, ಸೂರ್ಯಾಂಶ್ ಶೆಡ್ಜ್ 21 ರನ್‌ ನೆರವಿನಿಂದ ತಂಡದ ಮೊತ್ತ 210ಕ್ಕೇರಿತು.

211 ರನ್‌ಗಳ ಗುರಿ ಬೆನ್ನತ್ತಿದ ಡೆಲ್ಲಿ ಆರಂಭದಲ್ಲಿ ಆಘಾತ ಅನುಭವಿಸಿತು. 5 ರನ್‌ ಇದ್ದಾಗ ಅಭಿಷೇಕ್ ಪೊರೆಲ್, ಕೆಎಲ್‌ ರಾಹುಲ್‌ 9 ರನ್‌ ಅಷ್ಟೇ ಗಳಿಸಿ ಔಟಾದರು. ತಂಡದ ಮೊತ್ತ 33 ಇದ್ದಾಗಲೇ ಪ್ರಮುಖ ಮೂರು ವಿಕೆಟ್‌ಗಳು ಬಿದ್ದಿದ್ದವು. ಸಂಕಷ್ಟದಲ್ಲಿದ್ದ ತಂಡಕ್ಕೆ ನಾಯಕ ಅಕ್ಷರ್‌ ಪಟೇಲ್‌ (56) ಮತ್ತು ಮಿಲ್ಲರ್‌ (51) ಆಸರೆಯಾದರು. ಇಬ್ಬರೂ ಅರ್ಧಶತಕ ಬಾರಿಸಿ ತಂಡದ ಗೆಲುವಿಗೆ ಆಸರೆಯಾದರು. ಕೊನೆ ಹಂತದಲ್ಲಿ ಅಶುತೋಷ್ ಶರ್ಮಾ 24, ಮಾಧವ್ ತಿವಾರಿ 18, ಔಕಿಬ್ ನಬಿ 10 ರನ್‌ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

[ad_2]

Source link publictv.in

Leave a Reply

Your email address will not be published. Required fields are marked *