Advertisement

ಶ್ರೀಲಂಕಾದಿಂದ 11 ಗಂಟೆ ಈಜಿ ಭಾರತದ ದಡ ಸೇರಿ ಇತಿಹಾಸ ಸೃಷ್ಟಿಸಿದ ಬೆಂಗಳೂರಿನ ಟೆಕ್ಕಿ ದಂಪತಿ

[ad_1]

Bengaluru Couple Swam Srilanka to india

ನವದೆಹಲಿ/ಬೆಂಗಳೂರು: ಶ್ರೀಲಂಕಾದಿಂದ 11 ಗಂಟೆ ಈಜಿಕೊಂಡು ಭಾರತದ ದಡ ಸೇರಿ ಬೆಂಗಳೂರಿನ ಟೆಕ್ಕಿ ದಂಪತಿ ಇತಿಹಾಸ ಸೃಷ್ಟಿಸಿದ್ದಾರೆ.

ಬೆಂಗಳೂರು ಮೂಲದ ಐಟಿ ಉದ್ಯಮಿಗಳಾದ ಡ್ಯಾನಿಶ್ ಅಬ್ದಿ ಮತ್ತು ವೃಶಾಲಿ ಪ್ರಸಾದೆ ಈ ದಾಖಲೆ ಸೃಷ್ಟಿಸಿದ್ದಾರೆ. ಇದನ್ನೂ ಓದಿ: ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿ ಇತಿಹಾಸ ಬರೆದ ಹಿಮಂತ ಬಿಸ್ವಾ ಶರ್ಮಾ

ಶ್ರೀಲಂಕಾದಿಂದ ರಾಮ ಸೇತು ಮಾರ್ಗದ ಮೂಲಕ 11 ಗಂಟೆ ಈಜಿಕೊಂಡು ಭಾರತದ ದಡ ಸೇರಿದ್ದಾರೆ. ಈಜಿಕೊಂಡು ಬರುವ ಕೆಲ ಕ್ಲಿಪ್‌ಗಳನ್ನು ದಂಪತಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಜೋರಾದ ಅಲೆಗಳು, ಗಾಳಿ ಹಾಗೂ ಅಲೆಗಳ ಏರಿಳಿತದ ವಿರುದ್ಧ ಸೆಣಸಾಡಿ ಭಾರತದ ದಡ ಸೇರಿರುವುದಾಗಿ ತಿಳಿಸಿದ್ದಾರೆ.

ಮೇ 7ರಂದು ಬೆಳಿಗ್ಗೆ 4:30ರ ಸುಮಾರಿಗೆ ಶ್ರೀಲಂಕಾದ ತಲೈಮನ್ನಾರ್‌ನಿಂದ ಹೊರಟ ದಂಪತಿ ರಾಮ ಸೇತು ಮಾರ್ಗವಾಗಿ 32 ಕಿ.ಮೀ ಈಜಿಕೊಂಡು ಮಧ್ಯಾಹ್ನ ಸುಮಾರು 3:15ಕ್ಕೆ ತಮಿಳುನಾಡಿನ ಧನುಷ್ಕೋಡಿಯನ್ನು ತಲುಪಿದ್ದಾರೆ. ಒಟ್ಟು 10 ಗಂಟೆ 45 ನಿಮಿಷ ಕಾಲ ಪ್ರಯಾಣಿಸಿ ರಾಮ ಸೇತು ಮಾರ್ಗದಲ್ಲಿ ಶ್ರೀಲಂಕಾದಿಂದ ಭಾರತಕ್ಕೆ ಈಜಿಕೊಂಡು ಬಂದ ಮೊದಲ ದಂಪತಿ ಎಂಬ ದಾಖಲೆ ಸೃಷ್ಟಿಸಿದ್ದಾರೆ.

ಈಜಿಕೊಂಡು ಬರುವ ಸಮಯದಲ್ಲಿ ಕಟ್ಟುನಿಟ್ಟಿನ ಸುರಕ್ಷತಾ ಮೇಲ್ವಿಚಾರಣೆ ನಡೆಸಲಾಗಿದೆ. ಈಜುಗಾರರೊಂದಿಗೆ ದೋಣಿಗಳು, ಅರೆವೈದ್ಯರು ಹಾಗೂ ಭಾರತೀಯ ಕರಾವಳಿ ಕಾವಲು ಪಡೆಯ ಸಿಬ್ಬಂದಿ ಇದ್ದರು.

ದಂಪತಿ ಸಾಧನೆಗೆ ಆನ್‌ಲೈನ್‌ನಲ್ಲಿ ಭಾರೀ ಪ್ರಶಂಶೆ ವ್ಯಕ್ತವಾಗಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ದಂಪತಿಗಳ ಸಹನೆ, ಶಿಸ್ತು ಮತ್ತು ತಂಡದ ಕೆಲಸವನ್ನು ಶ್ಲಾಘಿಸಿದ್ದಾರೆ. ನಾಲ್ಕು ವರ್ಷಗಳ ಹಿಂದಷ್ಟೇ ಈಜು ಕಲಿತಿದ್ದ ದಂಪತಿ ಇಬ್ಬರೂ ಸಾಫ್ಟ್‌ವೇರ್‌ ವೃತ್ತಿಪರರಾಗಿದ್ದಾರೆ. ಇದೇ ಕಾರಣಕ್ಕೆ ಈ ಸಾಧನೆ ಇನ್ನಷ್ಟು ವಿಶೇಷವಾಗಿ ಕಾಣಿಕೊಂಡಿದೆ.ಇದನ್ನೂ ಓದಿ: ಗಂಡನನ್ನು ಅನ್‌ಫಾಲೋ ಮಾಡಿದ ‘ನಾಗಿಣಿ’ ಮೌನಿ ರಾಯ್ – ಡಿವೋರ್ಸ್ ಹಾದಿಯಲ್ಲಿ ಸ್ಟಾರ್ ಜೋಡಿ?



[ad_2]

Source link publictv.in

Leave a Reply

Your email address will not be published. Required fields are marked *