Advertisement

86 ರನ್‌ಗೆ ಎಸ್‌ಆರ್‌ಹೆಚ್‌ ಆಲೌಟ್‌; ಟೈಟನ್ಸ್‌ ಬೌಲರ್‌ಗಳ ಪರಾಕ್ರಮಕ್ಕೆ ಭರ್ಜರಿ ಜಯ – ಪ್ಲೇಆಫ್‌ಗೆ ಇನ್ನೊಂದೇ ಹೆಜ್ಜೆ

[ad_1]

Kagiso Rabada and Mohammed Siraj 1

ಹೈದರಾಬಾದ್: ಗುಜರಾತ್‌ ಟೈಟನ್ಸ್‌ ಬೌಲರ್‌ಗಳ ಪರಾಕ್ರಮಕ್ಕೆ ಸನ್‌ರೈಸರ್ಸ್‌ ಹೈದರಾಬಾದ್‌ ಧೂಳೀಪಟವಾಗಿದೆ. ಕೇವಲ 86 ರನ್‌ಗಳಿಗೆ ಎಸ್‌ಆರ್‌ಹೆಚ್‌ ಆಲೌಟ್‌ ಆಗಿದ್ದು, ಜಿಟಿ 82 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಆ ಮೂಲಕ ಪ್ಲೇಆಫ್‌ಗೆ ಇನ್ನೊಂದೇ ಹೆಜ್ಜೆ ಬಾಕಿ ಇದೆ.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಟೈಟನ್ಸ್‌ 20 ಓವರ್‌ಗಳಿಗೆ 5 ವಿಕೆಟ್‌ ಕಳೆದುಕೊಂಡು 168 ರನ್‌ ಗಳಿಸಿತು. ಗುರಿ ಬೆನ್ನತ್ತಿದ ಹೈದರಾಬಾದ್‌ ಬ್ಯಾಟಿಂಗ್‌ ವೈಫಲ್ಯದಿಂದ 86 ರನ್‌ಗಳಿಗೆ ಆಲೌಟ್‌ ಆಯಿತು. ಎಸ್‌ಆರ್‌ಹೆಚ್‌ ಮಣಿಸಿದ ಗಿಲ್‌ ಪಡೆ ಪಾಯಿಂಟ್‌ ಪಟ್ಟಿಯಲ್ಲಿ ನಂ.1 ಸ್ಥಾನಕ್ಕೇರಿದೆ. ಆರ್‌ಸಿಬಿ 2ನೇ ಸ್ಥಾನಕ್ಕೆ ಇಳಿದಿದೆ.

ಜಿಟಿ ಬ್ಯಾಟಿಂಗ್‌ನಲ್ಲಿ ಆರಂಭಿಕ ಆಘಾತ ಎದುರಿಸಿತು. ನಾಯಕ ಶುಭ್ಮನ್ ಗಿಲ್ ಮತ್ತು ಜೋಸ್ ಬಟ್ಲರ್ ಅವರು ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡರು. ಆದಾಗ್ಯೂ, ಸಾಯಿ ಸುದರ್ಶನ್ (61) ಮತ್ತು ವಾಷಿಂಗ್ಟನ್ ಸುಂದರ್ (50) ಅರ್ಧಶತಕಗಳ ನೆರವಿನಿಂದ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 168 ರನ್ ಗಳಿಸಲು ಸಾಧ್ಯವಾಯಿತು.

169 ರನ್‌ ಗುರಿ ಬೆನ್ನತ್ತಿದ SRH ನ ಸ್ಟಾರ್ ಬ್ಯಾಟಿಂಗ್ ಲೈನ್ ಅಪ್ ಶೋಚನೀಯವಾಗಿ ವಿಫಲವಾಯಿತು. ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ಇಶಾನ್ ಕಿಶನ್ ಮತ್ತು ಹೆನ್ರಿಚ್ ಕ್ಲಾಸೆನ್ ಅವರಂತಹ ಘಟಾನುಘಟಿ ಬ್ಯಾಟರ್‌ಗಳು ನಿರಾಶಾದಾಯಕರಾಗಿದ್ದರು. ಪರಿಣಾಮ ತಂಡ 86 ರನ್‌ಗಳಿಗೆ ಆಲೌಟ್‌ ಆಯಿತು.

ಪಂದ್ಯದಲ್ಲಿ ಜಿಟಿ ಬೌಲರ್‌ಗಳು ಪರಾಕ್ರಮ ಮೆರೆದರು. ಕಗಿಸೊ ರಬಾಡ ಮತ್ತು ಜೇಸನ್‌ ಹೋಲ್ಡರ್‌ ತಲಾ ಮೂರು ವಿಕೆಟ್‌ ಕಿತ್ತರು. ಪ್ರಸಿದ್ಧ ಕೃಷ್ಣ 2 ಹಾಗೂ ಮೊಹಮ್ಮದ್ ಸಿರಾಜ್, ರಶೀದ್‌ ಖಾನ್‌ ತಲಾ 1 ವಿಕೆಟ್‌ ಪಡೆದರು.

[ad_2]

Source link publictv.in

Leave a Reply

Your email address will not be published. Required fields are marked *