Advertisement

ಜ್ಯೋತಿಷಿಗೆ ಸರ್ಕಾರಿ ಹುದ್ದೆ – ದಳಪತಿ ವಿಜಯ್‌ ʻಸರ್ಕಾರ್‌ʼ ನಲ್ಲಿ ಬಿರುಕು, ಮಿತ್ರಪಕ್ಷಗಳ ಅಸಮಾಧಾನ! | Public TV

[ad_1]

ಚೆನ್ನೈ: ಜ್ಯೋತಿಷಿ ರಿಕಿ ರಾಧನ್‌ ಪಂಡಿತ್‌ ವೆಟ್ರಿವೇಲ್‌ ಅವರನ್ನು ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯ ಅಧಿಕಾರಿ (OSD) ಆಗಿ ನೇಮಕ ಮಾಡಿಕೊಂಡ ಸಿಎಂ ಜೋಸೆಫ್‌ ವಿಜಯ್‌ (Thalapathy vijay) ಅವರ ಕ್ರಮ ಟಿವಿಕೆ ಮಿತ್ರ ಪಕ್ಷಗಳಲ್ಲಿ ಅಸಮಾಧಾನ ಮೂಡಲು ಕಾರಣವಾಗಿದೆ.

ಸರ್ಕಾರಿ ವ್ಯವಸ್ಥೆಯಲ್ಲಿ ಜ್ಯೋತಿಷಿಗೆ (Astrologer) ಔರಪಚಾರಿಕ ಸಲಹಾ ಹುದ್ದೆಯನ್ನ ಏಕೆ ನೀಡಲಾಗಿದೆ ಎಂದು ತಮಿಳಗ ವೆಟ್ರಿ ಕಳಗಂ (TVK) ಬೆಂಬಲಿತ ಕೆಲ ಪಕ್ಷದ ನಾಯಕರು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಈ ನೇಮಕಾತಿ ಸ್ವೀಕಾರಾರ್ಹವಲ್ಲ ಎಂದು ಬೇಸರ ಹೊರಹಾಕಿವೆ. ಇದನ್ನೂ ಓದಿ: ದಳಪತಿ `ವಿಜಯ’ದ ಭವಿಷ್ಯ ನುಡಿದಿದ್ದ ಜ್ಯೋತಿಷಿ ಈಗ ಸಿಎಂ ವಿಶೇಷ ಕರ್ತವ್ಯಾಧಿಕಾರಿ

ಕಾಂಗ್ರೆಸ್‌ ಸಂಸದ ಶಶಿಕಾಂತ್‌ ಸೆಂಥಿಲ್‌, ಅಂತಹ ಪಾತ್ರಗಳಲ್ಲಿ ಮೊದಲ ಅಗ್ರಸ್ಥಾನ ಏಕೆ ನೀಡಬೇಕು? ಜೋತಿಷಿಗೆ OSD ಸ್ಥಾನ ಏಕೆ ಕೊಡಬೇಕು? ಈಗ ನನ್ನನ್ನ ಸೋಲಿಸುತ್ತೇನೆ ಎಂದು ಯಾರಾದ್ರೂ ವಿವರಿಸಬಹುದು. ಆದ ಮಾತ್ರಕ್ಕೆ ಸರ್ಕಾರಿ ಹುದ್ದೆ ನೀಡಬಹುದೇ? ಎಂದು ಪ್ರಶ್ನೆ ಮಾಡಿದ್ದಾರೆ.

Vijay Oath Taking

ಇನ್ನೂ ತಮಿಳುನಾಡು ಕಾಂಗ್ರೆಸ್‌ ಘಟಕದ ಪ್ರಧಾನ ಕಾರ್ಯದರ್ಶಿ ಡಿ. ರವಿಕುಮಾರ್ ಕೂಡ ಪ್ರತಿಕ್ರಿಯಿಸಿ, ಈ ನೇಮಕಾತಿ ಜಾತ್ಯತೀತ ಸರ್ಕಾರದಲ್ಲಿ ಸ್ವೀಕಾರಾರ್ಹವಲ್ಲ. ಗೌರವಾನ್ವಿತ ಮುಖ್ಯಮಂತ್ರಿಗಳು ಇದನ್ನು ಮರುಪರಿಶೀಲಿಸಬೇಕು. ವೈಜ್ಞಾನಿಕ ದೃಷ್ಟಿಕೋನ ಬೆಳೆಸುವುದು ಸರ್ಕಾರದ ಕರ್ತವ್ಯ ಎಂದಿದ್ದಾರೆ. ಇದನ್ನೂ ಓದಿ: ವಿಜಯ್‌ ಪಕ್ಷಕ್ಕೆ ಬೆಂಬಲ ಘೋಷಿಸಿದ ಎಐಎಡಿಎಂಕೆಯ ಷಣ್ಮುಗಂ ಬಣ

ಸಿಪಿಎಂನ ಕೇಂದ್ರ ಸಮಿತಿ ಸದಸ್ಯ ಷಣ್ಮುಗಂ ಪಿ ಕೂಡ ದಳಪತಿ ವಿಜಯ್‌ ಅವರ ಈ ಕ್ರಮವನ್ನು ಟೀಕಿಸಿದ್ದಾರೆ. ಸರ್ಕಾರಿ ಹುದ್ದೆಗಳನ್ನು ಮೂಢನಂಬಿಕೆ ಉತ್ತೇಜಿಸುವ ಅಥವಾ ವೈಜ್ಞಾನಿಕ ಚಿಂತನೆ ದುರ್ಬಲಗೊಳಿಸುವ ರೀತಿಯಲ್ಲಿ ಬಳಸಬಾರದು ಎಂದು ತಿಳಿವಳಿಕೆ ಹೇಳಿದ್ದಾರೆ. ಇದನ್ನೂ ಓದಿ: ಕ್ಯಾಬಿನೆಟ್‌ನಲ್ಲಿ ಕನಿಷ್ಠ ಐದು ಪರಿಷತ್ ಸದಸ್ಯರಿಗೆ ಅವಕಾಶ ನೀಡಿ – ರಣದೀಪ್ ಸುರ್ಜೆವಾಲಾಗೆ MLCಗಳಿಂದ ಮನವಿ

[ad_2]

Source link publictv.in

Leave a Reply

Your email address will not be published. Required fields are marked *