Advertisement

ಬೆಂಗಳೂರು| ಎಲೆಕ್ಟ್ರಿಕ್‌ ಬೈಕ್‌ ಬ್ಯಾಟರಿ ಬ್ಲಾಸ್ಟ್‌ ಆಗಿ ವ್ಯಕ್ತಿ ಸಾವು

[ad_1]

electric bike battery blast case

ಬೆಂಗಳೂರು: ಎಲೆಕ್ಟ್ರಿಕಲ್‌ ಬೈಕ್‌ ಬ್ಯಾಟರಿ ಬ್ಲಾಸ್ಟ್‌ ಆಗಿ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯ ಮರ್ಸಿ ಟೌನ್‌ನಲ್ಲಿ ನಡೆದಿದೆ.

ಲೂಥ್‌ ನಾಥನ್‌ (62) ಮೃತ ವ್ಯಕ್ತಿ. ಮನೆಯಲ್ಲಿ ರಾತ್ರಿ ಬೈಕನ್ನು ಚಾರ್ಜ್‌ಗೆ ಹಾಕಿ, ವ್ಯಕ್ತಿ ಹಾಲ್‌ನಲ್ಲಿ ಮಲಗಿದ್ದ. ಈ ವೇಳೆ ಬ್ಯಾಟರಿ ಸ್ಫೋಟಗೊಂಡು ಮೃತಪಟ್ಟಿದ್ದಾನೆ.

ಮೃತ ವ್ಯಕ್ತಿ ಆಟೋ ಚಾಲಕನಾಗಿ ಕೆಲಸ ಮಾಡ್ತಿದ್ದರು. ಘಟನೆ ದಿನ ಮನೆಯ ಗ್ರೌಂಡ್ ಫ್ಲೋರ್‌ನಲ್ಲಿ ಒಬ್ಬರೇ ಮಲಗಿದ್ದರು. ಫಸ್ಟ್ ಫ್ಲೋರ್‌ನಲ್ಲಿ ಮಕ್ಕಳು‌ ವಾಸವಾಗಿದ್ದರು. ಮುಂಜಾನೆ 3:15 ರ ವೇಳೆ ಬ್ಯಾಟರಿ ಬ್ಲಾಸ್ಟ್ ಆಗಿದೆ.

ಎಲೆಕ್ಟ್ರಿಕ್ ಬೈಕನ್ನು ಚಾರ್ಜ್‌ಗೆ ಹಾಕಿ ಲೂಥ್‌ ನಾಥನ್ ಪಕ್ಕದಲ್ಲೇ ಮಲಗಿದ್ದರು. ಬ್ಲಾಸ್ಟ್ ಆಗಿ ಮನೆ ಸಂಪೂರ್ಣ ಸುಟ್ಟು ಕರಕಲಾಗಿದೆ. ಸುಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಬ್ಯಾಟರಿ ಬ್ಲಾಸ್ಟ್ ಆದ ನಂತರ ಮನೆ ಸಂಪೂರ್ಣ ಹೊತ್ತಿ ಉರಿದಿದೆ. ಈ ಸಂಬಂಧ ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

[ad_2]

Source link publictv.in

Leave a Reply

Your email address will not be published. Required fields are marked *