Advertisement

ಎಣ್ಣೆ ಪ್ರಿಯರಿಗೆ ಶಾಕ್ ಕೊಟ್ಟ ಸರ್ಕಾರ

[ad_1]

ಕರ್ನಾಟಕ ಸರ್ಕಾರವು ಮೇ 11 ರಿಂದ ಹೊಸ ಅಬಕಾರಿ ನೀತಿಯನ್ನು ಜಾರಿಗೆ ತಂದಿದ್ದು, ಆಲ್ಕೋಹಾಲ್ ಪ್ರಮಾಣದ ಆಧಾರದ ಮೇಲೆ ತೆರಿಗೆ ವಿಧಿಸಿದ್ದು, ಸಾಮಾನ್ಯ ಬ್ರಾಂಡ್‌ನ ಮದ್ಯದ ಬೆಲೆ ಶೇ 30 ರಷ್ಟು ಹೆಚ್ಚಾಗುದ್ದು, ಪ್ರೀಮಿಯಂ ಮತ್ತು ವಿದೇಶಿ ಮದ್ಯದ ಬೆಲೆಯಲ್ಲಿ ಸಿಕ್ಕಾಪಟ್ಟೆ ಇಳಿಕೆಯಾಗಿದೆ.

ಹೌದು, ಕರ್ನಾಟಕ ಸರ್ಕಾರವು (Karnataka Govt) ಹೊಸ ಅಬಕಾರಿ ನೀತಿಯನ್ನು (New Excise Policy) ಮೇ 11ರಿಂದ ಅಧಿಕೃತವಾಗಿ ಜಾರಿಗೆ ತಂದಿದೆ. ಈ ಮೂಲಕ ಅನೇಕ ವರ್ಷಗಳಿಂದ ಜಾರಿಯಲ್ಲಿದ್ದ ಮದ್ಯದ ಮೇಲಿನ ತೆರಿಗೆ ಪದ್ದತಿಯನ್ನು ಕೈಬಿಟ್ಟು, ಇದೀಗ ಹೊಸದಾಗಿ ಅಬಕಾರಿ ನೀತಿಯನ್ನು ಸರ್ಕಾರ ಜಾರಿಗೆ ತಂದಿದೆ. ಹೊಸ ನಿಯಮದ ಪ್ರಕಾರ ಮದ್ಯದಲ್ಲಿರುವ ಆಲ್ಕೋಹಾಲ್ ಪ್ರಮಾಣಕ್ಕೆ ಅನುಗುಣವಾಗಿ ತೆರಿಗೆ ವಿಧಿಸುವ ಮಾದರಿಯನ್ನು ಅಳವಡಿಸಿಕೊಂಡಿದೆ. ಈರೀತಿಯ ನೀತಿಯನ್ನು ಅಳವಡಿಸಿಕೊಂಡಿರುವ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೂ ಕರ್ನಾಟಕ ಪಾತ್ರವಾಗಿದೆ

ಒಂದು ಕ್ವಾಟರ್‌ ಮೇಲೆ 15ರಿಂದ 25 ರೂಪಾಯಿವರೆಗೂ ಏರಿಕೆ ಆಗಿದೆ. ಇದು MRP ದರ ಮಾತ್ರವಾಗಿದ್ದು, ಬಾರ್‌ ಮತ್ತು ರೆಸ್ಟೋರೆಂಟ್‌ಗಳಲ್ಲಿ ಬೆಲೆ ವ್ಯತ್ಯಾಸ ಇರಲಿದೆ.

ಸ್ಲ್ಯಾಬ್ 1: ಸದ್ಯ 80 ರೂ. ಇರುವ ಒಂದು ಕ್ವಾಟರ್‌ ಬೆಲೆ 95 ರೂ. ಆಗಲಿದೆ.

banner

ಸ್ಲ್ಯಾಬ್ 2: ಸದ್ಯ 95 ರೂ. ಇರುವ ಒಂದು ಕ್ವಾಟರ್‌ ಬೆಲೆ 110 ರೂ. ಆಗಲಿದೆ.

ಸ್ಲ್ಯಾಬ್ 3: ಸದ್ಯ 120 ರೂ. ಇರುವ ಒಂದು ಕ್ವಾಟರ್‌ ಬೆಲೆ 135 ರೂ. ಆಗಲಿದೆ.

ಸ್ಲ್ಯಾಬ್ 4: ಸದ್ಯ 150 ರೂ. ಇರುವ ಒಂದು ಕ್ವಾಟರ್‌ ಬೆಲೆ 170 ರೂ. ಆಗಲಿದೆ.

ಕರ್ನಾಟಕ ಬ್ರೂವರ್ಸ್ ಮತ್ತು ಡಿಸ್ಟಿಲರ್ಸ್ ಅಸೋಸಿಯೇಷನ್ (KBDA) ಪ್ರಕಾರ, ಮೊದಲ ಐದು ಸ್ಲ್ಯಾಬ್‌ಗಳಲ್ಲಿರುವ ಹೆಚ್ಚುವರಿ ಅಬಕಾರಿ ಸುಂಕವನ್ನು (AED) ಶೇ 20-30 ರಷ್ಟು ಹೆಚ್ಚಿಸಲಾಗಿದೆ ಎಂದು ‘ಡೆಕ್ಕನ್ ಹೆರಾಲ್ಡ್’ ವರದಿ ತಿಳಿಸಿದೆ. ಕಳೆದ ವರ್ಷ 63 ರೂಪಾಯಿ ಇದ್ದ ಕ್ವಾರ್ಟರ್ ಬೆಲೆ, ಇತ್ತೀಚಿನ ಏರಿಕೆಯ ನಂತರ 80 ರೂಪಾಯಿಗೆ ತಲುಪಿತ್ತು. ಈಗ ಹೊಸ ನೀತಿಯಿಂದಾಗಿ ಅದು 105 ರೂಪಾಯಿಗೆ ಏರಿಕೆಯಾಗುವ ಲಕ್ಷಣಗಳಿವೆ.

ಶ್ರೀಮಂತರ ಮದ್ಯ ಅಗ್ಗ!!

ಶ್ರೀಮಂತರು ಬಳಸುವ ಅಥವಾ ವಿದೇಶಿ ಮೂಲದ ಪ್ರೀಮಿಯಂ ಬ್ರಾಂಡ್‌ಗಳಾದ ಡಿಯಾಜಿಯೊ, ಪೆರ್ನಾಡ್ ರಿಕಾರ್ಡ್ ಮತ್ತು ಯುನೈಟೆಡ್ ಸ್ಪಿರಿಟ್ಸ್‌ನಂತಹ ಕಂಪನಿಗಳ ಮದ್ಯದ ಬೆಲೆ ಶೇ 16 ರಿಂದ 20 ರಷ್ಟು ಇಳಿಕೆಯಾಗಲಿದೆ. 6 ರಿಂದ 8ನೇ ಸ್ಲ್ಯಾಬ್‌ನಲ್ಲಿ ಬರುವ ಈ ಪಾನೀಯಗಳ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ 10-15 ರಷ್ಟು ಕಡಿಮೆ ಮಾಡಲಾಗಿದೆ. ಇದರಿಂದ ಬಹುರಾಷ್ಟ್ರೀಯ ಕಂಪನಿಗಳಿಗೆ ದೊಡ್ಡ ಮಟ್ಟದ ಲಾಭವಾಗಲಿದೆ ಎಂಬ ಟೀಕೆಗಳು ಕೇಳಿಬರುತ್ತಿವೆ.



[ad_2]

Source link

Leave a Reply

Your email address will not be published. Required fields are marked *