Advertisement

9 ವರ್ಷಗಳ ಬಳಿಕ ಚೀನಾಕ್ಕೆ ಟ್ರಂಪ್‌ ಭೇಟಿ – ತೈವಾನ್ ಸಮಸ್ಯೆ, ಜಾಗತಿಕ ಇಂಧನ ಬಿಕ್ಕಟ್ಟು ಕುರಿತು ಚರ್ಚೆ

[ad_1]

Trump 2

ಬೀಜಿಂಗ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 9 ವರ್ಷಗಳ ನಂತರ ಚೀನಾಕ್ಕೆ ಭೇಟಿ ನೀಡಿದ್ದಾರೆ. 2 ದಿನಗಳ ಪ್ರವಾಸಕ್ಕೆ ಬೀಜಿಂಗ್ ಬಂದ ಟ್ರಂಪ್‌ಗೆ ಸಾಂಪ್ರದಾಯಿಕ ಸ್ವಾಗತ ಸಿಕ್ಕಿದೆ.

ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಜೊತೆ ವ್ಯಾಪಾರ, ತೈವಾನ್ ಸಮಸ್ಯೆ, ಜಾಗತಿಕ ಇಂಧನ ಬಿಕ್ಕಟ್ಟು, ಪಶ್ಚಿಮ ಏಷ್ಯಾ ಸಂಘರ್ಷದ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಇದನ್ನೂ ಓದಿ: ಕಾಮಿಕೇಜ್‌ ಡಾಲ್ಫಿನ್‌ ರಹಸ್ಯವೇನು? ಹಾರ್ಮುಜ್‌ನಲ್ಲಿ ಮರುಕಳಿಸುತ್ತಾ 42 ವರ್ಷಗಳ ಹಿಂದಿನ ʻಟ್ಯಾಂಕರ್‌ ಯುದ್ಧʼ?

Trump

ಹಾರ್ಮುಜ್ ಜಲಸಂಧಿ ಉದ್ವಿಗ್ನತೆ ಮತ್ತು ಸುಂಕಗಳ ಕುರಿತು ಪ್ರಮುಖ ವ್ಯಾಪಾರ ಒಪ್ಪಂದದ ನಿರೀಕ್ಷೆಯಿದೆ. ಇತ್ತ, ಲೆಬನಾನ್ ಮೇಲೆ ಇಸ್ರೇಲ್ ಮತ್ತೆ ದಾಳಿ ಮುಂದುವರಿಸಿದೆ. ದಕ್ಷಿಣ ಲೆಬನಾನ್‌ಗೆ ಸಂಪರ್ಕಿಸುವ ಪ್ರಮುಖ ಹೆದ್ದಾರಿಯಲ್ಲಿ ಕಾರುಗಳ ಮೇಲೆ ಇಸ್ರೇಲ್ ಡ್ರೋನ್ ದಾಳಿ ನಡೆಸಿದೆ. ಇದನ್ನೂ ಓದಿ: ಪಾಕ್‌ನಿಂದ ಡಬಲ್‌ ಗೇಮ್‌ – ಇರಾನ್ ಯುದ್ಧ ವಿಮಾನಗಳಿಗೆ ರಹಸ್ಯ ಆಶ್ರಯ!

ಇಬ್ಬರು ಮಕ್ಕಳು ಸೇರಿದಂತೆ ಕನಿಷ್ಠ 8 ಜನರು ಸಾವನ್ನಪ್ಪಿದ್ದಾರೆ. ಅಮೆರಿಕ-ಇರಾನ್ ಯುದ್ಧ ಕೊನೆಗೊಳಿಸಲು ಮಧ್ಯಸ್ಥಿಕೆ ವಹಿಸುತ್ತಿರುವ ಪಾಕಿಸ್ತಾನವು, ಇರಾನಿನ ಸೈನ್ಯದ ವಿಮಾನಗಳನ್ನ ತನ್ನ ವಾಯುನೆಲೆಗಳಲ್ಲಿ ನಿಲ್ಲಿಸಲು ಅನುಮತಿ ನೀಡಿದೆ. ಪಾಕಿಸ್ತಾನದ ವಾಯುನೆಲೆಯಲ್ಲಿ ಇರಾನ್ ಯುದ್ಧ ವಿಮಾನಗಳಿಗೆ ಆಶ್ರಯ ನೀಡಲಾಗಿದೆ. ಇದು ಅಮೆರಿಕದ ವಾಯುದಾಳಿಗಳಿಂದ ರಕ್ಷಿಸುವ ಉದ್ದೇಶದಿಂದಾಗಿ ಈ ಕೆಲಸ ಮಾಡಿದೆ ಎಂದು ಹೇಳಲಾಗ್ತಿದೆ.

[ad_2]

Source link publictv.in

Leave a Reply

Your email address will not be published. Required fields are marked *