Advertisement

Google Down – ಭಾರತೀಯ ಬಳಕೆದಾರರಿಗೆ ತೊಂದರೆ

[ad_1]

google search

ನವದೆಹಲಿ: ವಿಶ್ವದ ಅತಿದೊಡ್ಡ ಸರ್ಚ್ ಎಂಜಿನ್ ಗೂಗಲ್ (Google) ಮಂಗಳವಾರ ಭಾರತ (India) ಸೇರಿದಂತೆ ಕೆಲ ದೇಶಗಳಲ್ಲಿ ತಾಂತ್ರಿಕ ಸಮಸ್ಯೆಯನ್ನು ಎದುರಿಸಿತು.

ಬೆಳಿಗ್ಗೆ 9:48ರಿಂದ ಗೂಗಲ್ ಸೇವೆಗಳಲ್ಲಿ ವ್ಯತ್ಯಯ ಕಾಣಿಸಿಕೊಂಡಿದ್ದು, ದೇಶದ ಹಲವು ಭಾಗಗಳ ಬಳಕೆದಾರರು ಗೂಗಲ್ ಸೇವೆಗಳನ್ನು ಬಳಸಲು ಸಾಧ್ಯವಾಗುತ್ತಿಲ್ಲ ಎಂದು ದೂರು ನೀಡಿದರು.

ಸೇವಾ ಸ್ಥಗಿತಗಳನ್ನು ಟ್ರ‍್ಯಾಕ್ ಮಾಡುವ ಡೌನ್‌ಡೆಕ್ಟರ್ ಪ್ರಕಾರ, ಬೆಳಿಗ್ಗೆ 10:23ರ ವೇಳೆಗೆ 3,665ಕ್ಕೂ ಹೆಚ್ಚು ಬಳಕೆದಾರರು ಸಮಸ್ಯೆ ಬಗ್ಗೆ ವರದಿ ಮಾಡಿದ್ದಾರೆ. ಗೂಗಲ್ ಸರ್ಚ್ ಸೇರಿದಂತೆ ಹಲವು ಗೂಗಲ್ ಸೇವೆಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಬಳಕೆದಾರರು ತಿಳಿಸಿದ್ದಾರೆ.

ಸದ್ಯ ಸ್ಥಗಿತಕ್ಕೆ ನಿಖರ ಕಾರಣ ಏನು ಎಂಬುದು ತಿಳಿದುಬಂದಿಲ್ಲ. ಆದರೆ ಗೂಗಲ್ ಎಂಜಿನಿಯರ್‌ಗಳು ಸಮಸ್ಯೆ ಸರಿಪಡಿಸಲು ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಬೆಂಗಳೂರಿನ ಗ್ಯಾಲಕ್ಸ್ ಐ ಅಭಿವೃದ್ಧಿ ಪಡಿಸಿದ ವಿಶ್ವದ ಮೊದಲ OptoSAR ಉಪಗ್ರಹ ಉಡಾವಣೆ ಯಶಸ್ವಿ – ಪಾಕಿಸ್ತಾನ, ಚೀನಾಗೆ ತಲೆನೋವು ಯಾಕೆ?

ಗೂಗಲ್ ಸೇವೆಗಳು ಡೌನ್ ಆಗಿದೆಯೇ ಎಂದು ತಿಳಿದುಕೊಳ್ಳಲು ಬಳಕೆದಾರರು Downdetector ವೆಬ್‌ಸೈಟ್ ಅಥವಾ ಗೂಗಲ್‌ನ ಅಧಿಕೃತ ಸ್ಟೇಟಸ್ ಡ್ಯಾಶ್‌ಬೋರ್ಡ್ ಪರಿಶೀಲಿಸಬಹುದು. ಅಲ್ಲದೆ ಸಾಮಾಜಿಕ ಜಾಲತಾಣ ಘಿನಲ್ಲೂ ಹಲವರು ಸಮಸ್ಯೆ ಕುರಿತು ಪೋಸ್ಟ್ ಮಾಡುತ್ತಿದ್ದಾರೆ.

ಗೂಗಲ್ ಸೇವೆಗಳಲ್ಲಿ ವ್ಯತ್ಯಯ ಉಂಟಾದಾಗ ಬಳಕೆದಾರರು ತಾತ್ಕಾಲಿಕವಾಗಿ ಬಿಂಗ್, ಡಕ್‌ಡಕ್‌ಗೋ ಅಥವಾ ಯಾಹೋ ಸರ್ಚ್ ಎಂಜಿನ್‌ಗಳನ್ನು ಬಳಸಬಹುದು. ಸಾಮಾನ್ಯವಾಗಿ ಇಂತಹ ತಾಂತ್ರಿಕ ಸಮಸ್ಯೆಗಳು ಕೆಲ ನಿಮಿಷಗಳಿಂದ ಕೆಲವು ಗಂಟೆಗಳೊಳಗೆ ಸರಿಯಾಗುತ್ತದೆ.

[ad_2]

Source link publictv.in

Leave a Reply

Your email address will not be published. Required fields are marked *