Advertisement

ಐಪಿಎಲ್ ಬೆಟ್ಟಿಂಗ್‌ಗಾಗಿ ಮೈತುಂಬ ಸಾಲ – ವಿಡಿಯೋ ಮಾಡಿಟ್ಟು ಯುವಕ ನೇಣಿಗೆ ಶರಣು

[ad_1]

Nelamangala Suicide

ನೆಲಮಂಗಲ: ಐಪಿಎಲ್ ಬೆಟ್ಟಿಂಗ್‌ಗಾಗಿ (IPL Betting) ಮೈತುಂಬ ಸಾಲ ಮಾಡಿಕೊಂಡು ತೀರಿಸೋಕೆ ಆಗದೇ ಯುವಕನೋರ್ವ ನೇಣಿಗೆ ಶರಣಾಗಿರುವ ಘಟನೆ ನೆಲಮಂಗಲ (Nelamangala) ತಾಲೂಕಿನ ಅರಿಶಿನಕುಂಟೆ ಗ್ರಾಮದಲ್ಲಿ ನಡೆದಿದೆ.

ಮೂಲತಃ ತಮಿಳುನಾಡಿನ ಸಿಂಗಸದನಪಲ್ಲಿ ಗ್ರಾಮದ ಶಿವಕುಮಾರ್ (28) ಮೃತ ಯುವಕ. ಕಳೆದ ಆರು ವರ್ಷದಿಂದ ನೆಲಮಂಗಲಕ್ಕೆ ಬಂದು ಕಾರ್ ಗ್ಯಾರೇಜ್‌ನಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಇದನ್ನೂ ಓದಿ: Google Down – ಭಾರತೀಯ ಬಳಕೆದಾರರಿಗೆ ತೊಂದರೆ

ಎರಡು ದಿನಗಳ ಹಿಂದೆ ತನ್ನ ರೂಮ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅದಕ್ಕೂ ಮುನ್ನ ಸೆಲ್ಫಿ ವಿಡಿಯೋ ಮಾಡಿಟ್ಟು, ಬಳಿಕ ನೇಣಿಗೆ ಶರಣಾಗಿದ್ದಾನೆ. ನನ್ನ ಸಾವಿಗೆ ನಾನೇ ಕಾರಣ, ಬೇರೆ ಯಾರೂ ಅಲ್ಲ. ಮೈತುಂಬ ಸಾಲ ಮಾಡಿಕೊಂಡು ನನಗೆ ಬದುಕಲು ಇಷ್ಟ ಇಲ್ಲ. ನನ್ನ ಸ್ನೇಹಿತ ನನಗೆ ತುಂಬಾ ಹೆಲ್ಪ್ ಮಾಡಿದ್ದಾನೆ. ನಾನೇ ಪ್ಲಾö್ಯನ್ ಮಾಡಿ ನೇಣಿಗೆ ಶರಣಾಗುತ್ತಿದ್ದೇನೆ ಎಂದು ಹೇಳಿದ್ದಾನೆ.

ಸದ್ಯ ಈ ಸಂಬಂಧ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಪ್ರಧಾನಿಗೆ ಭದ್ರತೆ ಕೊಡಲು ಕಾಂಗ್ರೆಸ್ ವಿಫಲ – ರಾಜ್ಯ ತಲೆ ತಗ್ಗಿಸುವ ವಿಷಯ: ಅರಗ ಜ್ಞಾನೇಂದ್ರ ಕಿಡಿ


[ad_2]

Source link publictv.in

Leave a Reply

Your email address will not be published. Required fields are marked *